Team India ಆಟಗಾರರ ನಡುವೆ 'ಮಹಾ' ಬಿರುಕು; ನಾಯಕನ ಕಿಟ್ ಬ್ಯಾಗ್ ಅನ್ನೇ ಒದ್ದ ಯುವ ಆಟಗಾರ, ತಂಡದಿಂದ ಹೊರಕ್ಕೆ!

ಮುಂಬೈ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪಂದ್ಯದಲ್ಲಿ ಕಳಪೆ ಪ್ರದರ್ಶನದ ನಂತರ ಮುಂಬೈ ತಂಡದ ಆಡಳಿತ ಮಂಡಳಿಯಿಂದ ಆಟಗಾರ ಟೀಕೆಗೊಳಗಾದಾಗ 'ಸಮಸ್ಯೆ' ಎದುರಾಗಿತ್ತು.
Yashasvi Jaiswal Kicked Ajinkya Rahanes Kitbag
ಟೀಂ ಇಂಡಿಯಾ ಆಟಗಾರರ ನಡುವೆ ಸಂಘರ್ಷ (ಸಾಂದರ್ಭಿಕ ಚಿತ್ರ)
Updated on

ಮುಂಬೈ: ಟೀಂ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರ ಒಳ ಜಗಳ ಇದೀಗ ಬಹಿರಂಗವಾಗಿದ್ದು, ಇದೇ ಕಾರಣಕ್ಕೆ ಯುವ ಆಟಗಾರ ತನ್ನ ತವರು ತಂಡವನ್ನೇ ತೊರೆದು ಬೇರೊಂದು ತಂಡ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಹೌದು.. ಈ ಹಿಂದೆ ಟೀಂ ಇಂಡಿಯಾ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮುಂಬೈ ತೊರೆದು ಗೋವಾ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಆ ಸುದ್ದಿ ಮುಂದುವರೆದ ಭಾಗದ ಮಾಹಿತಿ ಲಭ್ಯವಾಗಿದ್ದು, ಜೈಸ್ವಾಲ್ ಮುಂಬೈ ತಂಡ ತೊರೆಯಲು ಮುಂಬೈ ತಂಡದ ನಾಯಕ ಕಾರಣ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಾವು ಮುಂಬೈ ಬಿಟ್ಟು ಗೋವಾಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಮುಂಬೈ ಕ್ರಿಕೆಟ್ ಆಡಳಿತ ಕೂಡ ಅವರ ವಿನಂತಿಯನ್ನು ತ್ವರಿತವಾಗಿ ಅಂಗೀಕರಿಸಿತ್ತು. ಇದೀಗ 23 ವರ್ಷದ ಎಡಗೈ ಆಟಗಾರ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌, 'ಮಂಗಳವಾರ ಭಾರತದ ಆಟಗಾರನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಕೋರಿ ಇಮೇಲ್ ಬಂದಿದ್ದು, ಅವರು ತಮ್ಮ ಇಮೇಲ್‌ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ಸೀಸನ್​ನಲ್ಲಿ ಗೋವಾ ರಾಜ್ಯ ತಂಡದ ಪರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದೆ.

ಜೈಸ್ವಾಲ್ ಗೆ ನಾಯಕ ಸ್ಥಾನ

ಇನ್ನು ಪ್ರಸ್ತುತ ಮುಂಬೈ ತಂಡ ತೊರೆದು ಗೋವಾ ಪರ ಆಡಲು ಸಿದ್ಧರಾಗಿರುವ ಜೈಸ್ವಾಲ್ ಗೆ ಗೋವಾ ಕ್ರಿಕೆಟ್ ಅಸೋಸಿಯೇಷನ್ ತಂಡದ ನಾಯಕ ಸ್ಥಾನ ನೀಡುವ ಕುರಿತು ಆಶ್ವಾಸನೆ ನೀಡಿದೆ ಎಂದು ತಿಳಿದುಬಂದಿದೆ. ಆದರೆ ಪ್ರಸ್ತುತ ಟೀಂ ಇಂಡಿಯಾ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಗ್ನರಾಗಿರುವ ಜೈಸ್ವಾಲ್, ಅಂತರರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಅವರು ಗೋವಾ ತಂಡಕ್ಕೆ ಎಷ್ಟು ಸಮಯವನ್ನು ನೀಡಲು ಸಾಧ್ಯವಾಗುತ್ತದೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ.

ಭಾರತ ತಂಡಕ್ಕೆ ನನ್ನ ಮೊದಲ ಆದ್ಯತೆ

ಮುಂಬೈ ನಿಂದ ಗೋವಾಕ್ಕೆ ಬದಲಾಗುತ್ತಿದ್ದರೂ ಜೈಸ್ವಾಲ್ ಮಾತ್ರ ನನ್ನ ಮೊದಲ ಆದ್ಯತೆ ಭಾರತ ತಂಡಕ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. 'ನಾನು ಇಂದು ಏನೇ ಆಗಿದ್ದರೂ ಅದಕ್ಕೆ ಮುಂಬೈ ಕಾರಣ. ಮುಂಬೈ ನನ್ನನ್ನು ನಾನಾಗಿ ಮಾಡಿದೆ ಮತ್ತು ನನ್ನ ಜೀವನದುದ್ದಕ್ಕೂ ನಾನು MCA ಗೆ ಋಣಿಯಾಗಿರುತ್ತೇನೆ. ಅಂತೆಯೇ ಗೋವಾ ನನಗೆ ಹೊಸ ಅವಕಾಶ ನೀಡಿದೆ ಮತ್ತು ಅದು ನನಗೆ ನಾಯಕತ್ವದ ಪಾತ್ರವನ್ನು ನೀಡಿದೆ. ಆದಾಗ್ಯೂ ನನ್ನ ಮೊದಲ ಗುರಿ ಭಾರತಕ್ಕಾಗಿ ಉತ್ತಮವಾಗಿ ಆಡುವುದು ಮತ್ತು ನಾನು ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿರುವಾಗ, ನಾನು ಗೋವಾ ಪರ ಆಡುತ್ತೇನೆ ಮತ್ತು ಅವರನ್ನು ಟೂರ್ನಮೆಂಟ್‌ನಲ್ಲಿ ಆಳವಾಗಿ ಹೋಗಲು ಪ್ರಯತ್ನಿಸುತ್ತೇನೆ. ಇದು ನನಗೆ ಬಂದ ಪ್ರಮುಖ ಅವಕಾಶವಾಗಿತ್ತು ಮತ್ತು ನಾನು ಅದನ್ನು ಪಡೆದುಕೊಂಡೆ' ಎಂದು ಹೇಳಿದ್ದಾರೆ.

ಜೈಸ್ವಾಲ್-ರಹಾನೆ ಸಂಘರ್ಷ

ಇನ್ನು ಜೈಸ್ವಾಲ್ ಮುಂಬೈ ತಂಡ ತೊರೆಯಲು ಗೋವಾ ತಂಡದ ಆಫರ್ ಒಂದೇ ಕಾರಣವಲ್ಸ.. ಮುಂಬೈ ತಂಡದಲ್ಲಿನ ಆಂತರಿಕ ಕಲಹ ಕೂಡ ಕಾರಣ ಎನ್ನಲಾಗಿದೆ. ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಮತ್ತು ಜೈಸ್ವಾಲ್ ನಡುವೆ ಸಂಘರ್ಷ ನಡೆದಿದ್ದು, ಈ ಸಂಘರ್ಷವೇ ಜೈಸ್ವಾಲ್ ಮುಂಬೈ ತಂಡ ತೊರೆಯಲು ಕಾರಣ ಎಂದು ಹೇಳಲಾಗಿದೆ.

ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಮುಂಬೈ ತಂಡದಿಂದ ಜೈಸ್ವಾಲ್ ನಿರ್ಗಮನಕ್ಕೆ ತಂಡದಲ್ಲಿನ ಆಂತರಿಕ ಕಲಹವೇ ಕಾರಣ ಎಂದು ಹೇಳಿದೆ. ಮುಂಬೈ ತಂಡದಲ್ಲಿನ ಘಟನೆಗಳಿಂದ ಜೈಸ್ವಾಲ್ ತೀವ್ರ ಅಸಮಾಧಾನಗೊಂಡಿದ್ದರು. ಪ್ರಮುಖವಾಗಿ ನಾಯಕ ಅಂಜಿಕ್ಯಾ ರಹಾನೆ ಕುರಿತು ಜೈಸ್ವಾಲ್ ಅಸಮಾಧಾನದ ಮಾತುಗಳನ್ನಾಡುತ್ತಿದ್ದರು. ಇದುವೇ ಅವರ ತಂಡ ಬದಲಾವಣೆಗೆ ಕಾರಣ ಎಂದು ಹೇಳಿ ವರದಿ ಮಾಡಿದೆ.

2022ರ ಸಂಘರ್ಷ; ರಹಾನೆ ಕಿಟ್ ಬ್ಯಾಗ್ ಒದ್ದಿದ್ದ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಮತ್ತು ಮುಂಬೈ ಪ್ರಥಮ ದರ್ಜೆ ನಾಯಕ ಅಜಿಂಕ್ಯ ರಹಾನೆ ನಡುವಿನ ಸಂಬಂಧ 'ಅಸಹನೀಯ' ಎಂದು ವರದಿ ಹೇಳಿಕೊಂಡಿದೆ. 2022 ರಲ್ಲಿ ರಹಾನೆ ಪಂದ್ಯವೊಂದರಲ್ಲಿ ತಮ್ಮದೇ ತಂಡದ ಆಟಗಾರ ಜೈಸ್ವಾಲ್ ರನ್ನು ತೀವ್ರ ಸ್ಲೆಡ್ಜಿಂಗ್‌ ಮಾಡಿದ್ದರು. ಜೈಸ್ವಾಲ್ ಕಳಪೆ ರೀತಿಯಲ್ಲಿ ವಿಕೆಟ್ ಒಪ್ಪಿಸಿದಾಗ ರಹಾನೆ ತೀರಾ ಕೆಳಮಟ್ಟದಲ್ಲಿ ಟೀಕಿಸಿದ್ದರು.

ಆಗ ಭಾರತೀಯ ಕ್ರಿಕೆಟ್ ತಂಡದ ಈ ಇಬ್ಬರು ಆಟಗಾರರ ನಡುವಿನ 'ಘರ್ಷಣೆ' ಪ್ರಾರಂಭವಾಯಿತು ಎಂದು ವರದಿ ಉಲ್ಲೇಖಿಸಿದೆ. ಆ ಪಂದ್ಯದಲ್ಲಿ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 323 ಎಸೆತಗಳಲ್ಲಿ 30 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 265 ರನ್ ಗಳಿಸಿದ್ದರು, ಆದರೆ ಪಂದ್ಯದ ಕೊನೆಯ ದಿನದಂದು ದಕ್ಷಿಣ ವಲಯದ ಬ್ಯಾಟ್ಸ್‌ಮನ್ ರವಿ ತೇಜ ಅವರನ್ನು ಅತಿಯಾಗಿ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಪಶ್ಚಿಮ ವಲಯದ ನಾಯಕ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದರು. ಜೈಸ್ವಾಲ್ ಅವರ ಶಾಟ್ ಆಯ್ಕೆಯ ಬಗ್ಗೆ ಯೂ ರಹಾನೆ 'ನಿರಂತರವಾಗಿ ಪ್ರಶ್ನಿಸಿಸುತ್ತಿದ್ದರು. ಎಂದು ವರದಿ ಹೇಳಿದೆ.

ಮುಂಬೈ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪಂದ್ಯದಲ್ಲಿ ಕಳಪೆ ಪ್ರದರ್ಶನದ ನಂತರ ಮುಂಬೈ ತಂಡದ ಆಡಳಿತ ಮಂಡಳಿಯಿಂದ ಜೈಸ್ವಾಲ್ ಟೀಕೆಗೊಳಗಾದಾಗ 'ಅಂತಿಮ ಸಮಸ್ಯೆ' ಎದುರಾಗಿತ್ತು. ಮುಂಬೈ ಕೋಚ್ ಓಂಕಾರ್ ಸಾಲ್ವಿ ಮತ್ತು ರಹಾನೆ ಯಶಸ್ವಿ ಜೈಸ್ವಾಲ್ ಅವರ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ಜೈಸ್ವಾಲ್ ಆಟಗಾರರ ಕೋಣೆಗೆ ಆಗಮಿಸುತ್ತಲೇ ನಾಯಕ ರಹಾನೆ ಅವರ ಕಿಟ್‌ಬ್ಯಾಗ್ ಅನ್ನು ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯನ್ನು ಹತ್ತಿರದಿಂದ ಕಂಡ ವ್ಯಕ್ತಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com