ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್: ಭೋಜನ ವಿರಾಮದ ವೇಳೆಗೆ ಭಾರತ 93/3

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತ ಎದುರಿಸಿದ್ದು ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು ಕೇವಲ 93 ರನ್ ಗಳಿಸಿದೆ.
ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ
ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾBCCI

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತ ಎದುರಿಸಿದ್ದು ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು ಕೇವಲ 93 ರನ್ ಗಳಿಸಿದೆ.

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ನಿಧಾನವಾಗಿ ಕ್ರೀಸ್ ಅಂಟಿಕೊಳ್ಳುತ್ತಿದ್ದ ಈ ಜೋಡಿಗೆ ಮಾರ್ಕ್ ವುಡ್ ಆಘಾಚ ನೀಡಿದರು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿಯೇ ಮಾರ್ಕ್ ವುಡ್ 10 ರನ್ ಗಳಿಸಿದ್ದ ಜೈಸ್ವಾಲ್ ರನ್ನು ಔಟ್ ಮಾಡಿ ಭಾರತಕ್ಕೆ ಆರಂಭಿಕ ಆಘಾತ ನೀಡಿದರು.

ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ
3ನೇ ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್

ಬಳಿಕ ಕ್ರೀಸ್ ಗೆ ಬಂದ ಶುಭ್ ಮನ್ ಗಿಲ್ (0) 9 ಎಸೆತ ಎದುರಿಸಿ ಶೂನ್ಯಕ್ಕೆ ಮತ್ತದೇ ಮಾರ್ಕ್ ವುಡ್ ಬೌಲಿಂಗ್ ನಲ್ಲಿ ಔಟಾದರು. ಇದರ ಬೆನ್ನಲ್ಲೇ ರಜತ್ ಪಾಟೀದಾರ್ ಕೂಡ 5 ರನ್ ಗಳಿಸಿ ಟಾಮ್ ಹಾರ್ಟ್ಲಿ ಬೌಲಿಂಗ್ ನಲ್ಲಿ ಔಟಾಗಿ ನಿರಾಶೆ ಮೂಡಿಸಿದರು. ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ತಂಡದ ಅನುಭವಿ ಆಟಗಾರ ರವೀಂದ್ರ ಜಡೇಜಾ ರಕ್ಷಣಾತ್ಮಕ ಆಟದ ಮೊರೆ ಹೋಗಿ ನಿಧಾನವಾಗಿ ರನ್ ಗಳಿಸಿದರು. ಈ ಹಂತದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದಾರೆ.

ಇತ್ತ 24 ರನ್ ಗಳಿಸಿರುವ ಜಡೇಜಾ ಕೂಡ ಕ್ರೀಸ್ ಅಂಟಿಕೊಂಡಿರುವುದು ಭಾರತಕ್ಕೆ ಶುಭಸೂಚಕವಾಗಿದ್ದು, ಈ ಜೋಡಿ ಹೀಗೆಯೇ ಮುಂದುವರೆದರೆ ತಂಡ ದಿನದಾಟದ ಅಂತ್ಯಕ್ಕೆ ಉತ್ತಮ ರನ್ ಗಳಿಸುವ ನಿರೀಕ್ಷೆ ಇದೆ.

ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ
ಜಿಂಬಾಬ್ವೆ ಕ್ರಿಕೆಟ್ ಪೋಷಣೆಗೆ ಒತ್ತು: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪ್ರವಾಸ

ಅಂದಹಾಗೆ ಭೋಜನ ವಿರಾಮದ ವೇಳೆಗೆ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದ್ದು, 52 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು 24 ರನ್ ಗಳಿಸಿರುವ ರವೀಂದ್ರ ಜಡೇಜಾ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಮಾರ್ಕ್ ವುಡ್ 2 ಮತ್ತು ಟಾಮ್ ಹಾರ್ಟ್ಲಿ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com