
ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಟಿ20ಯಲ್ಲಿ ದಾಖಲೆಗಳ ಸುರಿಮಳೆಯನ್ನೇ ಸೃಷ್ಟಿಸಿದೆ.
ಹೌದು.. ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು.
ಭಾರತ ತಂಡದ ಪರ ಸಂಜು ಸ್ಯಾಮ್ಸನ್ (111 ರನ್) ಅಮೋಘ ಶತಕ ಸಿಡಿಸಿದರೆ, ಸೂರ್ಯ ಕುಮಾರ್ (75 ರನ್) ಅರ್ಧಶತಕ, ಹಾರ್ದಿಕ್ ಪಾಂಡ್ಯ (47 ರನ್) ಮತ್ತು ರಿಯಾನ್ ಪರಾಗ್ (34) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಭಾರತ ತಂಡ ಹಲವು ದಾಖಲೆಗಳಿಗೆ ಪಾತ್ರವಾಗಿದೆ.
ಗರಿಷ್ಟ ರನ್ ರೇಟ್ ನಲ್ಲಿ 150ರನ್ ಜೊತೆಯಾಟ
ಇನ್ನು ಈ ಪಂದ್ಯದಲ್ಲಿ ಭಾರತದ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಜೋಡಿ ಕೇವಲ 69 ಎಸೆತಗಳಲ್ಲಿ 15.04 ರನ್ ರೇಟ್ ನಲ್ಲಿ 173 ಜೊತೆಯಾಟ ನೀಡಿತ್ತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ದಾಖಲಾದ 2ನೇ ಗರಿಷ್ಟ ರನ್ ರೇಟ್ ನಲ್ಲಿ 150 ರನ್ ಜೊತೆಯಾಟವಾಗಿದೆ.
ಇದಕ್ಕೂ ಮೊದಲು 2023ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳದ ಕುಶಾಲ್ ಮಲ್ಲಾ ಮತ್ತು ರೋಹಿತ್ ಪೌಡೆಲ್ ಜೋಡಿ 65 ಎಸೆತಗಳಲ್ಲಿ 17.81 ರನ್ ರೇಟ್ ನಲ್ಲಿ 193 ಜೊತೆಯಾಟವಾಡಿದ್ದರು. ಇದು ಅಂತಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲಾದ ಗರಿಷ್ಠ ರನ್ ರೇಟ್ ನ 150 ರನ್ ಜೊತೆಯಾಟವಾಗಿದೆ.
Highest run-rates for a 150-plus T20I partnership
17.81 - 193(65) - Kushal Malla, Rohit Paudel (NEP) vs Mongolia, Hangzhou, 2023
15.04 - 173(69) - Sanju Samson, Suryakumar Yadav (IND) vs BAN, Hyderabad, 2024
14.75 - 182(74) - Dawid Malan, Eoin Morgan (ENG) vs NZ, Napier, 2019
14.03 - 152(65) - Quinton de Kock, Reeza Hendricks (SA) vs WI, Centurion, 2023
13.62 - 184(81) - Devon Conway, Glenn Phillips (NZ) vs WI, Mount Maunganui, 2020
ಟಿ20ಯಲ್ಲಿ 2ನೇ ವಿಕೆಟ್ ನಲ್ಲಿ 4ನೇ ಗರಿಷ್ಠ ಜೊತೆಯಾಟ
ಇನ್ನು ಇದೇ ಪಂದ್ಯದಲ್ಲಿ ಸೂರ್ಯ ಕುಮಾರ್ ಮತ್ತು ಸಂಜು ಸ್ಯಾಮ್ಸನ್ ಜೋಡಿ 2ನೇ ವಿಕೆಟ್ ಗೆ 173 ರನ್ ಕಲೆಹಾಕಿತ್ತು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ 2ನೇ ವಿಕೆಟ್ ಜೊತೆಯಾಟದಲ್ಲಿ ಬಂದ 4ನೇ ಗರಿಷ್ಠ ರನ್ ಜೊತೆಯಾಟವಾಗಿದೆ.
Highest 2nd-wicket partnership in T20Is
193 - Sybrand Engelbrecht & Michael Levitt (NED) vs NAM, Kirtipur, 2024
183 - Ollie Hairs & Brandon McMullen (SCOT) vs ITALY, Edinburgh, 2023
176 - Sanju Samson & Deepak Hooda (IND) vs IRE, Malahide, 2022
173 - Sanju Samson & Suryakumar Yadav (IND) vs BAN, Hyderabad, 2024
168 - Quinton de Kock & Rilee Rossouw (SA) vs BAN, Sydney, 2022
ಭಾರತದ 3ನೇ ಗರಿಷ್ಠ ರನ್ ಜೊತೆಯಾಟ
ಇನ್ನು ಸೂರ್ಯ ಕುಮಾರ್ ಮತ್ತು ಸಂಜು ಸ್ಯಾಮ್ಸನ್ ಜೋಡಿ ಗಳಿಸಿದ 173 ರನ್ ಜೊತೆಯಾಟ ಭಾರತದ ಪರ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾದ 3ನೇ ಗರಿಷ್ಠ ರನ್ ಜೊತೆಯಾಟವಾಗಿದೆ. ಇದಕ್ಕೂ ಮೊದಲು ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಜೋಡಿ ಮುರಿಯದ 190 ರನ್ ಜೊತೆಯಾಟವಾಡಿತ್ತು. ಇದು ಭಾರತದ ಪರದಾಖಲಾದ ಗರಿಷ್ಟ ರನ್ ಜೊತೆಯಾಟವಾಗಿದೆ.
Highest partnerships for India in T20Is (any wicket)
190* - Rohit Sharma & Rinku Singh vs AFG, Bengaluru, 2024
176 - Sanju Samson & Deepak Hooda vs IRE, Malahide, 2022
173 - Sanju Samson & Suryakumar Yadav vs BAN, Hyderabad, 2024
165 - Rohit Sharma & KL Rahul vs SL, Indore, 2017
165 - Yashasvi Jaiswal & Shubman Gill vs WI, Lauderhill, 2023
Advertisement