ಚೆನ್ನೈನಲ್ಲಿ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ-ಭಾರತ ವನಿತೆಯರ ಟೆಸ್ಟ್ ಪಂದ್ಯ!

ಜೂನ್ 28 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಹಿಳಾ ಕ್ರಿಕೆಟ್ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, 10 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಆಡಲಿದೆ.
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್

ಚೆನ್ನೈ: ಜೂನ್ 28 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಹಿಳಾ ಕ್ರಿಕೆಟ್ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, 10 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಆಡಲಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯದೊಂದಿಗೆ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳು ಜೂನ್ 16 ರಿಂದ ಆರಂಭವಾಗಲಿದೆ. ಜುಲೈ 5 ರಿಂದ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದೆ. ಶ್ರೀಲಂಕಾದಲ್ಲಿ ಜುಲೈ 19 ರಿಂದ ಏಷ್ಯಾಕಪ್ ಆರಂಭವಾಗಲಿದೆ.

ಹರ್ಮನ್‌ಪ್ರೀತ್ ಕೌರ್
ಮಹಿಳಾ ಕ್ರಿಕೆಟ್ ಗೆ ಅವಕಾಶ ನೀಡದಿದ್ದರೆ, ಆಸಿಸ್-ಅಫ್ಘಾನ್ ಐತಿಹಾಸಿಕ ಟೆಸ್ಟ್ ರದ್ದು!: ತಾಲಿಬಾನ್ ಗೆ ಆಸ್ಟ್ರೇಲಿಯಾ ತಿರುಗೇಟು

ಜೂನ್ 16 ರಿಂದ ಮೂರು ODIಗಳಿಗೆ ಬೆಂಗಳೂರು ಆತಿಥ್ಯ ವಹಿಸಿದ್ದರೆ, ಚೆನ್ನೈ ಜುಲೈ 5 ರಿಂದ ಜುಲೈ 9 ರವರೆಗೆ ಮೂರು T20I ಗಳಿಗೆ ಆತಿಥ್ಯ ವಹಿಸಲಿದೆ. 1976ರ ನಂತರ ಇಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯ ಇದಾಗಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಡಿಸೆಂಬರ್ 2023 ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಮತ್ತೊಂದೆಡೆ, ಲಾರಾ ವೊಲ್ವಾರ್ಡ್ ಈ ವರ್ಷದ ಆರಂಭದಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ಪ್ರಚಾರಕ್ಕಾಗಿ BCCI ಈ ವರ್ಷ ಪುಣೆಯಲ್ಲಿ ಹಿರಿಯ ಮಹಿಳೆಯರ ಅಂತರ ವಲಯ ಬಹು-ದಿನದ ಟ್ರೋಫಿಯನ್ನು ಪುನರಾರಂಭಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com