ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕದತ್ತ ದಾಪುಗಾಲಿರಿಸಿರುವ ಭಾರತ ತಂಡದ ರಿಷಬ್ ಪಂತ್ ತಮಗೆ ತಾವೇ ಫೀಲ್ಡಿಂಗ್ ಸೆಟ್ ಮಾಡಿಕೊಳ್ಳುವ ಮೂಲಕ ಎಲ್ಲರೂ ಬಿದ್ದು ಬಿದ್ದು ನಗುವಂತೆ ಮಾಡಿದ್ದಾರೆ.
ಹೌದು.. ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾದ ವೇಳೆ ರಿಷಬ್ ಪಂತ್ ತಮಗೆ ತಾವೇ ಫೀಲ್ಡಿಂಗ್ ಸೆಟ್ ಮಾಡಿಕೊಂಡಿದ್ದಾರೆ.
ಪಂತ್ ಬ್ಯಾಟಿಂಗ್ ಮಾಡುವ ವೇಳೆ ಮಿಡ್ ವಿಕೆಟ್ ನಲ್ಲಿ ಯಾರೂ ಫೀಲ್ಡರ್ ಇರಲಿಲ್ಲ. ಇದನ್ನು ಗಮನಿಸಿದ ರಿಷಬ್ ಪಂತ್ ಬಾಂಗ್ಲಾದೇಶ ನಾಯಕ ಶಾಂಟೋರನ್ನು ಉದ್ದೇಶಿಸಿ '"ಅರೇ ಇಧರ್ ಆಯೇಗಾ ಏಕ್. ಇದರ್ ಕಮ್ ಫೀಲ್ಡರ್ ಹೈ (ಹೇ, ಇಲ್ಲಿ ಫೀಲ್ಡರ್ ಹಾಕಿ. ಇಲ್ಲಿ ಹೆಚ್ಚು ಫೀಲ್ಡರ್‌ಗಳಿಲ್ಲ) ಎಂದು ಪಂತ್ ತನ್ನ ಲೆಗ್ ಸೈಡ್ ತೋರಿಸುತ್ತಾ ಶಾಂತೋಗೆ ಹೇಳಿದ್ದಾರೆ.
ಅಚ್ಚರಿ ಎಂದರೆ ಬಾಂಗ್ಲಾದೇಶ ನಾಯಕ ಶಾಂತೋ ಪಂತ್ ಸಲಹೆಯನ್ನು ಸ್ವೀಕರಿಸಿದ್ದು ಮಾತ್ರವಲ್ಲದೇ ಮಿಡ್ ವಿಕೆಟ್ ನಲ್ಲಿ ಓರ್ವ ಫೀಲ್ಡರ್ ಅನ್ನು ಕೂಡ ಹಾಕಿದರು. ಈ ಘಟನೆಯನ್ನು ನೋಡಿದ ಪ್ರೇಕ್ಷಕರು ಹಾಗೂ ಕಮೆಂಟರಿ ಬಾಕ್ಸ್ ನಲ್ಲಿದ್ದ ಗಣ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಫೀಲ್ಡಿಂಗ್ ಎಲ್ಲರ ಟೀಕೆಗೆ ಗುರಿಯಾಗಿದ್ದು, ಎರಡೂ ಇನ್ನಿಂಗ್ಸ್ ಗಳಲ್ಲಿ ಬಾಂಗ್ಲಾದೇಶ ಆಟಗಾರರು ಸಾಕಷ್ಟು ಎಡವಟ್ಟು ಮಾಡಿಕೊಂಡು ಕೈ ಗೆ ಸಿಕ್ಕ ಕ್ಯಾಚ್ ಗಳನ್ನು ಕೈ ಚೆಲ್ಲಿ ದುಬಾರಿ ಮಾಡಿಕೊಂಡಿದ್ದಾರೆ.
ಇದೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಆರ್ ಅಶ್ವಿನ್ ಶತಕ ಸಿಡಿಸಿದರೆ, ಜಡೇಜಾ 86 ರನ್ ಗಳಿಸಿ 14 ರನ್ ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಅಂತೆಯೇ 2ನೇ ಇನ್ನಿಂಗ್ಸ್ ನಲ್ಲೂ ರಿಷಬ್ ಮತ್ತು ಶುಭ್ ಮನ್ ಗಿಲ್ ಶತಕ ಸಿಡಿಸಿದ್ದಾರೆ.
ಧೋನಿ ಕೂಡ ಫೀಲ್ಡಿಂಗ್ ಸೆಟ್ ಮಾಡಿಕೊಂಡಿದ್ದರು!
ಅಂದಹಾಗೆ ಈ ಹಿಂದೆ 2019 ರ ODI ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ಕೂಡ ಇದೇ ರೀತಿ ಫೀಲ್ಡಿಂಗ್ ಸೆಟ್ ಮಾಡಿದ್ದರು. ಧೋನಿ ಸಬ್ಬಿರ್ ರೆಹಮಾನ್‌ಗೆ ಫೀಲ್ಡರ್ ಹಾಕಲು ಸೂಚಿಸಿದ್ದರು. ಅವರ ಸಲಹೆಯನ್ನೂ ಕೂಡ ಸಬ್ಬೀರ್ ಅನುಸರಿಸಿದ್ದರು.
Advertisement