
ಆಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಅಂಗವಾಗಿ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ಐದು ದಿನಗಳ ಪಿಂಕ್ ಬಾಲ್ ಅಹರ್ನಿಶಿ ಟೆಸ್ಟ್ ಪಂದ್ಯದವನ್ನು ಆಸ್ಟ್ರೇಲಿಯಾ ಕೇವಲ ಮೂರು ದಿನಗಳಲ್ಲೇ ಕೊನೆಗೊಳಿಸುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋತಿದೆ.ಅಡಿಲೇಡ್ ಓವಲ್‌ನಲ್ಲಿ ಮೂರನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು 175ಕ್ಕೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾಕ್ಕೆ ಸರಣಿ ಗೆಲ್ಲಲು ಬರೀ 19 ರನ್‌ಗಳು ಬೇಕಾಗಿತ್ತು. 19 ರನ್‌ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ.
ಗೆಲುವಿಗಾಗಿ ಕೇವಲ 19 ರನ್‌ಗಳನ್ನು ಬೆನ್ನಟ್ಟಿದ ಆರಂಭಿಕರಾದ ಉಸ್ಮಾನ್ ಖವಾಜಾ ಮತ್ತು ನಾಥನ್ ಮೆಕ್‌ಸ್ವೀನಿ ಅವರು ಪಿಂಕ್ ಬಾಲ್ ಘರ್ಷಣೆಯ ಮೂರನೇ ದಿನದಂದು ಆತಿಥೇಯರನ್ನು ವಿಕೆಟ್ ನಷ್ಟವಿಲ್ಲದೆ ಅಲ್ಪ ಗುರಿಯತ್ತ ಮುನ್ನಡೆಸಿದರು. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗೆ ಆಲೌಟ್ ಆಯಿತು. ಭಾರತದ ಪರ ನಿತೀಶ್‌ಕುಮಾರ್ ರೆಡ್ಡಿ 42 ರನ್‌ಗಳ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸೀಸ್ ಪರ ಟ್ರಾವಿಸ್ ಹೆಡ್ (140) ಭರ್ಜರಿ ಶತಕ ಸಿಡಿಸಿದರು. ಇದರೊಂದಿಗೆ ಆಸೀಸ್ ಆಲೌಟ್ ಆಗುವ ಮೂಲಕ 337 ರನ್ ಗಳಿಸಿದರು. ಭಾರತ ಪುನಃ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಆಟವಾಡುವ ನಿರೀಕ್ಷೆಯಿತ್ತು. ಆದರೆ ಭಾರತ ಕೇವಲ 175 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾಕ್ಕೆ 19 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಅಡಿಲೇಡ್ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿತು.
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದು ಸರಣಿಯನ್ನು 1-1 ರಲ್ಲಿ ಸಮಬಲ ಮಾಡಿದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಮೊದಲ ಎರಡು ದಿನ ಮುಂಚೂಣಿ ಸಾಧಿಸಿದ್ದ ಆಸ್ಟ್ರೇಲಿಯಾ ಮೂರನೇ ದಿನ ಭಾರತವನ್ನು ಮಕಾಡೆ ಮಲಗಿಸಿದೆ. ಎರಡನೇ ದಿನ ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ತತ್ತರಿಸಿದ ಭಾರತವು 29 ರನ್‌ಗಳ ಹಿನ್ನಡೆಯನ್ನು ಕಂಡಿತ್ತು. ಶನಿವಾರದ ಅಂತ್ಯದ ವೇಳೆಗೆ ಭಾರತಕ್ಕೆ 5 ವಿಕೆಟ್‌ಗೆ 128 ಅಷ್ಟೇ ಪಡೆಯಲು ಸಾಧ್ಯವಾಯಿತು. ಪಂದ್ಯದ ಮುಕ್ತಾಯದ ವೇಳೆಗೆ, ಭಾರತವು ಆಸ್ಟ್ರೇಲಿಯಾಕ್ಕಿಂತ 29 ರನ್‌ಗಳ ಹಿನ್ನಡೆ ಕಂಡಿತ್ತು.
Advertisement