T20 ವಿಶ್ವಕಪ್ ಜಯದ ಬೆನ್ನಲ್ಲೇ ಉಡುಪಿ ದೇವಸ್ಥಾನಕ್ಕೆ ಭೇಟಿ, ಹರಕೆ ತೀರಿಸಿದ Suryakumar Yadav

ಟಿ20 ವಿಶ್ವಕಪ್​ಗೂ ಮುನ್ನ ಸೂರ್ಯಕುಮಾರ್ ಯಾದವ್ ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು.
Suryakumar Yadav and wife visit Udupi temple
ಉಡುಪಿ ದೇಗುಲಕ್ಕೆ ಬಂದ ಸೂರ್ಯ ಕುಮಾರ್ ದಂಪತಿ
Updated on

ಉಡುಪಿ: ಟೀಂ ಇಂಡಿಯಾದ ಹಾರ್ಡ್‌ ಹಿಟ್ಟರ್‌ ಸೂರ್ಯಕುಮಾರ್‌ ಯಾದವ್‌ ಮತ್ತು ಪತ್ನಿ ದಿವಿಶಾ ಶೆಟ್ಟಿ ಮಂಗಳವಾರ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹೌದು.. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮಂಗಳವಾರ ಕಾಪುವಿಗೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಜೊತೆ ಉಡುಪಿಗೆ ಆಗಮಿಸಿದ ಸೂರ್ಯಕುಮಾರ್ ಕಾಪುವಿನ ಮಾರಿಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಟಿ20 ವಿಶ್ವಕಪ್​ಗೂ ಮುನ್ನ ಸೂರ್ಯಕುಮಾರ್ ಯಾದವ್ ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು. ಈ ಹರಕೆ ತೀರಿಸಲು ಇದೀಗ ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಸೂರ್ಯಕುಮಾರ್ ದಂಪತಿಯನ್ನು ದೇವಳದ ಆಡಳಿತ ಮಂಡಳಿ ಸನ್ಮಾನಿಸಿದ್ದು, ಟೀಮ್ ಇಂಡಿಯಾ ಆಟಗಾರನಿಗೆ ಸೂಕ್ತ ಭದ್ರತೆ ಒದಗಿಸಲು ಮಾರಿಗುಡಿ ಸುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.

Suryakumar Yadav and wife visit Udupi temple
ಭಾರತದ ಗೆಲುವನ್ನು ಅರಗಿಸಿಕೊಳ್ಳಿ: ಸೂರ್ಯ ಕ್ಯಾಚ್ ಕುರಿತಂತೆ ಪಾಕ್ ವರದಿಗಾರನ ಪ್ರಶ್ನೆಗೆ ಶಾನ್ ಪೊಲಾಕ್ ಖಡಕ್ ಉತ್ತರ!

ದೇಗುಲದ ಅಧಿಕಾರಿಗಳ ಪ್ರಕಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದವರಾದ ದೇವಿಶಾ ಶೆಟ್ಟಿ, ಭಾರತ ಟಿ20 ವಿಶ್ವಕಪ್ ಗೆದ್ದರೆ ಪತಿಯೊಂದಿಗೆ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದರಂತೆ. ಹೀಗಾಗಿ ಇಂದು ದೇಗುಲಕ್ಕೆ ಭೇಟಿ ನೀಡಿ ಕಾಪು ಮಾರಿಯಮ್ಮ ದೇವಿಗೆ ಮಲ್ಲಿಗೆ ಹೂವಿನ ಮಾಲೆಯನ್ನು ಅರ್ಪಿಸಿ ಅವರ ಕುಟುಂಬಕ್ಕೆ ಆಶೀರ್ವಾದ ಕೋರಿದರು.

ವಿವಾಹ ವಾರ್ಷಿಕೋತ್ಸವ ಆಚರಣೆ

ಅಂತೆಯೇ ಸೋಮವಾರ ಮಂಗಳೂರಿಗೆ ಬಂದಿಳಿದ ಯಾದವ್ ಮತ್ತು ಶೆಟ್ಟಿ ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸುವ ಮೂಲಕ ಎಂಟನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ತುಳು ಮಾತನಾಡಿದ ಸೂರ್ಯ

ಶೆಟ್ಟಿ ಅವರು ದೇವಸ್ಥಾನದಲ್ಲಿ ತುಳುವಿನಲ್ಲಿ ಮಾತನಾಡುತ್ತಿರುವುದು ಕಂಡುಬಂದಿತು. ಯಾದವ್ ಕೂಡ ತುಳುವಿನಲ್ಲಿ ಮಾತನಾಡಲು ಯತ್ನಿಸಿದ್ದು ದೇವಸ್ಥಾನದ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.

ಈ ಭಾಗದ ಅತ್ಯಂತ ಪುರಾತನವಾದ ದೇವಾಲಯದ ಇತಿಹಾಸ ಹಾಗೂ ಹಾವೇರಿ ಜಿಲ್ಲೆಯಲ್ಲಿ ತಾವು ನಿರ್ಮಿಸುತ್ತಿರುವ ನೂತನ ಕಾಪು ಮಾರಿಯಮ್ಮ ದೇವಾಲಯದ ಬಗ್ಗೆಯೂ ದೇವಾಲಯದ ಅಧಿಕಾರಿಗಳು ಸೂರ್ಯ ಕುಮಾರ್ ಗೆ ಮಾಹಿತಿ ತಿಳಿಸಿದರು. ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣವಾಗುತ್ತಿದೆ. ‘ಗರ್ಭಗುಡಿ’, ‘ಉಚ್ಚಂಗಿ ಗುಡಿ’, ‘ಸತ್ತುಪೌಳಿ’ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿಗೆ ಭೇಟಿ ನೀಡಿರುವ ಸೂರ್ಯಕುಮಾರ್ ಯಾದವ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 10 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ ಒಟ್ಟು 199 ರನ್ ಬಾರಿಸಿದ್ದರು. ಅದರಲ್ಲೂ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿತ್ತು. ಈ ಸಂಭ್ರಮದ ನಡುವೆ ಸೂರ್ಯಕುಮಾರ್ ಉಡುಪಿಗೆ ಬಂದು ತಮ್ಮ ಹರಕೆ ತೀರಿಸಿರುವುದು ವಿಶೇಷವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com