
ಬೆಂಗಳೂರು: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ವಿರಾಟ್ ಕೊಹ್ಲಿ ಮಾಡಿದ ಅದ್ಭುತ ರನೌಟ್ ಇದೀಗ ಎಲ್ಲೆಡೆ ಸುದ್ದಿಗೆ ಗ್ರಾಸವಾಗುತ್ತಿದ್ದು, ಸ್ವತಃ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಆಶ್ಚರ್ಯ ಚಕಿತರಾದರು.
ಹೌದು.. ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಆರ್ಸಿಬಿ 4 ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat- Anushka) ಅವರು ಎದುರಾಳಿ ತಂಡದ ಆಟಗಾರ ಶಾರೂಖ್ ಖಾನ್ ಅವರನ್ನು ಮಿಂಚಿನ ಎಸೆತದ ಮೂಲಕ ರನೌಟ್ ಮಾಡಿ ಗಮನ ಸೆಳೆದರು.
ಮೈನಸ್ ಸೆಕೆಂಡ್ ಸಮಯದಲ್ಲಿ ಕೊಹ್ಲಿ ರನೌಟ್ ಮಾಡಿದ್ದು, ಪತಿ ಕೊಹ್ಲಿ ಬುಲೆಟ್ ಚಿಮ್ಮಿದ ವೇಗದಲ್ಲಿ ರನೌಟ್ ಮಾಡಿದ್ದನ್ನು ಕಂಡು ಪತ್ನಿ ಅನುಷ್ಕಾ(Anushka Sharma) ದಂಗಾಗಿದ್ದಾರೆ. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ಎರಡನೇ ಮಗುವಾದ ಬಳಿಕ ಅನುಷ್ಕಾ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ವಿರಾಟ್ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಐಪಿಎಲ್ನ ದ್ವಿತಿಯಾರ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಪತಿಗೆ ಚಿಯರ್ ಅಪ್ ಮಾಡಿದ್ದರು.
ನಿನ್ನೆ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತ ಕಂಡಿದ್ದ ಗುಜರಾತ್ಗೆ ಶಾರೂಖ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಆಸರೆಯಾಗಿದ್ದರು. 24 ಎಸೆತಗಳಿಂದ 37 ರನ್ ಗಳಿಸಿ ನಾನ್ಸ್ಟ್ರೈಕ್ನಲ್ಲಿದ್ದ ಶಾರೂಖ್ ಇಲ್ಲದ ರನ್ ಕದಿಯಲು ಯತ್ನಿಸಿದ ವೇಳೆ ಚಿರತೆ ವೇಗದಲ್ಲಿ ಫೀಲ್ಡಿಂಗ್ ನಡೆಸಿ ಕೊಹ್ಲಿ ಚೆಂಡನ್ನು ನೇರವಾಗಿ ವಿಕೆಟ್ಗೆ ಎಸೆದು ರನೌಟ್ ಮಾಡಿದರು.
ಒಂದೊಮ್ಮೆ ಕೊಹ್ಲಿ ಈ ರನೌಟ್ ಮಾಡದಿದ್ದರೆ ಶಾರೂಖ್ ಆರ್ಸಿಬಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆಯೂ ಇತ್ತು. ಆದರೆ ಕೊಹ್ಲಿ ಮಾಡಿದ್ದ ಆ ರನೌಟ್ ಪಂದ್ಯದ ಗತಿಯನ್ನೇ ಬದಲಿಸಿತು. ಇದೇ ರನೌಟ್ ಇದೀಗ ವ್ಯಾಪಕ ವೈರಲ್ ಆಗುತ್ತಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್ಗಳಲ್ಲಿ 147 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.
Advertisement