IPL 2025: KL Rahul ವಿನ್ನಿಂಗ್ ಸೆಲೆಬ್ರೇಷನ್ ಮಿಮಿಕ್ರಿ ಮಾಡಿ ತೋರಿಸಿದ Tim David

ಆರ್ ಸಿಬಿಯ ಟಿಮ್ ಡೇವಿಡ್ ಕೆಎಲ್ ರಾಹುಲ್ ಸೆಲೆಬ್ರೇಷನ್ ಅನ್ನು ಡೆಲ್ಲಿಯ ಫಾಫ್ ಡುಪ್ಲೆಸಿಸ್ ಎದುರು ಮಿಮಿಕ್ರಿ ಮಾಡಿ ತೋರಿಸಿದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
KL Rahul-TimDavid
ಕೆಎಲ್ ರಾಹುಲ್-ಟಿಮ್ ಡೇವಿಡ್
Updated on

ಬೆಂಗಳೂರು: ಐಪಿಎಲ್ ಟೂರ್ನಿಯ ನಿನ್ನೆಯ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ರ ವಿನ್ನಿಂಗ್ ಸೆಲೆಬ್ರೇಷನ್ ವ್ಯಾಪಕ ವೈರಲ್ ಆಗುತ್ತಿದ್ದು ಸ್ವತಃ ಆಟಗಾರರೇ ಅದನ್ನು ಮಿಮಿಕ್ರಿ ಮಾಡುತ್ತಿದ್ದಾರೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಫಿಲ್ ಸಾಲ್ಟ್ ಶ್(37) ಮತ್ತು ಟಿಮ್ ಡೇವಿಡ್ (37) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 17.5 ಓವರ್ ನಲ್ಲೇ 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.

ಈ ಪಂದ್ಯದಲ್ಲಿ ಭರ್ಜರಿ ಆರಂಭದ ಹೊರತಾಗಿಯೂ ಆರ್ ಸಿಬಿ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಅಂತೆಯೇ ಆರ್ ಸಿಬಿ ನೀಡಿದ ಸವಾಲಿನ ಗುರಿಯನ್ನು ಮುಟ್ಟಲು ಡೆಲ್ಲಿ ಕೂಡ ಆರಂಭದಲ್ಲಿ ಪರದಾಡಿತು. ಕೇವಲ 58 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿಗೆ ಕನ್ನಡಿಗ ಕೆಎಲ್ ರಾಹುಲ್ ನೆರವಾದರು. ಅವರಿಗೆ ಕೆಳ ಕ್ರಮಾಂಕದಲ್ಲಿ ಸ್ಟಬ್ಸ್ ಉತ್ತಮ ಸಾಥ್ ನೀಡಿದರು.

KL Rahul-TimDavid
IPL 2025: 'ಪಿಚ್ ಟ್ರಿಕ್ಕಿಯಾಗಿತ್ತು.. ಆದ್ರೆ ಇದು ನನ್ನ ಗ್ರೌಂಡ್, ಬೆಂಗಳೂರು ನನ್ನ ಹೃದಯದಲ್ಲಿದೆ': KL Rahul ಮಾತು!

ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನೆರವಾದ ಕೆಎಲ್ ರಾಹುಲ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರಾದರೂ, ಬಳಿಕ ಲಯ ಕಂಡುಕೊಂಡು ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.

'ಇದು ನನ್ನ ಗ್ರೌಂಡ್'

ವಿನ್ನಿಂಗ್ ಶಾಟ್ ಭಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟ ಕೆಎಲ್ ರಾಹುಲ್ RCB ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಭಾವುಕರಾಗಿಯೇ ಸಂಭ್ರಮಿಸಿದರು. ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ರಚಿಸಿ 'ಇದು ನನ್ನ ಗ್ರೌಂಡ್.. ಇಲ್ಲಿ ನಾನೇ ಕಿಂಗ್' ಎನ್ನುವ ರೀತಿಯಲ್ಲಿ ಸನ್ಹೆ ಮಾಡಿ ತೋರಿಸಿದರು. ಅಲ್ಲದೆ ಆರ್ ಸಿಬಿ ತಂಡಕ್ಕೆ ತಮ್ಮನ್ನು ಸೇರಿಸಿಕೊಳ್ಳದ ಫ್ರಾಂಚೈಸಿ ವಿರುದ್ಧವೂ ಕೆಎಲ್ ರಾಹುಲ್ ಈ ಮೂಲಕ ಪರೋಕ್ಷ ಅಸಮಾಧಾನ ತೋರಿದರು ಎನ್ನಲಾಗಿದೆ.

ಮಿಮಿಕ್ರಿ ಮಾಡಿದ ಟಿಮ್ ಡೇವಿಡ್

ಇನ್ನು ಕೆಎಲ್ ರಾಹುಲ್ ವಿನ್ನಿಂಗ್ ಸೆಲೆಬ್ರೇಷನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೊದಲೇ ಮೈದಾನದಲ್ಲಿ ಆಟಗಾರರ ನಡುವೆ ವ್ಯಾಪಕ ವೈರಲ್ ಆಗಿತ್ತು. ಸಾಮಾನ್ಯವಾಗಿ ಶಾಂತವಾಗಿರುವ ಕೆಎಲ್ ರಾಹುಲ್ ತವರು ಮೈದಾನದಲ್ಲಿ ತವರು ಅಭಿಮಾನಿಗಳ ಎದುರು ಸ್ಫೋಟಕ ಪ್ರದರ್ಶನ ನೀಡಿ ಸಂಭ್ರಮಿಸಿದ್ದರು. ಇದು ಕೆಲ ಆಟಗಾರರಿಗೆ ಅಚ್ಚರಿ ತಂದಿತ್ತು. ಅಂತೆಯೇ ಆರ್ ಸಿಬಿಯ ಟಿಮ್ ಡೇವಿಡ್ ಕೆಎಲ್ ರಾಹುಲ್ ಸೆಲೆಬ್ರೇಷನ್ ಅನ್ನು ಡೆಲ್ಲಿಯ ಫಾಫ್ ಡುಪ್ಲೆಸಿಸ್ ಎದುರು ಮಿಮಿಕ್ರಿ ಮಾಡಿ ತೋರಿಸಿದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

KL Rahul-TimDavid
IPL 2025: "ಇದು ನನ್ನ ಗ್ರೌಂಡ್..''; RCB ಅಭಿಮಾನಿಗಳು, ಫ್ರಾಂಚೈಸಿಗೆ KL Rahul ತಿರುಗೇಟು? Video Viral

ಅಂದಹಾಗೆ ಈ ಹಿಂದೆ ಆರ್ ಸಿಬಿ ಭಾಗವೇ ಆಗಿದ್ದ ಕೆಎಲ್ ರಾಹುಲ್ ರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಅಲ್ಲದೆ ಕಳೆದ ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಅಭಿಮಾನಿಗಳು ಈ ಬಾರಿ ಕೆಎಲ್ ರಾಹುಲ್ ತಂಡಕ್ಕೆ ಮರಳಲಿದ್ದಾರೆ ಎಂದು ಭಾವಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಕಳೆದ ಬಾರಿಯ ಐಪಿಎಲ್ ನಲ್ಲಿ ಎಲ್ ಎಸ್ ಜಿ ಪರ ಆಡಿದ್ದ ರಾಹುಲ್ ರನ್ನು ಲಕ್ನೋ ಫ್ರಾಂಚೈಸಿ ನಡೆಸಿಕೊಂಡ ರೀತಿ ಆರ್ ಸಿಬಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಹೀಗಾಗಿ ಈ ಬಾರಿ ರಾಹುಲ್ ಆರ್ ಸಿಬಿ ಪರ ಆಡುತ್ತಾರೆ ಎಂದು ಭಾವಿಸಿದ್ದರು. ಆದರೆ ಆರ್ ಸಿಬಿ ಫ್ರಾಂಚೈಸಿಯ ಬದಲಿಗೆ ರಾಹುಲ್ ಡೆಲ್ಲಿ ಪಾಲಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com