ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಟಾಸ್ ಕೂಡ ಕಾಣದೇ ರದ್ದಾಗಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆ ಮೊದಲ ಟೆಸ್ಟ್ ಪಂದ್ಯಕ್ಕೆ ಅಡ್ಡಿಯಾಗಿದ್ದು, ಇಂದೂ ಕೂಡ ಮಳೆ ಮುಂದುವರೆದಿತ್ತು.
ಇಂದು ಬೆಳಗ್ಗೆ ಮಳೆ ನಿಂತು ಆಟ ಆರಂಭವಾಗುವ ವಿಶ್ವಾಸವಿತ್ತು. ಆದರೆ ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಸತತ ಮೂರನೇ ಬಾರಿಯ ಪರಿಶೀಲನೆ ಬಳಿಕ ಅಂಪೈರ್ ಗಳು ಮೊದಲ ದಿನದಾಟವನ್ನು ರದ್ದು ಮಾಡಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇಲ್ಲಿ ಅತ್ಯುತ್ತಮ ವಾಟರ್ ಡ್ರೈನ್ ವ್ಯವಸ್ಥೆ ಇದೆ. ಹೀಗಾಗಿ ಎಂತಹ ದೊಡ್ಡ ಮಳೆಯೇ ಬಂದರೂ ಮಳೆ ನಿಂತ ಕೇವಲ 7 ನಿಮಿಷದಲ್ಲಿ ಇಡೀ ಮೈದಾನವನ್ನು ಒಣಗಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ.
ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಆಟಕ್ಕೆ ಅಡ್ಡಿಯಾದ ಪರಿಣಾಮ ಅಂಪೈರ್ ಗಳು ದಿನದಾಟ ರದ್ದು ಮಾಡಿದರು.
Advertisement