
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 46 ರನ್ ಗೆ ಆಲೌಟ್ ಆಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 46 ರನ್ ಗಳಿಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ವೇಗಿಗಳ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ಕೇವಲ 31.2 ಓವರ್ ನಲ್ಲಿ 46 ರನ್ ಗಳಿಸಿ ಆಲೌಟ್ ಆಗಿದೆ.
ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (13) ಮತ್ತು ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (20) ಹೊರತು ಪಡಿಸಿದರೆ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ. ನಾಯಕ ರೋಹಿತ್ ಶರ್ಮಾ (2 ರನ್), ಕುಲದೀಪ್ ಯಾದವ್ (2 ರನ್) ಮತ್ತು ಜಸ್ ಪ್ರೀತ್ ಬುಮ್ರಾ (1 ರನ್) ಒಂದಂಕಿ ಮೊತ್ತಕ್ಕೆ ಔಟಾದರೆ, ವಿರಾಟ್ ಕೊಹ್ಲಿ (ಶೂನ್ಯ), ಸರ್ಫರಾಜ್ ಖಾನ್ (ಶೂನ್ಯ), ಕೆಎಲ್ ರಾಹುಲ್ (ಶೂನ್ಯ), ರವೀಂದ್ರ ಜಡೇಜಾ (ಶೂನ್ಯ), ಆರ್ ಅಶ್ವಿನ್ (ಶೂನ್ಯ), ಡಕೌಟ್ ಆದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 1, ಮ್ಯಾಟ್ ಹೆನ್ರಿ 5 ಮತ್ತು ವಿಲಿಯಂ ಓರೌರ್ಕೆ 4 ವಿಕೆಟ್ ಪಡೆದು ಭಾರತ ತಂಡದ ಪತನಕ್ಕೆ ಕಾರಣರಾದರು.
Advertisement