ಇಂಗ್ಲೆಂಡ್ ವಿರುದ್ದ ಅಂತಿಮ 3 ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟ: ಕೊಹ್ಲಿ ಸರಣಿಯಿಂದಲೇ ಔಟ್, ರಾಹುಲ್​, ಜಡೇಜಾಗೆ ಸ್ಥಾನ

ಪ್ರವಾಸಿ ಇಂಗ್ಲೆಂಡ್ ವಿರುದ್ದದ ಬಾಕಿ ಉಳಿದಿರುವ 3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೈಯುಕ್ತಿಕ ಕಾರಣಗಳಿಂದ ಮೊದಲೆರಡು ಪಂದ್ಯಗಳಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಇದೀಗ ಸರಣಿಯಿಂದಲೇ ದೂರ ಉಳಿದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಮುಂಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ದದ ಬಾಕಿ ಉಳಿದಿರುವ 3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೈಯುಕ್ತಿಕ ಕಾರಣಗಳಿಂದ ಮೊದಲೆರಡು ಪಂದ್ಯಗಳಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಇದೀಗ ಸರಣಿಯಿಂದಲೇ ದೂರ ಉಳಿದಿದ್ದಾರೆ.

ಇಂಗ್ಲೆಂಡ್​(IND vs ENG) ವಿರುದ್ಧದ ಬಾಕಿ ಉಳಿದಿರುವ ಮೂರು ಟೆಸ್ಟ್ ಪಂದ್ಯಗಳಿಗೆ ಕೊನೆಗೂ ಭಾರತ ತಂಡ ಪ್ರಕಟಗೊಂಡಿದ್ದು, ಶನಿವಾರ ಬಿಸಿಸಿಐ ಈ ತಂಡವನ್ನು ಪ್ರಕಟಿಸಿದೆ. ವಿರಾಟ್​ ಕೊಹ್ಲಿ ಅವರು ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದು, ಕೊಹ್ಲಿ ಅಲಭ್ಯವನ್ನು ಬಿಸಿಸಿಐ ಖಚಿತಪಡಿಸಿದೆ. ವೈಯಕ್ತಿಕ ಕಾರಣ ನೀಡಿ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ವಿರಾಟ್​ ಕೊಹ್ಲಿ ಅವರು ಉಳಿದ ಮೂರು ಟೆಸ್ಟ್​ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಇದೀಗ ಅಧಿಕೃತಗೊಂಡಿದೆ. ಮತ್ತೆ ವೈಯಕ್ತಿಕ ಕಾರಣ ನೀಡಿ ಅವರು ಸರಣಿಯಿಂದಲೇ ಹೊರಗುಳಿಯಲು ನಿರ್ಧರಿಸಿದ್ದಾರೆ. ಕೊಹ್ಲಿಯ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಗಾಯಗೊಂಡು ದ್ವಿತೀಯ ಟೆಸ್ಟ್ನಿಂದ ಹೊರಗುಳಿದಿದ್ದ ಕೆ.ಎಲ್​ ರಾಹುಲ್​ ಮತ್ತು ರವೀಂದ್ರ ಜಡೇಜಾ ಮತ್ತೆ ತಂಡದಲ್ಲಿ ಸ್ಥಾನ ಪಡೆದರೂ ಕೂಡ ಅವರ ಫಿಟ್​ನೆಸ್​ ವರದಿಯ ಮೇಲೆ ಆಡುವ ಬಳಗದ ಆಯ್ಕೆ ಮಾಡಲಾಗುತ್ತದೆ. ಬೆನ್ನು ಮತ್ತು ತೊಡೆ ಸಂದು ಗಾಯದಿಂದ ಬಳಲುತ್ತಿರುವ ಶ್ರೇಯಸ್​ ಅಯ್ಯರ್​ ಹೊರಬಿದ್ದಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಕೆ.ಎಲ್ ರಾಹುಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದರೂ ಕೂಡ ಅವರು ಆಡಬೇಕಾದರೆ ಫಿಟ್ನೆಸ್ ಕ್ಲಿಯರೆನ್ಸ್​ ಅಗತ್ಯ ಎಂದು ಬಿಸಿಸಿಐ ತಿಳಿಸಿದೆ. ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮೂರನೇ ಪಂದ್ಯಕ್ಕೆ ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅವರಿಗೆ ವಿಶ್ರಾಂತಿ ನೀಡಿಲ್ಲ.

ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com