ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಕೊಹ್ಲಿ-ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್, ಜೊತೆಯಾಟದಲ್ಲಿಯೂ ದಾಖಲೆ

ನಿನ್ನೆ ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಚ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಜೊತೆಯಾಟದಲ್ಲಿಯೂ ದಾಖಲೆ ಬರೆದಿದೆ.
ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜೋಡಿ
ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜೋಡಿ

ಚೆನ್ನೈ: ನಿನ್ನೆ ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಚ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಜೊತೆಯಾಟದಲ್ಲಿಯೂ ದಾಖಲೆ ಬರೆದಿದೆ.

ಹೌದು.. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆಸ್ಚ್ರೇಲಿಯಾ ನೀಡಿದ 200ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭದಲ್ಲಿಯೇ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ತಮ್ಮ ಸಮಯೋಚಿತ ಆಟದ ಮೂಲಕ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

Lowest scores at the start of a 100+ 4th wkt p'ship
2/3 Ind vs Aus Chennai 2023 (118* by Kohli - Rahul)
3/4 Ind v Zim Adelaide 2004 (133 by Dravid - Laxman)
4/3 Ind v Aus Sydney 2019 (137 by Rohit - Dhoni)

ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಸಂಕಷ್ಟಕ್ಕೆ ಬಿತ್ತು. 200 ರನ್​ಗಳ ಗುರಿಯನ್ನು ಬೆನ್ನಟ್ಟು ಹೊರಟ ಭಾರತ ಹೀನಾಯ ಪರಿಸ್ಥಿತಿ ಎದುರಿಸುವುದನ್ನು ನೋಡಿದ ಭಾರತ ತಂಡದ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಬಳಿಕ ಕೊಹ್ಲಿ ಮತ್ತು ರಾಹುಲ್ ಕ್ರಮವಾಗಿ 72 ಮತ್ತು 75 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ರಾಹುಲ್​ ಕೊನೇ ತನಕ ಹೋರಾಟ ನಡೆಸಿ 91 ರನ್​ ಗಳಿಸಿ ಗೆಲುವು ತಂದುಕೊಟ್ಟರೆ, ವಿರಾಟ್​ 85 ರನ್​ ಬಾರಿಸಿ ತಮ್ಮ ಜವಾಬ್ದಾರಿಯನ್ನು ಮೆರೆದರು.

ಈ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಹಾಗೂ ರಾಹುಲ್ ಜೋಡಿ ನಾಲ್ಕನೇ ವಿಕೆಟ್​ 165 ರನ್​ಗಳ ಜತೆಯಾಟ ನೀಡಿದ್ದರು. ಈ ಮೂಲಕ ಈ ಸ್ಟಾರ್​ ಬ್ಯಾಟರ್​ಗಳು 1996ರ ವಿಶ್ವಕಪ್​​ನಲ್ಲಿ ನವಜೋತ್ ಸಿಧು ಹಾಗೂ ವಿನೋದ್ ಕಾಂಬ್ಳಿ ಜೋಡಿ ಪೇರಿಸಿದ್ದ 142 ರನ್​ಗಳ ದಾಖಲೆಯನ್ನು ಮುರಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳ ಜೊತೆಯಾಟ ದಾಖಲಾಗಿರುವುದು ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಹೆಸರಿನಲ್ಲಿ. 2015ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 196ರನ್ ಕಲೆಹಾಕಿತ್ತು. 

Highest partnerships for 4th wkts or below for India in WC
196* - MS Dhoni & SK Raina vs ZIM, Auckland, 2015
165 - V Kohli & KL Rahul vs AUS, Chennai, 2023*
142 - VG Kambli & NS Sidhu vs ZIM, Kanpur, 1996
141 - A Jadeja & RR Singh vs AUS, The Oval, 1999

ವಿಶ್ವಕಪ್ ನಲ್ಲಿ ಆಸ್ಚ್ರೇಲಿಯಾ ವಿರುದ್ಧ ಗರಿಷ್ಠ ರನ್ ಜೊತೆಯಾಟ
ಅಂತೆಯೇ ಇದೇ ಅಮೋಘ ಜೊತೆಯಾಟದ ಮೂಲಕ ಕೊಹ್ಲಿ-ರಾಹುಲ್ ಜೋಡಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಅಸ್ಚ್ರೇಲಿಯಾ ವಿರುದ್ಧ ಭಾರತದ ಪರ ದಾಖಲಾದ ಮೊದಲ ಗರಿಷ್ಟ ರನ್ ಜೊತೆಯಾಟ ಕೂಡ ಇದೇ ಆಗಿದೆ. ಈ ಹಿಂದೆ 1999ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ಅಜಯ್ ಜಡೇಜಾ ಮತ್ತು ಆರ್ ಆರ್ ಸಿಂಗ್ ಜೋಡಿ 141ರನ್ ಗಳನ್ನು ಕಲೆಹಾಕಿತ್ತು. ಇದು ಈ ವರೆಗಿನ ಆಸ್ಚ್ರೇಲಿಯಾ ವಿರುದ್ಧದ ಭಾರತದ ಪರ ದಾಖಲಾಗಿದ್ದ ಗರಿಷ್ಟ ರನ್ ಜೊತೆಯಾಟವಾಗಿತ್ತು. ಈ ದಾಖಲೆಯನ್ನೂ ಕೊಹ್ಲಿ-ರಾಹುಲ್ ಜೋಡಿ ಮುರಿದಿದೆ.

100+ partnerships for India vs Australia in World Cup:
165 - V Kohli & KL Rahul, Chennai, 2023
141 - A Jadeja & RR Singh, The Oval, 1999
127 - S Dhawan & RG Sharma, The Oval, 2019

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com