ವಿರಾಟ್ ಕೊಹ್ಲಿ ಶತಕ ಗಳಿಸಿದ ಕೂಡಲೇ ಭಾರತ vs ದಕ್ಷಿಣ ಆಫ್ರಿಕಾ 3ನೇ ಏಕದಿನ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್!

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತು. 358 ರನ್ ಕಲೆಹಾಕಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿತು. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಶತಕ ಗಳಿಸಿದರು.
Virat Kohli
ವಿರಾಟ್ ಕೊಹ್ಲಿ
Updated on

ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ತಾವು ಪ್ರೇಕ್ಷಕರನ್ನು ಸೆಳೆಯುವ ವ್ಯಕ್ತಿ ಎಂದು ಸಾಬೀತುಪಡಿಸಿದ್ದಾರೆ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಏಕದಿನ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಭಾರತದ ಮಾಜಿ ನಾಯಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರಾಂಚಿ ಮತ್ತು ರಾಯ್‌ಪುರದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದಾರೆ. ಶನಿವಾರ ಭಾರತ ತಂಡವು ಸರಣಿಯ ನಿರ್ಣಾಯಕ 3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ವೈಎಸ್ ರಾಜಶೇಖರ ರೆಡ್ಡಿ ಎಡಿಎ-ವಿಡಿಸಿಎ ಕ್ರೀಡಾಂಗಣದವು ಸಂಪೂರ್ಣವಾಗಿ ತುಂಬಿ ತುಳುಕಲಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ನವೆಂಬರ್ 28 ರಂದು ಮೊದಲ ಹಂತವು ಲೈವ್ ಆದ ನಂತರ ಒಂದೆರಡು ದಿನಗಳವರೆಗೆ ಟಿಕೆಟ್‌ಗಳ ಮಾರಾಟವು ತುಂಬಾ ನಿಧಾನವಾಗಿತ್ತು. ಆದಾಗ್ಯೂ, ರಾಂಚಿಯಲ್ಲಿ ನಡೆದ IND vs SA 1ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದ ನಂತರ, ಡಿಸೆಂಬರ್ 1 ಮತ್ತು 3 ರಂದು ಆನ್‌ಲೈನ್‌ನಲ್ಲಿ ಮಾರಾಟವಾದಾಗ ಟಿಕೆಟ್‌ಗಳು ನಿಮಿಷಗಳಲ್ಲಿಯೇ ಸೋಲ್ಡ್ ಔಟ್ ಆದವು. ಅಭಿಮಾನಿಗಳು 1200 ರಿಂದ 18,000 ರೂ.ಗಳ ಬೆಲೆಯ ಟಿಕೆಟ್‌ಗಳನ್ನು ಖರೀದಿಸಿದ್ದರಿಂದ IND vs SA ನಡುವಿನ 3ನೇ ಏಕದಿನ ಪಂದ್ಯಕ್ಕೆ ಇದೀಗ ಟಿಕೆಟ್‌ಗಳು ಉಳಿದಿಲ್ಲ.

'ಮೊದಲ ಹಂತದ ಟಿಕೆಟ್‌ಗಳು ನವೆಂಬರ್ 28 ರಂದು ಮಾರಾಟವಾದವು. ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ. ಆದರೆ, ಎರಡನೇ ಹಂತದ ಟಿಕೆಟ್‌ಗಳು ಮಾರಾಟವಾಗುವ ಒಂದು ದಿನ ಮೊದಲು, ಕೊಹ್ಲಿ ರಾಂಚಿಯಲ್ಲಿ ಶತಕ ಗಳಿಸಿದರು. ಅದು ಎಲ್ಲವನ್ನೂ ಬದಲಿಸಿತು. ಅವರು ಇಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಎರಡನೇ ಮತ್ತು ಮೂರನೇ ಹಂತದ ಟಿಕೆಟ್‌ಗಳು ಆನ್‌ಲೈನ್‌ಗೆ ಬಂದಾಗ, ಅವು ನಿಮಿಷಗಳಲ್ಲಿ ಕಣ್ಮರೆಯಾದವು' ಎಂದು ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ನ ಮಾಧ್ಯಮ ಮತ್ತು ಕಾರ್ಯಾಚರಣೆ ತಂಡದ ಸದಸ್ಯ ವೈ ವೆಂಕಟೇಶ್ ಪ್ರಕಟಣೆಗೆ ತಿಳಿಸಿದರು.

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತು. 358 ರನ್ ಕಲೆಹಾಕಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಶತಕ ಗಳಿಸಿದರು ಮತ್ತು ರಾಹುಲ್ ಅರ್ಧಶತಕ ಗಳಿಸಿದರು. ಆದರೆ, ಪಂದ್ಯವನ್ನು ಭಾರತ ಕಳೆದುಕೊಂಡಿತು.

ಮೊದಲ ಪಂದ್ಯದಲ್ಲಿ ಭಾರತ 17 ರನ್‌ ಅಂತರದಿಂದ ಗೆದ್ದಿತ್ತು. ದಕ್ಷಿಣ ಆಫ್ರಿಕಾ 332 ರನ್ ಗಳಿಸಿತು. ಆ ಪಂದ್ಯದಲ್ಲಿಯೂ ಕೊಹ್ಲಿ 135 ರನ್ ಗಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com