

ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಈ ತಂಡವು ಆರಂಭದಿಂದಲೂ ಲೀಗ್‌ನ ಅಗ್ರ-ಮೂರು ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಮುಂಬೈ ಇಂಡಿಯನ್ಸ್ (MI) ಐಪಿಎಲ್‌ನಲ್ಲಿ ಅತ್ಯಂತ ಮೌಲ್ಯಯುತ ತಂಡವಾಗಿದೆ. ಆದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಾರ, ಐಪಿಎಲ್‌ನ ಒಟ್ಟಾರೆ ಬ್ರಾಂಡ್ ಮೌಲ್ಯವು ಗಮನಾರ್ಹವಾಗಿ ಕುಸಿದಿದೆ.
MI ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ
ಬ್ರಾಂಡ್ ಫೈನಾನ್ಸ್ ವಾರ್ಷಿಕ ವರದಿ ಪ್ರಕಾರ, MI ಅತ್ಯಂತ ಮೌಲ್ಯಯುತ ಫ್ರಾಂಚೈಸಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಇವೆ. ಮುಖೇಶ್ ಅಂಬಾನಿ ಒಡೆತನದ ತಂಡದ ಮೌಲ್ಯ $108 ಮಿಲಿಯನ್ ಆಗಿದೆ. ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) $53 ಮಿಲಿಯನ್ ಮೌಲ್ಯದೊಂದಿಗೆ ಅತ್ಯಂತ ಕಡಿಮೆ ಮೌಲ್ಯಯುತ ತಂಡವಾಗಿದೆ.
ಮುಂಬೈ ಇಂಡಿಯನ್ಸ್ (MI) - $108 ಮಿಲಿಯನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - $105 ಮಿಲಿಯನ್
ಚೆನ್ನೈ ಸೂಪರ್ ಕಿಂಗ್ಸ್ (CSK) - $93 ಮಿಲಿಯನ್
ಕೋಲ್ಕತ್ತಾ ನೈಟ್ ರೈಡರ್ಸ್ (KKR) - $74 ಮಿಲಿಯನ್
ಗುಜರಾತ್ ಟೈಟಾನ್ಸ್ (GT) - $70 ಮಿಲಿಯನ್
ಪಂಜಾಬ್ ಕಿಂಗ್ಸ್ (PBKS) - $66 ಮಿಲಿಯನ್
ಲಕ್ನೋ ಸೂಪರ್ ಜೈಂಟ್ಸ್ (LSG) - $59 ಮಿಲಿಯನ್
ಡೆಲ್ಲಿ ಕ್ಯಾಪಿಟಲ್ಸ್ (DC) - $59 ಮಿಲಿಯನ್
ಸನ್‌ರೈಸರ್ಸ್ ಹೈದರಾಬಾದ್ (SRH) - $56 ಮಿಲಿಯನ್
ರಾಜಸ್ಥಾನ್ ರಾಯಲ್ಸ್ (RR) - $53 ಮಿಲಿಯನ್
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಐಪಿಎಲ್ ಮತ್ತು ತಂಡಗಳ ಬ್ರಾಂಡ್ ಮೌಲ್ಯ ಕುಸಿತಕ್ಕೆ ದೊಡ್ಡ ಕಾರಣ ಎಂದು ವರದಿ ಹೇಳುತ್ತದೆ. ಈ ಹಿಂದೆ ಲೀಗ್‌ನಲ್ಲಿ ಅತ್ಯಂತ ಮೌಲ್ಯಯುತ ತಂಡವಾಗಿದ್ದ ಆರ್‌ಸಿಬಿ, ಮೌಲ್ಯವು ಶೇ 10 ರಷ್ಟು ಕುಸಿತ ಕಂಡು 105 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ (ಸುಮಾರು 94.35 ಕೋಟಿ ರೂ.) ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಬ್ರಾಂಡ್ ಮೌಲ್ಯವು ಶೇ 24 ರಷ್ಟು ಕುಸಿದು 93 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ (ಸುಮಾರು 83.57 ಕೋಟಿ ರೂ.) ತಲುಪಿದೆ. ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕ್ರಮವಾಗಿ ಶೇ 35, ಶೇ 34 ಮತ್ತು ಶೇ 33ರಷ್ಟು ಕುಸಿತ ಕಂಡಿವೆ. ಬ್ರಾಂಡ್ ಮೌಲ್ಯದಲ್ಲಿ ಏರಿಕೆ ಕಂಡ ಏಕೈಕ ತಂಡ ಗುಜರಾತ್ ಟೈಟಾನ್ಸ್ ಆಗಿದ್ದು, ಅದು ಕೂಡ ಕೇವಲ ಶೇ 2 ರಷ್ಟು ಏರಿಕೆಯಾಗಿದೆ.
Advertisement