ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದು 2ನೇ ದಿನದಾಟ ಭೋಜನ ವಿರಾಮದ ವೇಳೆಗೆ ಕೇವಲ 34 ರನ್ ಗಳಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿತ್ತು.
2ನೇ ದಿನ ಆಟ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ನ್ಯೂಜಿಲೆಂಡ್ ನ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿರುವ ಭಾರತ ಕೇವಲ 34 ರನ್ ಗಳಿಗೆ ತನ್ನ 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಆರಂಭಿಕರಾಗ ಯಶಸ್ವಿ ಜೈಸ್ವಾಲ್ (13 ರನ್)ಸ ರೋಹಿತ್ ಶರ್ಮಾ (2 ರನ್), ವಿರಾಟ್ ಕೊಹ್ಲಿ (ಶೂನ್ಯ), ಸರ್ಫರಾಜ್ ಖಾನ್ (ಶೂನ್ಯ), ಕೆಎಲ್ ರಾಹುಲ್ (ಶೂನ್ಯ) ಮತ್ತು ರವೀಂದ್ರ ಜಡೇಜಾ (ಶೂನ್ಯ) ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ 15ರನ್ ಗಳಿಸಿರುವ ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದು, ಆರ್ ಅಶ್ವಿನ್ ಬ್ಯಾಟಿಂಗ್ ಮಾಡಬೇಕಿದೆ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 1, ಮ್ಯಾಟ್ ಹೆನ್ರಿ 2 ಮತ್ತು ವಿಲಿಯಂ ಓರೌರ್ಕೆ 3 ವಿಕೆಟ್ ಪಡೆದಿದ್ದಾರೆ.
Advertisement