ಕನ್ನಡಿಗ Robin Uthappa ಗೆ ಬೆದರಿಕೆ ಹಾಕಿ ಸಹಿ ಮಾಡಿಸಿದ್ದ IPL ಫ್ರಾಂಚೈಸಿ..!

ರಾಬಿನ್ ಉತ್ತಪ್ಪ ಐಪಿಎಲ್ ವೇಳೆ ಉಂಟಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ. 2009 ರಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು ಎಂಬ ವಿಚಾರವನ್ನು ರಾಬಿನ್ ಉತ್ತಪ್ಪ ಬಹಿರಂಗಪಡಿಸಿದ್ದಾರೆ.
Cricketer Robin Uthappa
ರಾಬಿನ್ ಉತ್ತಪ್ಪ
Updated on

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ರಾಬಿನ್ ಉತ್ತಪ್ಪ ತಮ್ಮ ಮೌನ ಮುರಿದಿದ್ದು, ರಾಬಿನ್ ಉತ್ತಪ್ಪ ಐಪಿಎಲ್ ವೇಳೆ ಉಂಟಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ. 2009 ರಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು ಎಂಬ ವಿಚಾರವನ್ನು ರಾಬಿನ್ ಉತ್ತಪ್ಪ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಾಬಿನ್, ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುವವರಿಗೆ ಈ ವಿಡಿಯೋ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Cricketer Robin Uthappa
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಾಬಿನ್ ಉತ್ತಪ್ಪ: ಐಪಿಎಲ್‌ ಸಹ ಆಡಲ್ಲ!

ಈ ಸಂದರ್ಭದಲ್ಲಿ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ ಮಾತನಾಡಿರುವ ರಾಬಿನ್ ಉತ್ತಪ್ಪ, '2009 ರಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು. ಈ ಟ್ರಾನ್ಸ್​ಫರ್​​ಗೆ ನಾನು ಒಪ್ಪಿರಲಿರಲಿಲ್ಲ. ಟ್ರಾನ್ಸ್​ಫರ್​ ಪೇಪರ್‌ಗಳಿಗೆ ಸಹಿ ಹಾಕಲು ನಿರಾಕರಿಸಿದ್ದೆ.

ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ದರೆ, ನಿಮಗೆ ಪ್ಲೇಯಿಂಗ್ ಇಲೆವೆನ್​ನಲ್ಲಂತು ಚಾನ್ಸ್ ನೀಡುವುದಿಲ್ಲ ಎಂದು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಉಸ್ತುವಾರಿ ವ್ಯಕ್ತಿಯೊಬ್ಬರು ಬೆದರಿಕೆಯೊಡ್ಡಿದ್ದರು. ಹೀಗಾಗಿ ನಾನು ಟ್ರಾನ್ಸ್​ಫರ್​​ಗೆ ಒಪ್ಪಿಗೆ ನೀಡಲೇಬೇಕಾಯಿತು ಎಂದು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಅಲ್ಲದೆ ಈ ಘಟನೆ ಬಳಿಕ ನಾನು ಖಿನ್ನತೆಗೆ ಒಳಗಾದೆ. ಇದಾಗ್ಯೂ ನಾನು 2009 ರಲ್ಲಿ ಆರ್​ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ದೇಹ ತೂಕ ಹೆಚ್ಚಾಯಿತು. ಚಿಂತೆಗೆ ಒಳಗಾದೆ. ಈ ಸಂದರ್ಭದಲ್ಲಿ ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದು ಉತ್ತಪ್ಪ ಹೇಳಿದ್ದಾರೆ.

ಅಂದಹಾಗೆ 2009 ರಲ್ಲಿ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಮರು ಸೀಸನ್​ನಲ್ಲೇ ಮುಂಬೈ ಅವರನ್ನು ಆರ್​ಸಿಬಿಗೆ ಟ್ರಾನ್ಸ್​ಫರ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com