IPL 2024: RCB vs SRH ಪಂದ್ಯದಲ್ಲಿ ಸಿಕ್ಸರ್ ಮೇಲೆ ಸಿಕ್ಸರ್... ಹಲವು ದಾಖಲೆಗಳು ಉಡೀಸ್!

ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ದಾಖಲೆಗಳ ಸರಣಿಯೇ ನಿರ್ಮಾಣವಾಗಿದೆ.
ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದಲ್ಲಿ ದಾಖಲೆಗಳ ಸರಣಿ
ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದಲ್ಲಿ ದಾಖಲೆಗಳ ಸರಣಿ

ಬೆಂಗಳೂರು: ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ದಾಖಲೆಗಳ ಸರಣಿಯೇ ನಿರ್ಮಾಣವಾಗಿದೆ.

ಹೌದು.. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಆರ್ ಸಿಬಿ ಬೌಲರ್ ಗಳ ಮೇಲೆ ಅಕ್ಷರಶಃ ಸವಾರಿ ಮಾಡಿತು. ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿತು. ಹೈದರಾಬಾದ್ ಪರ ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ ಶತಕ ಸಿಡಿಸಿದರೆ, ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಸಿಡಿಸಿದರು.

ಅಭಿಷೇಕ್ ಶರ್ಮಾ 34 ರನ್ ಸಿಡಿಸಿದರೆ, ಮಾರ್ಕ್ರಾಮ್ 2 ರನ್ ಮತ್ತು ಅಬ್ದುಲ್ ಸಮದ್ ಕೇವಲ 10 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡ ದಾಖಲೆಯ ಮೊತ್ತಕ್ಕೆ ಕಾರಣರಾದರು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 262 ರನ್ ಗಳನ್ನು ಕಲೆ ಹಾಕಿ ಕೇವಲ 25 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದಲ್ಲಿ ದಾಖಲೆಗಳ ಸರಣಿ
IPL 2024: ಐಪಿಎಲ್ ಇತಿಹಾಸದಲ್ಲೆ ದಾಖಲೆಯ ರನ್ ಗಳಿಸಿದ ಹೈದರಾಬಾದ್ ತಂಡ!

ಆರ್ ಸಿಬಿ ಪರ ವಿರಾಟ್ ಕೊಹ್ಲಿ 42 ರನ್ ಗಳಿಸಿದರೆ, ಫಾಪ್ ಡುಪ್ಲೆಸಿಸ್ 62 ರನ್, ದಿನೇಶ್ ಕಾರ್ತಿಕ್ 83 ರನ್ ಮತ್ತು ಅನುಜ್ ರಾವತ್ 25 ರನ್ ಗಳಿಸಿದರು.

ದಾಖಲೆಗಳ ಸರಣಿಯೇ ಉಡೀಸ್

ಸೋಮವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಕೇವಲ ಸಿಕ್ಸ್​-ಫೋರ್​ಗಳ ಸುರಿಮಳೆಗಳೇ ಕಾಣುತ್ತಿದ್ದವು. ಬ್ಯಾಕ್​ ಟು ಬ್ಯಾಕ್​ ಸಿಕ್ಸ್​ ಗಳು ಹರಿದುಬರುತ್ತಿದ್ದರೆ, ಇದರ ಹಿಂದೆಯೇ ಸಾಲು ಸಾಲು ದಾಖಲೆಗಳು ದೂಳಿಪಟ ಆಗುತ್ತಿದ್ದವು.

ಟಿ20 ಪಂದ್ಯವೊದರಲ್ಲಿ ಗರಿಷ್ಠ ಬೌಂಡರಿ

ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಮತ್ತು ಹೈದರಬಾದ್ ತಂಡಗಳೆರಡೂ ಸೇರಿ ಒಟ್ಟು 81 ಬೌಂಡರಿಗಳು ಹರಿದು ಬಂದಿದ್ದು, ಈ ಪೈಕಿ 43 ಬೌಂಡರಿ ಮತ್ತು 38 ಸಿಕ್ಸರ್ ಗಳು ಹರಿದುಬಂದಿದೆ. ಇದು ಈ ವರೆಗೂ ಟಿ20 ಪಂದ್ಯವೊಂದರಲ್ಲಿ ದಾಖಲಾದ ಅತೀ ಹೆಚ್ಚು ಬೌಂಡರಿಗಳಾಗಿದೆ. ಈ ಹಿಂದೆ ಸೆಂಚೂರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ 81 ಬೌಂಡರಿಗಳು (46 ಬೌಂಡರಿ ಮತ್ತು 35 ಸಿಕ್ಸರ್) ದಾಖಲಾಗಿತ್ತು.

Most boundaries in a T20 match

81 SRH vs RCB Bengaluru 2024 [43 X 4s + 38 X 6s] *

81 WI vs SA Centurion 2023 [46 X 4s + 35 X 6s]

78 Multan Sultans vs Quetta Gladiators Rawalpindi 2023 [45 X 4s + 33 X 6s]

ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದಲ್ಲಿ ದಾಖಲೆಗಳ ಸರಣಿ
IPL 2024: ಐಪಿಎಲ್ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ!

ಅತೀ ಹೆಚ್ಚು ರನ್ ಗಳ ಕಂಡ ಟಿ20 ಪಂದ್ಯ

ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳು ಗರಿಷ್ಠ ರನ್ ಪೇರಿಸಿದ್ದು ಈ ಪಂದ್ಯದಲ್ಲಿ ಒಟ್ಟು 549 ರನ್ ಗಳು ಹರಿದುಬಂದಿದೆ. ಆ ಮೂಲಕ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ರನ್ ದಾಖಲಾದ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಇದೇ ಟೂರ್ನಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ 523 ರನ್ ಹರಿದುಬಂದಿತ್ತು.

Highest aggregate in a T20 match

549 SRH vs RCB Bengaluru 2024 *

523 SRH vs MI Hyderabad 2024

517 WI vs SA Centurion 2023

515 Multan Sultans vs Quetta Gladiators Rawalpindi 2023

506 Surrey vs Middlesex The Oval 2023

ಅತೀ ಹೆಚ್ಚು ಸಿಕ್ಸರ್ ಕಂಡ 2ನೇ ಟಿ20 ಪಂದ್ಯ

ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಒಟ್ಟು 38 ಸಿಕ್ಸರ್ ಗಳು ಹರಿದುಬಂದಿದ್ದು, ಇದು ಪಂದ್ಯವೊಂದರಲ್ಲಿ ಹರಿದುಬಂದ ಅತೀ ಹೆಚ್ಚು ಸಿಕ್ಸರ್ ಗಳಾಗಿದೆ. ಈ ಹಿಂದೆ ಇದೇ ಸರಣಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಮುಂಬೈ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲೂ 38 ಸಿಕ್ಸರ್ ಗಳು ಹರಿದುಬಂದಿತ್ತು.

Most sixes in a T20 match

38 SRH vs MI Hyderabad 2024

38 SRH vs RCB Bengaluru 2024 *

37 Balkh Legends vs Kabul Zwann Sharjah 2018

37 Jamaica Tallawahs vs St Kitts & Nevis Patriots Basseterre 2019

ಅತೀ ಹೆಚ್ಚು ಸಿಕ್ಸರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ದಾಖಲೆ

ಇನ್ನು ಈ ಪಂದ್ಯದಲ್ಲಿ ರನ್ ಗಳ ಸುರಿಮಳೆಯನ್ನೇ ಸುರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಿಕ್ಸರ್ ಗಳ ಮೂಲಕವೂ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಒಟ್ಟು 22 ಸಿಕ್ಸರ್ ಗಳನ್ನು ಸಿಡಿಸಿದ್ದು, ಇದು ಐಪಿಎಲ್ ಪಂದ್ಯವೊಂದರಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸಿಕ್ಸರ್ ಗಳಾಗಿವೆ.

Most sixes in an IPL innings

22 SRH vs RCB Bengaluru 2024

21 RCB vs PWI Bengaluru 2013

20 RCB vs GL Bengaluru 2016

20 DC vs GL Delhi 2017

20 MI vs SRH Hyderabad 2024

ಗರಿಷ್ಠ ಟೀಂ ಟೋಟಲ್

ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗಳಿಸಿದ 287 ರನ್ ಗಳು ಟಿ20 ಪಂದ್ಯದಲ್ಲಿ ತಂಡವೊಂದು ಗಳಿಸಿದ 2ನೇ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 2023ರಲ್ಲಿ ಹ್ಯಾಂಗ್ ಜೌನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡ 314 ರನ್ ಗಳಿಸಿತ್ತು. ಇದು ಟಿ20 ಪಂದ್ಯದಲ್ಲಿ ದಾಖಲಾದ ಗರಿಷ್ಟ ರನ್ ಗಳಿಕೆಯಾಗಿದೆ.

Highest totals in T20 cricket

314/3 Nepal vs Mongolia Hangzhou 2023

287/3 SRH vs RCB Bengaluru 2024

278/3 Afg vs Ire Dehradun 2019

278/4 Czech Rep vs Turkey Iflov Country 2019

277/3 SRH vs MI Hyderabad 2024

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com