ಕೊಹ್ಲಿಗೆ ಪ್ರತಿ ಬಾರಿಯೂ ಅವರಿಗೆ ವಯಸ್ಸೆಷ್ಟು ಎಂಬುದನ್ನು ನೆನಪಿಸಬೇಕಿದೆ: ಗ್ಲೆನ್ ಮ್ಯಾಕ್ಸ್‌ವೆಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೇಗಿರುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದು, ಕೊಹ್ಲಿ ಮಗುವಿನಂತೆ, ಅವರು ಪುಟಿಯುವುದನ್ನು ನೋಡುವುದು ತಮಾಷೆಯಾಗಿರುತ್ತದೆ ಎಂದಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್
ಗ್ಲೆನ್ ಮ್ಯಾಕ್ಸ್‌ವೆಲ್

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೇಗಿರುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದು, ಕೊಹ್ಲಿ ಮಗುವಿನಂತೆ, ಅವರು ಪುಟಿಯುವುದನ್ನು ನೋಡುವುದು ತಮಾಷೆಯಾಗಿರುತ್ತದೆ ಎಂದಿದ್ದಾರೆ.

ಐಪಿಎಲ್ 2024ನೇ ಆವೃತ್ತಿಯಲ್ಲಿ RCB ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಕಂಡಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಮಾತ್ರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 203 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರಾಗಿದ್ದು, ಆರೆಂಜ್ ಕ್ಯಾಪ್ ಹೊಂದಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್, ರಜತ್ ಪಾಟಿದಾರ್ ಮುಂತಾದ ದೊಡ್ಡ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಮ್ಯಾಕ್ಸ್‌ವೆಲ್ ನಾಲ್ಕು ಇನಿಂಗ್ಸ್‌ಗಳಲ್ಲಿ 7.75 ಸರಾಸರಿಯಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ನಾಲ್ಕು ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

ಇಎಸ್‌ಪಿಎನ್‌ನ ಅರೌಂಡ್ ದಿ ವಿಕೆಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್, ವಿರಾಟ್ ಮೈದಾನದಲ್ಲಿ 'ಮಗು' ಇದ್ದಂತೆ ಎಂದು ಹೇಳಿದರು.

ಗ್ಲೆನ್ ಮ್ಯಾಕ್ಸ್‌ವೆಲ್
IPL 2024: RCB ವೈಫಲ್ಯಕ್ಕೆ ವಿರಾಟ್ ಕೊಹ್ಲಿ ಕಾರಣ; ಮಾಜಿ ಕ್ರಿಕೆಟಿಗನ ಗಂಭೀರ ಆರೋಪ

ಅವರು ಮೈದಾನದಲ್ಲಿ ಪುಟಿಯುವುದನ್ನು ನೋಡುವುದು ತುಂಬಾ ತಮಾಷೆಯಾಗಿದೆ. ನಾನು ಅವರಿಗೆ ವಯಸ್ಸೆಷ್ಟು ಎಂಬುದನ್ನು ಪ್ರತಿ ಬಾರಿಯೂ ನೆನಪಿಸಬೇಕಾಗಿದೆ. ನಾವಿಬ್ಬರೂ ಒಂದೇ ವಯಸ್ಸಿನವರಾಗಿದ್ದರೂ, ಅವರು ನನಗಿಂತ ಹೆಚ್ಚಿನ ಉತ್ಸಾಹದಲ್ಲಿರುತ್ತಾರೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು.

ಕೊಹ್ಲಿಯ ಪ್ರದರ್ಶನ ಮತ್ತು ವರ್ತನೆಗೆ ಮೆಚ್ಚುಗೆ ಸೂಚಿಸಿರುವ ಮ್ಯಾಕ್ಸ್‌ವೆಲ್, ಕೊಹ್ಲಿಯ ಉಪಸ್ಥಿತಿಯು ತಂಡದ ಡೈನಾಮಿಕ್ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್
ಮುಂದಿನ ಪಂದ್ಯ ಗೆಲ್ಬೇಕು ಅಂದ್ರೆ RCB ಪ್ಲೇಯಿಂಗ್ XI ನಿಂದ ಇವರನ್ನು ಕೈಬಿಡಿ; ಮಾಜಿ ಆಟಗಾರನ ಸಲಹೆ

ಅವರು ಪ್ರತಿ ಬಾರಿಯೂ ಅತ್ಯುತ್ತಮವಾಗಿ ತಂಡಕ್ಕೆ ಮರಳುತ್ತಿದ್ದಾರೆ ಮತ್ತು ಅವರು ಪುಟಿಯುವುದನ್ನು ನೀವು ನೋಡಬಹುದು. ಅವರು RCB ತಂಡದೊಂದಿಗೆ ಇರಲು ಉತ್ಸುಕರಾಗಿದ್ದಾರೆ ಮತ್ತು ಮೈದಾನದಲ್ಲಿ ತಮ್ಮ ಸಹ ಆಟಗಾರರೊಂದಿಗೆ ಉತ್ತಮವಾಗಿ ಆಡುವುದನ್ನು ಆನಂದಿಸುತ್ತಿದ್ದಾರೆ ಎಂದು ಆಲ್ ರೌಂಡರ್ ಹೇಳಿದರು.

RCB ಏಪ್ರಿಲ್ 6 ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com