'ಹೊಸ ಸೀಸನ್, ಹೊಸ ಪಾತ್ರ'; ಧೋನಿ ವಿದಾಯ?.. ಐಪಿಎಲ್ ಗೆ ಕ್ಷಣಗಣನೆ... ಕುತೂಹಲ ಕೆರಳಿಸಿದ ಮಾಹಿ ಪೋಸ್ಟ್!

2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಅವರ ವಿದಾಯದ ಮುನ್ಸೂಚನೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.
ಎಂಎಸ್ ಧೋನಿ
ಎಂಎಸ್ ಧೋನಿ

ಚೆನ್ನೈ: 2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಅವರ ವಿದಾಯದ ಮುನ್ಸೂಚನೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.

ಹೌದು..ಸಾಮಾನ್ಯವಾಗಿ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಇರುವುದಿಲ್ಲ.. ಒಂದು ವೇಳೆ ಧೋನಿ ಒಂದು ಪೋಸ್ಟ್ ಮಾಡಿದ್ದಾರೆ ಎಂದರೆ ಖಂಡಿತಾ ಅದು ಯಾವುದೋ ವಿಷಯದ ಮುನ್ಸೂಚನೆ ಅಥವಾ ಪ್ರಮುಖ ವಿಚಾರವಾಗಿರುತ್ತದೆ ಎಂದು ಅಭಿಮಾನಿಗಳು ನಂಬುತ್ತಾರೆ. ಇಂತಹ ಧೋನಿ ಇದೀಗ ಅಚ್ಚರಿ ಪೋಸ್ಟ್ ವೊಂದು ಮಾಡಿದ್ದು, ಈ ಪೋಸ್ಟ್ ಅವರ ವಿದಾಯದ ಮುನ್ಸೂಚನೆಯೇ ಎಂದು ಎಲ್ಲೆಡೆ ಭಾರಿ ಚರ್ಚೆಗಳು ಆರಂಭವಾಗಿವೆ.

ಎಂಎಸ್ ಧೋನಿ
3ನೇ ಟೆಸ್ಟ್: ಟೆಸ್ಟ್ ಕ್ರಿಕೆಟ್ ನಲ್ಲಿ 79ನೇ ಸಿಕ್ಸರ್ ಸಿಡಿಸಿದ ರೋ'ಹಿಟ್' ಶರ್ಮಾ; ಧೋನಿ ದಾಖಲೆ ಪತನ

ಐಪಿಎಲ್ 17ನೇ ಆವೃತ್ತಿಯ ಐಪಿಎಲ್(IPL 2024)​ ಆರಂಭಕ್ಕೆ ಇನ್ನು ಕೇವಲ 2 ವಾರ ಬಾಕಿ ಇರುವಾಗ ಫೇಸ್​ಬುಕ್​ನಲ್ಲಿ ಮಾಡಿದ ಪೋಸ್ಟ್​ ಭಾರೀ ಸಂಚಲನ ಮೂಡಿಸಿದೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ನಾಯಕನಾಗಿರುವ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ವರ್ಷವೇ ಅವರು ಐಪಿಎಲ್​ಗೆ ವಿದಾಯ ಹೇಳಲು ಸಜ್ಜಾಗಿದ್ದರು. ಆದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಇದೀಗ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ತಮ್ಮ ಫೇಸ್​ಬುಕ್​ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಧೋನಿಯ ಈ ಪೋಸ್ಟ್​ ಕಂಡು ಅವರ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದು, ಇದು ಅವರ ವಿದಾಯದ ಮುನ್ಸೂಚನೆಯೇ ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಧೋನಿ ಅವರು ಮುಂದಿನ ಆವೃತ್ತಿಯಲ್ಲಿ ಅಂದರೆ 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್​ ಅಥವಾ ಮೆಂಟರ್​ ಆಗಿ ಕಾರ್ಯನಿರ್ವಹಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಇಲ್ಲವಾದಲ್ಲಿ ಅವರು ಈ ರೀತಿಯ ಪೋಸ್ಟ್​ ಮಾಡುತ್ತಿರಲಿಲ್ಲ. ಒಟ್ಟಾರೆಯಾಗಿ ಅವರ ವಿದಾಯಕ್ಕೆ ವೇದಿಕೊಂದು ಸಿದ್ದವಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com