IPL 2024: ಹೈದರಾಬಾದ್ ವಿರುದ್ಧ ಪ್ರಭಾವಿ ಬೌಲಿಂಗ್ ಮಾಡಿ ಪಂದ್ಯ ಗೆದ್ದುಕೊಟ್ಟ ಕೋಲ್ಕತ್ತಾ ವೇಗಿ ಹರ್ಷಿತ್ ರಾಣಾಗೆ ದಂಡ.. ಕಾರಣ ಏನು?

ಐಪಿಎಲ್ 2024ರ ಟೂರ್ನಿ ಪ್ರಾರಂಭವಾಗಿದ್ದು, ಈಗಾಗಲೇ ಪಂದ್ಯಗಳು ರೋಚಕ ಹಣಾಹಣಿ ಕಾಣುತ್ತಿರುವಂತೆಯೇ ಕೋಲ್ಕತಾ ವೇಗಿ ಹರ್ಷಿತ್ ರಾಣಾಗೆ ಬಿಸಿಸಿಐ ದಂಡ ಹೇರಿದೆ.
ಕೋಲ್ಕತ್ತಾ ವೇಗಿ ಹರ್ಷಿತ್ ರಾಣಾಗೆ ದಂಡ
ಕೋಲ್ಕತ್ತಾ ವೇಗಿ ಹರ್ಷಿತ್ ರಾಣಾಗೆ ದಂಡ

ಕೋಲ್ಕತಾ: ಐಪಿಎಲ್ 2024ರ ಟೂರ್ನಿ ಪ್ರಾರಂಭವಾಗಿದ್ದು, ಈಗಾಗಲೇ ಪಂದ್ಯಗಳು ರೋಚಕ ಹಣಾಹಣಿ ಕಾಣುತ್ತಿರುವಂತೆಯೇ ಕೋಲ್ಕತಾ ವೇಗಿ ಹರ್ಷಿತ್ ರಾಣಾಗೆ ಬಿಸಿಸಿಐ ದಂಡ ಹೇರಿದೆ.

ಹೌದು.. ಐಪಿಎಲ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮಧ್ಯಮ ವೇಗದ ಬೌಲರ್‌ ಹರ್ಷಿತ್‌ ರಾಣಾ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ವಿರುದ್ಧ ಶನಿವಾರ ನಡೆದ ಪಂದ್ಯ ಶುಲ್ಕದ ಶೇ 60ರಷ್ಟು ದಂಡ ಹೇರಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್ ಆಡಳಿತ ಮಂಡಳಿ, 'ರಾಣಾ ಅವರು, ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್‌ 2.5 ಅಡಿಯಲ್ಲಿ ಎರಡು ಬಾರಿ ಲೆವಲ್‌ 1 ಅಪರಾಧ ಮಾಡಿದ್ದಾರೆ. ಎರಡು ಬಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ ಶೇ 10 ಹಾಗೂ ಶೆ 50 ರಷ್ಟು ದಂಡ ವಿಧಿಸಲಾಗಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಕೋಲ್ಕತ್ತಾ ವೇಗಿ ಹರ್ಷಿತ್ ರಾಣಾಗೆ ದಂಡ
IPL 2024: ಚೆನ್ನೈ ವಿರುದ್ಧ ಪಂದ್ಯ ಸೋತ ಬೆನ್ನಲ್ಲೇ ನಿವೃತ್ತಿಯ ಸುಳಿವು ನೀಡಿದ RCB ಆಟಗಾರ

ಆರ್ಟಿಕಲ್‌ 2.5, ವಿಕೆಟ್ ಪಡೆದ ವೇಳೆ ಸಂಭ್ರಮಿಸುವಾಗ ಬ್ಯಾಟರ್‌ ಅನ್ನು ಕೆರಳಿಸುವಂತೆ ಅತಿಯಾಗಿ ವರ್ತಿಸುವುದು, ಪ್ರಚೋದನಕಾರಿ ಭಾಷೆ ಅಥವಾ ಸನ್ನೆ ಬಳಸುವುದಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಮಯಂಕ್‌ ಅಗರವಾಲ್‌ ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದಕ್ಕಾಗಿ ರಾಣಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ.

ಹೈದರಾಬಾದ್ ಬ್ಯಾಟಿಂಗ್‌ ವೇಳೆ ಆರನೇ ಓವರ್‌ ಎಸೆದ ರಾಣಾ, ಮಯಂಕ್‌ ಅವರನ್ನು ಔಟ್‌ ಮಾಡಿದ್ದರು. ಬಳಿಕ ಅವರತ್ತ 'ಫ್ಲೈಯಿಂಗ್‌ ಕಿಸ್‌' ನೀಡಿ ಸಂಭ್ರಮಿಸಿದ್ದರು.

ಕೋಲ್ಕತ್ತಾ ವೇಗಿ ಹರ್ಷಿತ್ ರಾಣಾಗೆ ದಂಡ
ಐಪಿಎಲ್ ಹೆಚ್ಚು ಜನಪ್ರಿಯ, ಆದರೆ ಸತ್ವ ಇರುವುದು ಟೆಸ್ಟ್ ಕ್ರಿಕೆಟ್ ನಲ್ಲಿ: ಆರ್ ಅಶ್ವಿನ್

ಕೋಲ್ಕತಾಗೆ ರೋಚಕ ಜಯ

ಇನ್ನು ಹೈದರಾಬಾದ್ ವಿರುದ್ಧ ಕೆಕೆಆರ್ ತಂಡ ಬೃಹತ್ ಗುರಿಯ ಹೊರತಾಗಿಯೂ ಕೋಲ್ಕತಾ ರೋಚಕ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ರಸೆಲ್‌ (64 ರನ್) ಮತ್ತು ಸಾಲ್ಟ್ (54 ರನ್) ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 208 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ ಹೆನ್ರಿಚ್ ಕ್ಲಾಸನ್ (63 ರನ್), ಮಯಾಂಕ್ ಅಗರ್ವಾಲ್ (32 ರನ್), ಅಭಿಷೇಕ್ ಶರ್ಮಾ (32 ರನ್) ತಂಡವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರಾದರೂ, ಅಂತಿಮ ಓವರ್‌ ಎಸೆದ ಹರ್ಷಿತ್‌ ರಾಣಾ ತಮ್ಮ ಉತ್ತಮ ಬೌಲಿಂಗ್ ಮೂಲಕ ಕೋಲ್ಕತಾಗೆ 4 ರನ್ ಗಳ ಜಯತಂದಿತ್ತರು.

ಅಂತಿಮ ಓವರ್ ನಲ್ಲಿ ಹೈದರಾಬಾದ್ ಜಯಕ್ಕೆ 13 ರನ್ ಬೇಕಿತ್ತು. ಹರ್ಷಿತ್‌ ರಾಣಾ, ಮೊದಲ ಎಸೆತದಲ್ಲೇ ಸಿಕ್ಸರ್‌ ಬಿಟ್ಟುಕೊಟ್ಟರು. ಆದರೆ, ನಂತರದ ಎಸೆತದಲ್ಲಿ 1 ರನ್ ಮಾತ್ರ ನೀಡಿ, ಮರು ಎಸೆತದಲ್ಲಿ ಅಹ್ಮದ್‌ ವಿಕೆಟ್‌ ಪಡೆದರು. ಅದೇ ರೀತಿ 4ನೇ ಎಸೆತದಲ್ಲಿ ಒಂದು ರನ್‌ ನೀಡಿ, ಪುನಃ ಕ್ಲಾಸೆನ್‌ ವಿಕೆಟ್‌ ಕಿತ್ತರು. ಅಲ್ಲಿಗೆ ಕೆಕೆಆರ್‌ ಜಯ ಬಹುತೇಕ ಖಾತ್ರಿಯಾಯಿತು. ಕೊನೇ ಎಸೆತದಲ್ಲಿ ಎಸ್‌ಆರ್‌ಎಚ್‌ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ವಂಚಿಸಿ ಡಾಟ್‌ ಬಾಲ್ ಎಸೆದು, ಪಂದ್ಯ ಗೆದ್ದುಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com