ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46ರನ್ ಗೇ ಆಲೌಟ್ ಆಗಿ ಹೀನಾಯ ದಾಖಲೆ ಬರೆದಿದ್ದ ಭಾರತ ಕ್ರಿಕೆಟ್ ತಂಡ ಬಳಿಕ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿ ಅಪರೂಪದ ದಾಖಲೆಗೆ ಪಾತ್ರವಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಈ ಅಪರೂಪದ ಸಾಧನೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಬಳಿಕ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ 3ನೇ ಪಂದ್ಯ ಇದಾಗಿದೆ.
ಈ ಹಿಂದೆ 2001ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 171ರನ್ ಗಳಿಗೇ ಆಲೌಟ್ ಆಗಿ ಬಳಿಕ 2ನೇ ಇನ್ನಿಂಗ್ಸ್ ನಲ್ಲಿ 657 ಪೇರಿಸಿತ್ತು. ಅಂದು ಭಾರತ ಮೊದಲ ಇನ್ನಿಂಗ್ಸ್ ಗಿಂತ ಹೆಚ್ಚುವರಿಯಾಗಿ 486 ರನ್ ಪೇರಿಸಿತ್ತು.
ಇದಕ್ಕೂ ಮೊದಲು 1999ರಲ್ಲಿ ಮೊಹಾಲಿ ಮೈದಾನದಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 83 ರನ್ ಗೇ ಆಲೌಟ್ ಆಗಿ, 2ನೇ ಇನ್ನಿಂಗ್ಸ್ ನಲ್ಲಿ 505 ರನ್ ಪೇರಿಸಿತ್ತು. ಆ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ಗಿಂತ ಹೆಚ್ಚುವರಿಯಾಗಿ 422 ರನ್ ಗಳಿಸಿತ್ತು. ಇಂದಿನ ಬೆಂಗಳೂರು ಪಂದ್ಯ ಈ ಪಟ್ಟಿಯಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ 3ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ಗಿಂತ 2ನೇ ಇನ್ನಿಂಗ್ಸ್ ನಲ್ಲಿ ಹೆಚ್ಚುವರಿಯಾಗಿ 416 ರನ್ ಕಲೆಹಾಕಿದೆ.
Highest improvement from 1st to 2nd inns scores in Tests for India
486 - 171 & 657/7d vs AUS, Kolkata, 2001
422 - 83 & 505/3d vs NZ, Mohali, 1999
416 - 46 & 462 vs NZ, Bengaluru, 2024
375 - 88 & 463/5d vs NZ, Brabourne, 1965
346 - 164 & 510 vs ENG, Headingley, 1967
ನ್ಯೂಜಿಲೆಂಡ್ ವಿರುದ್ಧದ ಭಾರತದ ಮೂರು ಟೆಸ್ಟ್ ಪಂದ್ಯಗಳ ಹೊರತಾಗಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಮತ್ತೊಂದು ನಿದರ್ಶನವಿದ್ದು, ಇಂಗ್ಲೆಂಡ್ ತಂಡದ್ದು. 1894/94 ರಲ್ಲಿ ಮೆಲ್ಬೋರ್ನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 75ರನ್ ಗೇ ಮೊದಲ ಇನ್ನಿಂಗ್ಸ್ ನಲ್ಲಿ ಆಲೌಟ್ ಆಗಿತ್ತು. ಬಳಿಕ 2ನೇ ಇನ್ನಿಂಗ್ಸ್ ನಲ್ಲಿ 475 ರನ್ ಸಿಡಿಸಿತ್ತು.
Other than India’s three aforementioned Tests against New Zealand, there has only been one other instance in Test cricket history wherein a team bundled out for a sub-100 score in the first innings has responded with a 450-plus score in the second: ENG vs AUS in Melbourne in 1894/94 (75 & 475)
Advertisement