IPL 2025: 'ಮಾಹಿ' ಪಡೆಗೆ ತವರಿನಲ್ಲಿ ಮತ್ತೊಂದು ಮುಖಭಂಗ, DC ವಿರುದ್ಧ CSK ಗೆ ಹೀನಾಯ ಸೋಲು!

ರಾಹುಲ್ ಗೆ ಅಭಿಷೇಕ್ ಪೊರಲ್ ಉತ್ತಮ ಸಾಥ್ ನೀಡಿದರು. ಅಭಿಷೇಕ್ ಕೂಡ ಕೇವಲ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 33 ಕಲೆಹಾಕಿ ಜಡೇಜಾ ಬೌಲಿಂಗ್ ನಲ್ಲಿ ಔಟಾದರು.
Delhi Capitals won by 25 runs against Chennai Super Kings
ಚೆನ್ನೈ ತಂಡಕ್ಕೆ ಮತ್ತೆ ಸೋಲು
Updated on

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ವಿರುದ್ಧ ತವರಿನಲ್ಲೇ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋತು ಸುಣ್ಣವಾಗಿದೆ.

ಹೌದು.. ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 25 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತು.

ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 51 ಎಸೆತಗಳನ್ನು ಎದುರಿಸಿದ ರಾಹುಲ್ 3 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ 77 ರನ್ ಪೇರಿಸಿದರು. ರಾಹುಲ್ ಗೆ ಅಭಿಷೇಕ್ ಪೊರಲ್ ಉತ್ತಮ ಸಾಥ್ ನೀಡಿದರು. ಅಭಿಷೇಕ್ ಕೂಡ ಕೇವಲ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 33 ಕಲೆಹಾಕಿ ಜಡೇಜಾ ಬೌಲಿಂಗ್ ನಲ್ಲಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಕ್ಸರ್ ಪಟೇಲ್ 21 ರನ್, ಸಮೀರ್ ರಿಜ್ವಿ 20 ರನ್, ಸ್ಚಬ್ಸ್ ಅಜೇಯ 24 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟುವಂತೆ ನೋಡಿಕೊಂಡರು. ಆದರೆ ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್ ಗ್ರಕ್ ಡಕೌಟ್ ಆಗಿದ್ದು, ಆಶುತೋಷ್ ಶರ್ಮಾ 1 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಚೆನ್ನೈ ಪರ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ಜಡೇಜಾ, ನೂರ್ ಅಹ್ಮದ್ ಮತ್ತು ಮತೀಶ್ ಪತಿರಾಣಾ ತಲಾ 1 ವಿಕೆಟ್ ಪಡೆದರು.

Delhi Capitals won by 25 runs against Chennai Super Kings
IPL 2025: "ಇವ್ನ್ ಬದ್ಲಾಗಲ್ಲಾ ಗುರೂ..."; Rishabh Pant ಔಟ್ ಗೆ Sanjeev Goenka ವ್ಯಂಗ್ಯ ನಗು!

ಚೇಸಿಂಗ್ ನಲ್ಲಿ ಚೆನ್ನೈಗೆ ಮತ್ತೆ ಹಿನ್ನಡೆ

ಇನ್ನು ತವರು ಕ್ರೀಡಾಂಗಣದಲ್ಲಿ ಚೇಸಿಂಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಹಿನ್ನಡೆ ಅನುಭವಿಸಿದೆ. ಡೆಲ್ಲಿ ನೀಡಿದ 184 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಚೆನ್ನೈ ಪರ ವಿಜಯ್ ಶಂಕರ್ ಅಜೇಯ 69 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ಅಜೇಯ 30 ರನ್ ಗಳಿಸಿ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿದ್ದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ರಚಿನ್ ರವೀಂದ್ರ (3 ರನ್), ನಾಯಕ ರುತುರಾಜ್ ಗಾಯಕ್ವಾಡ್ (5 ರನ್) ಮತ್ತು ರವೀಂದ್ರ ಜಡೇಜಾ (2 ರನ್) ಒಂದಂಕಿ ಮೊತ್ತಕ್ಕೇ ಔಟಾಗಿದ್ದು ಚೆನ್ನೈಗೆ ದುಬಾರಿಯಾಗಿ ಪರಿಣಮಿಸಿತು. ಸ್ಫೋಟಕ ಬ್ಯಾಟರ್ ಶಿವಂ ದುಬೆ ಕೂಡ 18ರನ್ ಗೇ ವಿಕೆಟ್ ಒಪ್ಪಿಸಿದರು.

ಒಟ್ಟಾರೆ ಚೇಸಿಂಗ್ ನಲ್ಲಿ ಮತ್ತೆ ಚೆನ್ನೈ ಎಡವಿದ್ದು, ಮತ್ತೆ ತವರಿನಲ್ಲೇ ಸೋತಿರುವುದು ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com