ಕುಲ್​ದೀಪ್​ ದಾಖಲೆ, ಅಶ್ವಿನ್ ಮಾರಕ ಬೌಲಿಂಗ್; 218ಕ್ಕೆ ಇಂಗ್ಲೆಂಡ್ ಆಲೌಟ್, ಭಾರತದ ಹಿಡಿತದಲ್ಲಿ 5ನೇ ಟೆಸ್ಟ್!

ಕುಲದೀಪ್ ಯಾದವ್, ಆರ್ ಅಶ್ವಿನ್ ಮಾರಕ ಸ್ಪಿನ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ 5ನೇ ಟೆಸ್ಟ್ ನಲ್ಲಿ 218 ರನ್ ಗಳಿಗೆ ಆಲೌಟ್ ಆಗಿದ್ದು, ಮೊದಲ ದಿನದ ಗೌರವ ಭಾರತಕ್ಕೆ ಸಂದಿದೆ.
ರೋಹಿತ್ ಶರ್ಮಾ ಮತ್ತು ಜೈಸ್ವಾಲ್
ರೋಹಿತ್ ಶರ್ಮಾ ಮತ್ತು ಜೈಸ್ವಾಲ್BCCI

ಧರ್ಮಶಾಲಾ: ಕುಲದೀಪ್ ಯಾದವ್, ಆರ್ ಅಶ್ವಿನ್ ಮಾರಕ ಸ್ಪಿನ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ 5ನೇ ಟೆಸ್ಟ್ ನಲ್ಲಿ 218 ರನ್ ಗಳಿಗೆ ಆಲೌಟ್ ಆಗಿದ್ದು, ಮೊದಲ ದಿನದ ಗೌರವ ಭಾರತಕ್ಕೆ ಸಂದಿದೆ.

ಇಂಗ್ಲೆಂಡ್​ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಕುಲದೀಪ್ ಯಾದವ್ ದಾಖಲೆ ಮತ್ತು ಆರ್ ಅಶ್ವಿನ್ ಮಾರಕ ಬೌಲಿಂಗ್ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ತಂಡವನ್ನು 218 ರನ್ ಗಳಿಗೆ ಆಲೌಟ್ ಮಾಡಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 135 ರನ್​ ಗಳಿಸಿದೆ.

ಭಾರತ ಇನ್ನೂ 83 ರನ್​ ಗಳ ಹಿನ್ನಡೆಯಲಿದ್ದು, ಅಜೇಯ 52 ರನ್ ಗಳಿಸಿರುವ ನಾಯಕ ರೋಹಿತ್ ಶರ್ಮಾ, ಅಜೇಯ 26 ರನ್ ಗಳಿಸಿರುವ ಶುಭ್ ಮನ್ ಗಿಲ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ರೋಹಿತ್ ಶರ್ಮಾ ಮತ್ತು ಜೈಸ್ವಾಲ್
6 ವರ್ಷಗಳ ಕೊಹ್ಲಿ ದಾಖಲೆ, 7 ತಿಂಗಳಲ್ಲೇ ಪತನ; ಕ್ರಿಕೆಟ್ ಇತಿಹಾಸದ ಶ್ರೇಷ್ಠ ರೆಕಾರ್ಡ್, ಗವಾಸ್ಕರ್ ದಾಖಲೆಗೂ ಯಶಸ್ವಿ ಜೈಸ್ವಾಲ್ ಕುತ್ತು!

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಈ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್ ಭೋಜನ ವಿರಾಮದವರೆಗೆ ಕೇವಲ 2 ವಿಕೆಟ್​ಗೆ 100ರ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು. ಆ ಬಳಿಕ ಹಠಾತ್​ ಕುಸಿತ ಕಂಡು 218 ರನ್​ ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಝ್ಯಾಕ್ ಕ್ರಾಲಿ 79 ರನ್ ಗಳಿಸಿದರೆ, ಉಳಿದಾವ ಆಟಗಾರರ ಮೊತ್ತ 30 ದಾಟಲಿಲ್ಲ. ನಾಯಕ ಬೆನ್ ಸ್ಟೋಕ್ಸ್, ಮಾರ್ಕ್ ವುಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಶೂನ್ಯ ಸುತ್ತಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 218 ರನ್ ಗಳಿಗೆ ಆಲೌಟ್ ಆಯಿತು.

ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದರೆ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆರ್ ಅಶ್ವಿನ್ 4 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಇಂಗ್ಲೆಂಡ್ 218 ರನ್ ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಯಶಸ್ವಿ ಜೈಸ್ವಾಲ್ (57), ನಾಯಕ ರೋಹಿತ್ ಶರ್ಮಾ (ಅಜೇಯ 52) ಮತ್ತು ಶುಭ್ ಮನ್ ಗಿಲ್ (ಅಜೇಯ 26) ಉತ್ತಮ ಬ್ಯಾಟಿಂಗ್ ನೆರವಿನಿಂದ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಇಂಗ್ಲೆಂಡ್ ಪರ ಶೊಯೆಬ್ ಬಷೀರ್ 1 ವಿಕೆಟ್ ಕಬಳಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ಜೈಸ್ವಾಲ್
100 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕುಲದೀಪ್ ಯಾದವ್

ಕುಲದೀಪ್ ಯಾದವ್ ದಾಖಲೆ

ಕುಲ್​ದೀಪ್​ ಯಾದವ್​ ಅವರು 4 ವಿಕೆಟ್​ ಕೀಳುತಿದ್ದಂತೆ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದರು. ಒಟ್ಟಾರೆಯಾಗಿ 5 ವಿಕೆಟ್​ ಕಿತ್ತರು. ವಿಶೇಷ ಎಂದರೆ ಕುಲ್​ದೀಪ್​ ಅವರು 2017ರಲ್ಲಿ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್​ ಪದಾರ್ಪಣೆ ಮಾಡಿದ್ದರು. ಇದೀಗ ಪದಾರ್ಪಣೆ ಮಾಡಿದ ಮೈದಾನದಲ್ಲಿಯೇ 50 ವಿಕೆಟ್​ ಕೂಡ ಪೂರ್ತಿಗೊಳಿಸಿದರು. 100ನೇ ಟೆಸ್ಟ್​ ಆಡಲಿಳಿದ ಅಶ್ವಿನ್​ ಕೂಡ 51 ರನ್​ ವೆಚ್ಚದಲ್ಲಿ 4 ವಿಕೆಟ್​ ಉರುಳಿಸಿದರು. ಜಡೇಜಾ ಒಂದು ವಿಕೆಟ್​ ಪಡೆದರು. ಇಲ್ಲಿಗೆ ಎಲ್ಲಾ 10 ವಿಕೆಟ್​ ಕೂಡ ಸ್ಪಿನ್ನರ್​ಗಳ ಪಾಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com