ನಿಮ್ಮ ಬೌಲಿಂಗ್​ನಲ್ಲಿ ಪವರ್ ಇಲ್ಲ: ಮಿಚೆಲ್ ಸ್ಟಾರ್ಕ್‌ ಕಾಲೆಳೆದ ಜೈಸ್ವಾಲ್; ಸಾರ್ವಜನಿಕವಾಗಿ ಮುಜುಗರಕ್ಕೀಡಾದ ವೇಗಿ, ವಿಡಿಯೋ!

ಪಂದ್ಯದ ಎರಡನೇ ದಿನದಂದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ಆಸ್ಟ್ರೇಲಿಯದ ಬೌಲರ್‌ಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.
ಯಶಸ್ವಿ ಜೈಸ್ವಾಲ್-ಮಿಚೆಲ್ ಸ್ಟಾರ್ಕ್‌
ಯಶಸ್ವಿ ಜೈಸ್ವಾಲ್-ಮಿಚೆಲ್ ಸ್ಟಾರ್ಕ್‌
Updated on

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ ಪಂದ್ಯದ ರೋಚಕತೆ ಉತ್ತುಂಗಕ್ಕೇರಿದೆ. ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ ನಲ್ಲಿ 104 ರನ್‌ಗಳಿಗೆ ಆಲೌಟ್ ಆದ ನಂತರ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾ ಬೌಲರ್‌ಗಳ ಬೆಂಡಿತ್ತಿದರು. ಎರಡನೇ ದಿನದಾಟದ ಅಂತ್ಯಕ್ಕೆ ಯಶಸ್ವಿ ಜೈಸ್ವಾಲ್ ಅಜೇಯ 90 ರನ್ ಹಾಗೂ ಕೆಎಲ್ ರಾಹುಲ್ ಅಜಯೇ 62 ರನ್ ಗಳಿಸಿದ್ದಾರೆ. ಈ ಮೂಲಕ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಗಳಿಸಿದೆ.

ಪಂದ್ಯದ ಎರಡನೇ ದಿನದಂದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ಆಸ್ಟ್ರೇಲಿಯದ ಬೌಲರ್‌ಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ಈ ಸಮಯದಲ್ಲಿ, ಯಶಸ್ವಿ ಜೈಸ್ವಾಲ್ ಅವರು ಮಿಚೆಲ್ ಸ್ಟಾರ್ಕ್ ಅವರನ್ನು ಟ್ರೋಲ್ ಮಾಡಿದರು. ಸ್ಟಾರ್ಕ್ ಜೈಸ್ವಾಲ್ ಗೆ ಬೌಲಿಂಗ್ ಮಾಡುವಾಗ, ಇಬ್ಬರ ನಡುವೆ ಸ್ವಲ್ಪ ವಾಗ್ವಾದ ನಡೆಯಿತು.

ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಮಿಚೆಲ್ ಸ್ಟಾರ್ಕ್ ಗಂಟೆಗೆ ಸುಮಾರು 140 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದರು. ಅಷ್ಟರಲ್ಲಿ ಸ್ಟಾರ್ಕ್ ಬೌಲ್ ಮಾಡಿದ ಚೆಂಡನ್ನು ಯಶಸ್ವಿಗೆ ಲೆಂಗ್ತ್ ಕಡಿಮೆಯಿತ್ತು. ಜೈಸ್ವಾಲ್ ಕೂಡ ಅದನ್ನು ಸಮರ್ಥಿಸಿಕೊಂಡರು. ಇದರ ನಂತರ, ಸ್ಟಾರ್ಕ್ ಜೈಸ್ವಾಲ್ ಕಡೆಗೆ ನೋಡಿದರು. ಇದಕ್ಕೆ ಭಾರತೀಯ ಬ್ಯಾಟ್ಸ್‌ಮನ್ ತಕ್ಕ ಉತ್ತರ ನೀಡಿದ್ದು ನಿಮ್ಮ ಬೌಲಿಂಗ್​ನಲ್ಲಿ ಪವರ್ ಇಲ್ಲ ಎಂದು ಹೇಳಿದರು.

ಯಶಸ್ವಿ ಜೈಸ್ವಾಲ್-ಮಿಚೆಲ್ ಸ್ಟಾರ್ಕ್‌
BGT 2025: ಆಸಿಸ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಇಂಗ್ಲೆಂಡ್ ದಾಂಡಿಗರ 14 ವರ್ಷಗಳ ದಾಖಲೆ ಮುರಿದ ರಾಹುಲ್-ಜೈಸ್ವಾಲ್ ಜೋಡಿ!

ವಾಸ್ತವವಾಗಿ, ಯಶಸ್ವಿ ಜೈಸ್ವಾಲ್ ಉದ್ದೇಶಪೂರ್ವಕವಾಗಿ ಇದನ್ನು ಸ್ಟಾರ್ಕ್‌ಗೆ ಹೇಳಿದ್ದರು. ಸ್ಟಾರ್ಕ್ ವಿಶ್ವದ ಅತ್ಯಂತ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರ ನಿಖರ ಯಾರ್ಕರ್‌ಗಳು ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಜೈಸ್ವಾಲ್ ಉದ್ದೇಶಪೂರ್ವಕವಾಗಿ ಅವನನ್ನು ಪ್ರಚೋದಿಸಲು ಪ್ರಯತ್ನಿಸಿದ್ದು ಇದರಿಂದ ಬೌಲರ್ ಅನ್ನು ಲಯದಿಂದ ವಿಮುಖಗೊಳಿಸುವ ಪ್ರಯತ್ನ ಸಹ ಇದಾಗಿತ್ತು.

ಇನ್ನು ಟೀಂ ಇಂಡಿಯಾ ಮುನ್ನಡೆ ಬಗ್ಗೆ ಹೇಳುವುದಾದರೆ 200 ರನ್ ದಾಟಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 150 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡ ಕೇವಲ 104 ರನ್‌ಗಳಿಗೆ ಕುಸಿದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳ ಮುನ್ನಡೆ ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com