ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಎಂಎಸ್ ಧೋನಿ ದಾಖಲೆ ಮುರಿದ ಕೆಎಲ್ ರಾಹುಲ್

ಭಾನುವಾರ ನಡೆದ ಆಸೀಸ್ ವಿರುದ್ಧದ ವಿಶ್ವಕಪ್​ನ(icc world cup 2023) ಲೀಗ್​ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕನ್ನಡಿಗ ಕೆಎಲ್ ರಾಹುಲ್ ಇದೇ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಎಂಎಸ್ ಧೋನಿ ಅವರ ದಾಖಲೆಯನ್ನೂ ಮುರಿದಿದ್ದಾರೆ.
ಕೆಎಲ್ ರಾಹುಲ್ ಮತ್ತು ಎಂಎಸ್ ಧೋನಿ
ಕೆಎಲ್ ರಾಹುಲ್ ಮತ್ತು ಎಂಎಸ್ ಧೋನಿ
Updated on

ಚೆನ್ನೈ: ಭಾನುವಾರ ನಡೆದ ಆಸೀಸ್ ವಿರುದ್ಧದ ವಿಶ್ವಕಪ್​ನ(icc world cup 2023) ಲೀಗ್​ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕನ್ನಡಿಗ ಕೆಎಲ್ ರಾಹುಲ್ ಇದೇ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಎಂಎಸ್ ಧೋನಿ ಅವರ ದಾಖಲೆಯನ್ನೂ ಮುರಿದಿದ್ದಾರೆ.

ಹೌದು.. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಕೇವಲ 115 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 97ರನ್ ಗಳಿಸಿದರು. ಮಾತ್ರವಲ್ಲದೇ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಅದ್ಭುತ ಇನ್ನಿಂಗ್ಸ್ ಮೂಲಕ ಕೆಎಲ್ ರಾಹುಲ್ ಭಾರತ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಭಾರತದ ಪರ ಗರಿಷ್ಟ ರನ್ ದಾಖಲಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಕೆಎಲ್ ರಾಹುಲ್ ಭಾಜನರಾಗಿದ್ದಾರೆ. ಈ ಹಿಂದೆ 1999ರಲ್ಲಿ ಭಾರತದ ಪರ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿದ್ದ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 145ರನ್ ಪೇರಿಸಿದ್ದರು.

ಇದು ಭಾರತ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಕಲೆ  ಹಾಕಿದ ಗರಿಷ್ಟ ರನ್ ಗಳಿಕೆಯಾಗಿದೆ. ನಿನ್ನೆ ರಾಹುಲ್ ಗಳಿಸಿದ ರನ್ ಗಳು ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಎಂಎಸ್ ಧೋನಿ ಅಜೇಯ 91ರನ್ ಗಳಿಸಿದ್ದರು. ಇದು ಇಷ್ಟು ದಿನ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿತ್ತು. ಇದೀಗ ಕೆಎಲ್ ರಾಹುಲ್ ಇದನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.

Highest score by Indian WK in ODI World Cup:
145 - Rahul Dravid v SL, 1999
97* - KL Rahul v AUS, 2023*
91* - MS Dhoni v SL, 2011
85* - MS Dhoni v ZIM, 2015
65 - MS Dhoni v AUS, 2015

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3ನೇ ವೈಯುಕ್ತಿಕ ಗರಿಷ್ಠ ರನ್
ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಗಳಿಸಿದ ಅಜೇಯ 97ರನ್ ಗಳು ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಆಟಗಾರನೋರ್ವ ಗಳಿಸಿದ 3ನೇ ವೈಯುಕ್ತಿಕ ಗರಿಷ್ಠ ರನ್ಯಾಗಿದೆ. ಇದಕ್ಕೂ ಮೊದಲು 2019ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ಶಿಖರ್ ಧವನ್ 117ರನ್ ಗಳಿಸಿದ್ದರು. ಅದಕ್ಕಿಂತ ಮೊದಲು ಇದೇ ದಿ ಓವಲ್ ಕ್ರೀಡಾಂಗಣದಲ್ಲಿ 1999ರಲ್ಲಿ ಭಾರತದ ಅಜಯ್ ಜಡೇಜಾ ಅಜೇಯ 100 ರನ್ ಗಳಿಸಿದ್ದರು.

Highest scores for India vs Australia in ODI World Cup
117 - Shikhar Dhawan, The Oval, 2019
100* - Ajay Jadeja, The Oval, 1999
97* - KL Rahul, Chennai, 2023*

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com