6 ವರ್ಷಗಳ ಕೊಹ್ಲಿ ದಾಖಲೆ, 7 ತಿಂಗಳಲ್ಲೇ ಪತನ; ಕ್ರಿಕೆಟ್ ಇತಿಹಾಸದ ಶ್ರೇಷ್ಠ ರೆಕಾರ್ಡ್, ಗವಾಸ್ಕರ್ ದಾಖಲೆಗೂ ಯಶಸ್ವಿ ಜೈಸ್ವಾಲ್ ಕುತ್ತು!

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದು, ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಮುರಿಯುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ ದಾಖಲೆ
ಯಶಸ್ವಿ ಜೈಸ್ವಾಲ್ ದಾಖಲೆ

ಧರ್ಮಶಾಲಾ: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದು, ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಮುರಿಯುತ್ತಿದ್ದಾರೆ.

ಹೌದು.. ಇದೀಗ ಈ ಪಟ್ಟಿಗೆ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆಯೂ ಸೇರಿದ್ದು, ಕೊಹ್ಲಿ 6 ವರ್ಷಗಳಲ್ಲಿ ಸಾಧಿಸಿದ್ದನ್ನು, ಜೈಸ್ವಾಲ್ ಕೇವಲ 7 ತಿಂಗಳ ಅವಧಿಯಲ್ಲೇ ಮೆಟ್ಟಿ ನಿಂತಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ವಿಶತಕವನ್ನೂ ಹೊಡೆದಿರುವ ಜೈಸ್ವಾಲ್ ಕೂಟದ ಅತಿ ಹೆಚ್ಚಿನ ರನ್ ಗಳಿಸಿದ ಬ್ಯಾಟರ್ ಎಂಬ ಕೀರ್ತಿಗೆ ಜೈಸ್ವಾಲ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದರು. ಅಲ್ಲದೆ ಅತಿ ವೇಗವಾಗಿ ಸಹಸ್ರ ರನ್ ಗಳಿಸಿದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದರು.

ಯಶಸ್ವಿ ಜೈಸ್ವಾಲ್ ದಾಖಲೆ
ರಿಷಬ್ ಪಂತ್​ ಎಂಬ ಒಬ್ಬ ಆಟಗಾರನಿದ್ದಾನೆ...: Bazball​ ಕ್ರಿಕೆಟ್​ ಕುರಿತ ಇಂಗ್ಲೆಂಡ್ ಆಟಗಾರನ ಹೇಳಿಕೆಗೆ Rohit Sharma ತಿರುಗೇಟು!

ಜಸ್ಟ್​ 1 ರನ್​ ಗಳಿಸಿ ಕೊಹ್ಲಿ ದಾಖಲೆ ಪತನ

ಯಶಸ್ವಿ ಜೈಸ್ವಾಲ್​ ಇಂಗ್ಲೆಂಡ್ ವಿರುದ್ಧ ಅತಿ ದೊಡ್ಡ ಸಾಧನೆ ಮಾಡಿದ್ದು, ಭಾರತದ ಇನ್ನಿಂಗ್ಸ್ ಆರಂಭದಲ್ಲೇ ಕೇವಲ 1 ರನ್ ಗಳಿಸುವ ಮೂಲಕ ಕಿಂಗ್​ ವಿರಾಟ್ ಕೊಹ್ಲಿ ದಾಖಲೆಯನ್ನೂ ಜೈಸ್ವಾಲ್​ ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಪಂದ್ಯವರೆಗೆ ಜೈಸ್ವಾಲ್​ ಈ ಸರಣಿಯಲ್ಲಿ 655 ರನ್​ ಗಳಿಸಿ ಕೊಹ್ಲಿ ಸರಿಸಮನಾಗಿದ್ದರು.

ಆದರೆ ಇದೀಗ 1 ರನ್​ ಗಳಿಸುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. 2016ರಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 655 ರನ್ ಗಳಿಸುವ ಮೂಲಕ ಆಂಗ್ಲರ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆ ಮರಿದಿರುವ ಜೈಸ್ವಾಲ್​ ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರಲ್ಲಿ ಮೊದಲಿಗರಾಗಿದ್ದಾರೆ.

ಗವಾಸ್ಕರ್ ದಾಖಲೆಗೂ ಕುತ್ತು

ಇನ್ನು, ಸುನಿಲ್ ಗವಾಸ್ಕರ್​ ಹೆಸರಲ್ಲೇ ಇರುವ ಅಪರೂಪದ ದಾಖಲೆಯನ್ನು ಮುರಿಯಲು ಯಶಸ್ವಿ ಜೈಸ್ವಾಲ್​ ಕಾಯುತ್ತಿದ್ದು, ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ದಾಖಲೆಯತ್ತ ಸಾಗುತ್ತಿದ್ದಾರೆ. ಸದ್ಯ ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. 1971 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗವಾಸ್ಕರ್ 4 ಟೆಸ್ಟ್ ಪಂದ್ಯಗಳಲ್ಲಿ 774 ರನ್ ಗಳಿಸಿದ್ದರು. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗವಾಸ್ಕರ್ ಅವರ ದಾಖಲೆ 53 ವರ್ಷಗಳಿಂದಲೂ ಅವರ ಹೆಸರಲ್ಲೇ ಉಳಿದಿದೆ. 120 ರನ್​ ಗಳಿಸಿದರೆ ಜೈಸ್ವಾಲ್​ ಗವಾಸ್ಕರ್ ಅವರನ್ನೂ ಹಿಂದಿಕ್ಕಲಿದ್ದಾರೆ.

Most runs in a Test series for India:

  • 774 - Sunil Gavaskar vs West Indies, 1971 (Away)

  • 732 - Sunil Gavaskar vs West Indies, 1978/79 (Home)

  • 712 - Yashasvi Jaiswal vs England, 2024 (Home)

  • 692 - Virat Kohli vs Australia, 2014/15 (Away)

  • 655 - Virat Kohli vs England, 2016 (Home)

ಒಂದೇ ಸರಣಿಯಲ್ಲಿ ಗರಿಷ್ಟ ರನ್, 4ನೇ ಸ್ಥಾನದಲ್ಲಿ ಜೈಸ್ವಾಲ್

ಇನ್ನು, ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಹೆಸರು 4ನೇ ಸ್ಥಾನದಲ್ಲಿದೆ. ಈ ಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿ ಸುನಿಲ್ ಗವಾಸ್ಕರ್ ಹೆಸರು ಇದೆ. ಅವರು 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಮತ್ತು 1978-79 ರಲ್ಲಿ ಅದೇ ತಂಡದ ವಿರುದ್ಧವೇ 772 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 2014-15ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿರಾಟ್ 4 ಪಂದ್ಯಗಳಲ್ಲಿ 4 ಶತಕ ಸೇರಿದಂತೆ 692 ರನ್ ಗಳಿಸಿದ್ದರು. 2016ರಲ್ಲಿ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳಲ್ಲಿ 109.16ರ ಸರಾಸರಿಯಲ್ಲಿ 655 ರನ್ ಗಳಿಸಿದ್ದರು. ಇದೀಗ 655 ರನ್​ ಹಿಂದಿಕ್ಕಿ ಜೈಸ್ವಾಲ್​ 4ನೇ ಸ್ಥಾನಕ್ಕೇರಿದ್ದಾರೆ.

ಯಶಸ್ವಿ ಜೈಸ್ವಾಲ್ ದಾಖಲೆ
100 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕುಲದೀಪ್ ಯಾದವ್

ವಿನೋದ್ ಕಾಂಬ್ಳಿ ದಾಖಲೆ ಪತನ

ಯಶಸ್ವಿ ಪ್ರಸ್ತುತ ಒಂಬತ್ತನೇ ಟೆಸ್ಟ್ ಆಡುತ್ತಿದ್ದಾರೆ. ಅವರು 16 ಇನ್ನಿಂಗ್ಸ್ ಆಡಿದ್ದಾರೆ. ಅಷ್ಟರಲ್ಲೇ ಅವರು 1,028 ರನ್ ಗಳಿಸಿದ್ದಾರೆ. ಸರಣಿಯಲ್ಲಿ ಅವರು 712 ರನ್‌ ಕಲೆ ಹಾಕಿದ್ದಾರೆ. ಈವರೆಗೆ ಒಟ್ಟು 29 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೈಸ್ವಾಲ್ ಅವರು ವಿನೋದ್ ಕಾಂಬ್ಳಿ (14) ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಜೈಸ್ವಾಲ್ 16 ಇನ್ನಿಂಗ್ಸ್ ತೆಗೆದುಕೊಂಡು ಈ ದಾಖಲೆ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com