ಕೂಚ್ ಬೆಹಾರ್ ಟ್ರೋಫಿ ಫೈನಲ್: 404* ರನ್‌ ಗಳಿಸಿ ಯುವರಾಜ್ ಸಿಂಗ್ ದಾಖಲೆ ಮುರಿದ ಕನ್ನಡಿಗ ಪ್ರಖರ್‌ ಚತುರ್ವೇದಿ!

ಕರ್ನಾಟಕ ಅಂಡರ್‌-19 ಕ್ರಿಕೆಟ್ ತಂಡದ ಯುವ ಬ್ಯಾಟರ್‌ ಪ್ರಖರ್‌ ಚತುರ್ವೇದಿ ದೇಶಿಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ.
ಪ್ರಖರ್‌ ಚತುರ್ವೇದಿ
ಪ್ರಖರ್‌ ಚತುರ್ವೇದಿ
Updated on

ಬೆಂಗಳೂರು: ಕರ್ನಾಟಕ ಅಂಡರ್‌-19 ಕ್ರಿಕೆಟ್ ತಂಡದ ಯುವ ಬ್ಯಾಟರ್‌ ಪ್ರಖರ್‌ ಚತುರ್ವೇದಿ ದೇಶಿಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ.

ಕಳೆದ ತಿಂಗಳು ಆರಂಭದಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯೊಂದಿಗೆ ಮುಂಬೈ ವಿರುದ್ಧ ಜಯಗಳಿಸಿದೆ.

ನಾಲ್ಕು ದಿನದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ತಂಡ ಮೊದಲ ಇನಿಂಗ್ಸ್​ನಲ್ಲಿ 380 ರನ್ ಗಳಿಗೆ ಅಲೌಟ್ ಆಯಿತು. ನಂತರ ಎರಡನೇ ದಿನಕ್ಕೆ ತನ್ನ ಆಟ ಪ್ರಾರಂಭಿಸಿದ ಕರ್ನಾಟಕ ತಂಡ ಆರಂಭಿಕ ಆಟಗಾರ ಪ್ರಕಾರ್ ಚರ್ತುವೇದಿ ರವರು 638 ಬಾಲ್ ಗಳಿಗೆ 404 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಇದರಂತೆ ಕರ್ನಾಟಕದ ಯುವ ಆಟಗಾರ ಪ್ರಖರ್ ಚತುರ್ವೇದಿ, ಕೂಚ್ ಬೆಹಾರ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಭಾರತದ ದಿಗ್ಗಜ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.

1999ರಲ್ಲಿ ನಡೆದಿದ್ದ ಕೂಚ್ ಬೆಹಾರ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಿಹಾರ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂಜಾಬ್ ಪರ ಯುವರಾಜ್ ಸಿಂಗ್ 358 ರನ್ ಗಳಿಸಿದ್ದರು. ಈಗ ಆ ದಾಖಲೆಯನ್ನು ಪ್ರಖರ್ ಚತುರ್ವೇದಿ ಮುರಿದಿದ್ದಾರೆ.

ಇನಿಂಗ್ಸ್‌ನುದ್ದಕ್ಕೂ, ನಾನು ಪ್ರತಿ ಚೆಂಡಿನ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೆ, ತಂಡದ ಗೆಲುವಿಗಾಗಿ ನಾನು ಆಡುತ್ತಿದ್ದೆ. ಊಟದ ಸಮಯಕ್ಕೆ 299 ರನ್ ಗಳಿಸಿದ್ದೆ. ಈ ವೇಳೆ ನನ್ನ ಸ್ನೇಹಿತರು ಹಳೆಯ ದಾಖಲೆ 358 ಎಂದು ಹೇಳಿದ್ದರು. ಇದು ನನ್ನ ತಲೆಯಲ್ಲಿ ಹಾಗೇ ಉಳಿದಿತ್ತು. ಆದರೆ ನನ್ನ ಪ್ರಮುಖ ಗುರಿ ತಂಡ ಗೆಲ್ಲುವುದಾಗಿತ್ತು ಎಂದು ಚತುರ್ವೇದಿ ಹೇಳಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸಲು ಬಯಸಿದ್ದೆ. ಆದರಂತೆ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸುವುದು ಉತ್ತಮ ಮಾರ್ಗವೆಂದು ತಿಳಿದೆ. 8-9 ತಿಂಗಳ ಕಾಲ ಸಾಕಷ್ಟು ಶ್ರಮಿಸಿದೆ. ಅಂಡರ್ 19 ಲೀಗ್ ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರನಾದೆ. ಸ್ಥಳೀಯ ಕ್ರಿಕೆಟ್ ನಲ್ಲಿ ಆಟವಾಡಲು ಅವಕಾಶ ಸಿಕ್ಕಾಗ ಅತೀ ಹೆಚ್ಚು ಹೆಚ್ಚು ಗಳಿಸಿದ 2ನೇ ಆಟಗಾರನಾಗಿ ಹೊರಹೊಮ್ಮಿದ್ದೆ. ಇದು ರಾಜ್ಯ ಮಟ್ಟದ ಆಯ್ಕೆಯಲ್ಲಿ ಇದು ನನಗೆ ಸಹಾಯ ಮಾಡಿತು ಎಂದು ತಿಳಿಸಿದ್ದಾರೆ.

11ನೇ ವರ್ಷಕ್ಕೆ ಚತುರ್ವೇದಿ ಅವರು ಕ್ರಿಕೆಟ್ ಪ್ರಯಾಣವನ್ನು ಆರಂಭಿಸಿದ್ದರು. ಇದಾದ ಬಳಿಕ ಕ್ರಿಕೆಟ್ ಜಗತ್ತಿನ ದೊಡ್ಡ ದೊಡ್ಡ ಆಟಗಾರರನ್ನು  ನೋಡುತ್ತ ಬೆಳೆಯಲು ಆರಂಭಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್.ಧೋನಿಯವರನ್ನು ನೋಡುತ್ತಾ ಬೆಳೆದರೂ ನನ್ನ ರೋಲ್ ಮಾಡೆಲ್ ವೆಸ್ಟ್ ಇಂಡೀಸ್ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಆಗಿದ್ದಾರೆ. ಅವರ ಆಟವನ್ನು ಟಿವಿಯಲ್ಲಿ ಮಾತ್ರವೇ ನೋಡಿದ್ದೆ. ಅವರಿಂದ ಕೆಲವು ತಂತ್ರಗಳನ್ನು ಕಲಿತುಕೊಂಡಿದ್ದೇನೆ. ಆಡವಾಡುವಾಗ ಸಂತಸದಿಂದಿರುವುದು, ಸಮಾಧಾನಕರ ಭಾವನೆಯನ್ನು ಅವರಿಂದ ಕಲಿತಿದ್ದೇನೆ. ದೀರ್ಘ ಇನ್ನಿಂಗ್ಸ್ ಸಮಯದಲ್ಲಿ ಮಾನಸಿಕ ಶಕ್ತಿ ತುಂಬಾ ಮುಖ್ಯವಾಗುತ್ತದೆ. ಇದನ್ನು ಅವರಿಂದ ಕಲಿತಿದ್ದೇನೆಂದು ಹೇಳಿದ್ದಾರೆ.

ಇದಿನ್ನೂ ಪ್ರಾರಂಭವಷ್ಟೇ. ಬಹಳಷ್ಟು ದೂರ ಹೋಗಬೇಕಿದೆ. ಭವಿಷ್ಯದಲ್ಲಿ ಮತ್ತಷ್ಟು ಶ್ರಮಿಸಲು ಬಯಸಿದ್ದೇನೆ. ಸಾಧಿಸಲು ಬಹಳಷ್ಟಿದೆ. ಮುಂದಿನ 5 ವರ್ಷ ಅತ್ಯಂತ ನಿರ್ಣಾಯಕ ಸಮಯವಾಗಿದೆ. ಮುಂದಿನ 2-3 ವರ್ಷ ಸಿದ್ಧತೆಗೆ ನಿರ್ಣಾಯಕ ಸಮಯವಾಗಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿಗೆ ನಾನು ತೆರೆದುಕೊಂಡಿಲ್ಲ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಕಲಿಯುವುದು ಮತ್ತು ಹೊಂದಿಕೊಳ್ಳುವುದು, ಅವಕಾಶ ಸಿಕ್ಕಲ್ಲೆಲ್ಲಾ ಉತ್ತಮ ಪ್ರದರ್ಶನ ನೀಡುವುದರತ್ತ ನನ್ನ ಗಮನವಿದೆ. ನಾನು ಪ್ರಸ್ತುತ ಸಿಕೆ ನಾಯುಡು ಟ್ರೋಫಿಯಲ್ಲಿ ಕರ್ನಾಟಕ U23 ಅನ್ನು ಪ್ರತಿನಿಧಿಸುತ್ತಿದ್ದೇನೆ. ಈ ಪಂದ್ಯಾವಳಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಇದರಲ್ಲಿ ಬಲವಾದ ನಂಬಿಕೆ ಹೊಂದಿದ್ದು, ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com