ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2025 ಟೂರ್ನಿಯ ಹರಾಜು ಪ್ರಕ್ರಿಯೆ ಕೊನೆಗೂ ಮುಕ್ತಾಯಗೊಂಡಿದ್ದು, ಮೆಗಾ ಹರಾಜಿನ ಮೂಲಕ 10 ತಂಡಗಳಿಗೆ ಒಟ್ಟು 182 ಆಟಗಾರರು ಆಯ್ಕೆಯಾಗಿದ್ದಾರೆ.
ಹೌದು.. ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ IPL 2025 ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಹರಾಜಿನಲ್ಲಿ ಒಟ್ಟು 182 ಆಟಗಾರರು 10 ತಂಡಗಳಿಗೆ ಆಯ್ಕೆಯಾಗಿದ್ದಾರೆ.
ಈ ಪೈಕಿ ಕರ್ನಾಟಕ ಮೂಲದ ಆಟಗಾರರಾದ ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಸೇರಿದಂತೆ ಹಲವು ಪ್ರಮುಖ ಆಟಗಾರರು ಕೂಡ ವಿವಿಧ ತಂಡಗಳ ಪಾಲಾಗಿದ್ದು, ಆರ್ ಸಿಬಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕೆಎಲ್ ರಾಹುಲ್ ಇದೀಗ ಮತ್ತೆ ಬೇರೆ ತಂಡದ ಪಾಲಾಗಿದ್ದಾರೆ.
ಹಾಗಾದರೆ ಹಾಲಿ ಐಪಿಎಲ್ ಟೂರ್ನಿಯಲ್ಲಿರುವ ಕರ್ನಾಟಕ ಮೂಲದ ಆಟಗಾರರು ಯಾರು..? ಅವರು ಯಾವ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..
ಈ ಬಾರಿ ಐಪಿಎಲ್ ನಲ್ಲಿ ಒಟ್ಟು 13 ಮಂದಿ ಕರ್ನಾಟಕದ ಮೂಲದ ಆಟಗಾರರು ಐಪಿಎಲ್ ನ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಲ್ಲಿ ಕರ್ನಾಟಕದ 13 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಹದಿಮೂರು ಮಂದಿಯಲ್ಲಿ ಮೂವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರಿದ್ದಾರೆ.
ಕರ್ನಾಟಕದ ಆಟಗಾರರ ಪಟ್ಟಿ
ಕೆಎಲ್ ರಾಹುಲ್ (ಡೆಲ್ಲಿ ಕ್ಯಾಪಿಟಲ್ಸ್)
ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟನ್ಸ್)
ವೈಶಾಕ್ ವಿಜಯಕುಮಾರ್ (ಪಂಜಾಬ್ ಕಿಂಗ್ಸ್)
ಕರುಣ್ ನಾಯರ್ (ಡೆಲ್ಲಿ ಕ್ಯಾಪಿಟಲ್ಸ್)
ಶ್ರೀಜಿತ್ ಕೃಷ್ಣನ್ (ಮುಂಬೈ ಇಂಡಿಯನ್ಸ್)
ಶ್ರೇಯಸ್ ಗೋಪಾಲ್ (ಚೆನ್ನೈ ಸೂಪರ್ ಕಿಂಗ್ಸ್)
ಮನೀಶ್ ಪಾಂಡೆ (ಕೋಲ್ಕತಾ ನೈಟ್ ರೈಡರ್ಸ್)
ಲವ್ನೀತ್ ಸಿಸೋಡಿಯಾ (ಕೋಲ್ಕತಾ ನೈಟ್ ರೈಡರ್ಸ್)
ದೇವದತ್ ಪಡಿಕ್ಕಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಅಭಿನವ್ ಮನೋಹರ್ (ಸನ್ ರೈಸರ್ಸ್ ಹೈದರಾಬಾದ್)
ಮನ್ವಂತ್ ಕುಮಾರ್ (ಡೆಲ್ಲಿ ಕ್ಯಾಪಿಟಲ್ಸ್)
ಪ್ರವೀಣ್ ದುಬೆ (ಪಂಜಾಬ್ ಕಿಂಗ್ಸ್)
Advertisement