100ನೇ ಟೆಸ್ಟ್ ನಲ್ಲಿ ಅಶ್ವಿನ್ ದಾಖಲೆಗಳ ಸುರಿಮಳೆ; ಒಂದು ಬೇಡದ ದಾಖಲೆ ಸೇರಿ ಕುಂಬ್ಳೆ, ಕಪಿಲ್ ರೆಕಾರ್ಡ್ ಧೂಳಿಪಟ!

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಾರಕ ಸ್ಪಿನ್ ಬೌಲಿಂಗ್ ಮೂಲಕ ಪ್ರದರ್ಶನ ನೀಡಿದ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅಶ್ವಿನ್ ದಾಖಲೆ
ಅಶ್ವಿನ್ ದಾಖಲೆ

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಾರಕ ಸ್ಪಿನ್ ಬೌಲಿಂಗ್ ಮೂಲಕ ಪ್ರದರ್ಶನ ನೀಡಿದ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹೌದು.. ಧರ್ಮಶಾಲಾದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 64 ರನ್ ಅಂತರದ ಜಯ ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಅಶ್ವಿನ್ ದಾಖಲೆ
ಐಪಿಎಲ್ ಹೆಚ್ಚು ಜನಪ್ರಿಯ, ಆದರೆ ಸತ್ವ ಇರುವುದು ಟೆಸ್ಟ್ ಕ್ರಿಕೆಟ್ ನಲ್ಲಿ: ಆರ್ ಅಶ್ವಿನ್

ಈ ಪಂದ್ಯದ ಮೂಲಕ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅನೇಕ ದಾಖಲೆಗಳನ್ನು ಬರೆದಿದ್ದು, ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಅಶ್ವಿನ್ ಕಬಳಿಸಿದ್ದಾರೆ. ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಲ ಐದು ವಿಕೆಟ್‌ಗಳನ್ನು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಅಲ್ಲದೆ ರಿಚರ್ಡ್ ಹಾಡ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಕುಂಬ್ಳೆ ದಾಖಲೆ ಪತನ

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಸಾಧನೆ ಮಾಡಿದ ಜಾಗತಿಕ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಇದ್ದು ಅವರು 67 ಬಾರಿ ಈ ಸಾಧನೆ ಮಾಡಿದ್ದಾರೆ. 37 ಬಾರಿ ಈ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ 2ನೇ ಸ್ಥಾನದಲ್ಲಿದ್ದು, 36 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ರಿಚರ್ಡ್ ಹಾಡ್ಲಿ 3 ಮತ್ತು ಅಷ್ಟೇ ಬಾರಿ ಈ ಸಾಧನೆ ಮಾಡಿರುವ ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ 5 ನೇ ಸ್ಥಾನಕ್ಕೆ ಜಾರಿದ್ದು ಅವರು 35 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

Most Test wickets against a team by an Indian bowler

114 - Ravichandran Ashwin vs Australia

114 - Ravichandran Ashwin vs England

111 - Anil Kumble vs Australia

99 - Kapil Dev vs Pakistan

95 - Bhagwath Chandrasekhar vs England

95 - Harbhajan Singh vs Australia

ಅಶ್ವಿನ್ ದಾಖಲೆ
IND Vs ENG: ಕ್ರಿಕೆಟ್ ನಲ್ಲಿ 112 ವರ್ಷಗಳ ಹಿಂದಿನ ಐತಿಹಾಸಿಕ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ

100ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಸಾಧನೆ.. ಮತ್ತೊಂದು ದಾಖಲೆ ಮಿಸ್

ತಮ್ಮ ಕ್ರಿಕೆಟ್ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳಿಸಿದ ಮೊದಲ ಬೌಲರ್ ಎಂದೆನಿಸಿಕೊಳ್ಳುವ ಅವಕಾಶದಿಂದ ಅಶ್ವಿನ್ ಸ್ವಲ್ಪದರಲ್ಲೇ ವಂಚಿತರಾದರು. ಮೊದಲ ಇನಿಂಗ್ಸ್‌ನಲ್ಲಿ 51ಕ್ಕೆ ನಾಲ್ಕು ವಿಕೆಟ್ ಗಳಿಸಿದ್ದ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ 77ಕ್ಕೆ ಐದು ವಿಕೆಟ್ ಪಡೆದರು. ಇದು 100ನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ನೀಡಿದ (9/128) ಶ್ರೇಷ್ಠ ಪ್ರದರ್ಶನವಾಗಿದೆ. ಈ ಹಿಂದೆ 1996ರಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 141 ರನ್ ತೆತ್ತು ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ್ದರು. 1989ರಲ್ಲಿ ಕಪಿಲ್ ದೇವ್, ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 151 ರನ್ ನೀಡಿ ಒಟ್ಟು 7 ವಿಕೆಟ್ ಗಳಿಸಿದ್ದರು.

100ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ

ಇನ್ನು 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆದ ದಿಗ್ಗಜರ ಸಾಲಿಗೆ ಅಶ್ವಿನ್ ಸಹ ಸೇರ್ಪಡೆಗೊಂಡರು. ಈ ಹಿಂದೆ 2002ರಲ್ಲಿ ಶೇನ್ ವಾರ್ನ್, 2005ರಲ್ಲಿ ಅನಿಲ್ ಕುಂಬ್ಳೆ, 2006ರಲ್ಲಿ ಮುತ್ತಯ್ಯ ಮುರಳೀಧರನ್ ಸಹ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದರು. ಈ ಪೈಕಿ ಅಶ್ವಿನ್ ಪದಾರ್ಪಣೆ ಹಾಗೂ 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ ಏಕಮಾತ್ರ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Most five-wicket hauls in Tests

67 - Muttiah Muralitharan

37 - Shane Warne

36 - Richard Hadlee

36 - Ravichandran Ashwin

35 - Anil Kumble

ಅಶ್ವಿನ್ ದಾಖಲೆ
100 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕುಲದೀಪ್ ಯಾದವ್

ಬೇಡದ ದಾಖಲೆ

ಧರ್ಮಶಾಲಾ ಟೆಸ್ಟ್ ನಲ್ಲಿ 9 ವಿಕೆಟ್ ಪಡೆದು ದಾಖಲೆ ನಿರ್ಮಿಸಿರುವ ಅಶ್ವಿನ್ ಬ್ಯಾಟಿಂಗ್ ವೇಳೆ ಬೇಡದ ದಾಖಲೆ ಪಾತ್ರರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ಅಶ್ವಿನ್ ಬ್ಯಾಟಿಂಗ್‌ಗೆ ಇಳಿದಾಗ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವೆಲಿಯನ್​ ಸೇರಿದರು. ಇಂಗ್ಲೆಂಡ್ ತಂಡದ ಸ್ಪಿನ್ನರ್ ಟಾಪ್ ಹಾರ್ಟ್ಲಿ ಅಶ್ವಿನ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ವಿಶ್ವದ ಎಂಟನೇ ಕ್ರಿಕೆಟಿಗ ಎನಿಸಿಕೊಂಡರು. ಆರ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ಎಸೆತಗಳನ್ನು ಎದುರಿಸಿದರು ಆದರೆ ಅವರು ಖಾತೆ ತೆರೆಯಲು ವಿಫಲರಾದರು. 37ರ ಹರೆಯದ ಅಶ್ವಿನ್‌ಗೂ ಮುನ್ನ ಈ ಬೇಡದ ದಾಖಲೆ ಭಾರತದ ದಿಗ್ಗಜ ದಿಲೀಪ್ ವೆಂಗ್‌ಸರ್ಕರ್ ಹೆಸರಿನಲ್ಲಿ ದಾಖಲಾಗಿದೆ.

Bowlers with a five-wicket haul in 100th Test

6/161 - Shane Warne (AUS) vs SA, Cape Town, 2002

5/89 - Anil Kumble (IND) vs SL, Ahmedabad, 2005

6/54 - Muttiah Muralitharan (SL) vs BAN, Chattogram, 2006

5/77 - Ravichandran Ashwin (IND) vs ENG, Dharamsala, 2024

Ashwin is the first bowler to bag a five-for on his debut as well as 100th Test.

ಅಶ್ವಿನ್ ಮತ್ತು ವೆಂಗ್‌ಸರ್ಕರ್ ಅವರಲ್ಲದೆ, ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್, ವೆಸ್ಟ್ ಇಂಡೀಸ್ ಮಾಜಿ ವೇಗದ ಬೌಲರ್ ಕರ್ಟ್ನಿ ವಾಲ್ಷ್, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ಕ್ ಟೇಲರ್, ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್, ಬ್ರೆಂಡನ್ ಮೆಕಲಮ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಅಲೆಸ್ಟರ್ ಕುಕ್ ಅವರ 100ನೇ ಟೆಸ್ಟ್‌ನಲ್ಲಿ ಡಕ್‌ಗೆ ಔಟಾಗಿದ್ದಾರೆ. ಅಲ್ಲದೇ ಅನುಭವಿ ಚೇತೇಶ್ವರ ಪೂಜಾರ ಕೂಡ ತಮ್ಮ 100ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇತ್ತ ಅಶ್ವಿನ್ ತಮ್ಮ 100ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 511 ವಿಕೆಟ್ ಪಡೆದಿದ್ದಾರೆ.

Best match-returns in 100th Test

9/128 - Ravichandran Ashwin (IND) vs ENG, Dharamsala, 2024

9/141 - Muttiah Muralitharan (SL) vs BAN, Chattogram, 2006

8/231 - Shane Warne (AUS) vs SA, Cape Town, 2002

7/151 - Kapil Dev (IND) vs PAK, Karachi, 1989

7/176 - Anil Kumble (IND) vs SL, Ahmedabad

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com