

ದೇಶೀಯ 50 ಓವರ್‌ಗಳ ಟೂರ್ನಮೆಂಟ್ ವಿಜಯ್ ಹಜಾರೆ ಟ್ರೋಫಿ (ವಿಎಚ್‌ಟಿ) ಗೆ ಮರಳುತ್ತಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ತಮ್ಮ ಎಲ್ಲ ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಈ ವರ್ಷದ ಆರಂಭದಲ್ಲಿ ಆರ್‌ಸಿಬಿ ತಂಡದ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ನಂತರ, ಘಟನೆಯ ತನಿಖೆಗಾಗಿ ಕರ್ನಾಟಕ ಸರ್ಕಾರ ನಿಯೋಜಿಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ಆಯೋಗವು ಕ್ರೀಡಾಂಗಣವನ್ನು 'ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಅನರ್ಹ' ಎಂದು ಪರಿಗಣಿಸಿತ್ತು.
ಇದೀಗ ಹೊಸದಾಗಿ ಆಯ್ಕೆಯಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಅವರು, ಮತ್ತೊಮ್ಮೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರ ಚಿನ್ನಸ್ವಾಮಿಯಲ್ಲಿ ದೇಶೀಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಜೂನ್‌ನಲ್ಲಿ 11 ಮಂದಿ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಯ ನಂತರ ಕ್ರೀಡಾಂಗಣದಲ್ಲಿ ಯಾವುದೇ ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿಲ್ಲ. ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಪ್ರಕಾರ, ಕೆಎಸ್‌ಸಿಎಯ ಮಹಾರಾಜ ಟ್ರೋಫಿಯನ್ನು ಆಗಸ್ಟ್‌ನಲ್ಲಿ ಮೈಸೂರಿಗೆ ಸ್ಥಳಾಂತರಿಸಲಾಯಿತು ಮತ್ತು ಪ್ರಶಸ್ತಿ ಹಣಾಹಣಿ ಸೇರಿದಂತೆ ಅದರ ಐಸಿಸಿ ಮಹಿಳಾ ವಿಶ್ವಕಪ್‌ನ ಐದು ಪಂದ್ಯಗಳನ್ನು ಸಹ ಸ್ಥಳಾಂತರಿಸಲಾಯಿತು. ಆದರೆ ಈಗ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳನ್ನು ನಡೆಸಲು ಅವಕಾಶ ಸಿಕ್ಕಿದ್ದು, ಚೆಂಡು ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಂಗಳದಲ್ಲಿದೆ.
ವಿರಾಟ್ ಕೊಹ್ಲಿ ತಮ್ಮ ಎಲ್ಲ ವಿಎಚ್‌ಟಿ ಪಂದ್ಯಗಳನ್ನು ತಮ್ಮ ಆರ್‌ಸಿಬಿ ತವರು ಮೈದಾನದಲ್ಲಿ ಆಡಬಹುದು. ಕೆಎಸ್‌ಸಿಎ ಆರಂಭದಲ್ಲಿ ಆಲೂರಿನಲ್ಲಿ ಪಂದ್ಯಗಳನ್ನು ಆಯೋಜಿಸಿತ್ತು. ಸದ್ಯ, ವಿರಾಟ್ ಮತ್ತು ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಇಬ್ಬರೂ ಪಂದ್ಯಾವಳಿಯ ಸಂಭಾವ್ಯ ಆಟಗಾರರಲ್ಲಿ ಹೆಸರಿಸಲ್ಪಟ್ಟಿದ್ದಾರೆ ಮತ್ತು ಮೊದಲ ಮೂರು ಪಂದ್ಯಗಳಿಗೆ ಲಭ್ಯವಿರುತ್ತಾರೆ.
ವೆಂಕಟೇಶ್ ಪ್ರಸಾದ್ ಮತ್ತು ಕೆಎಸ್‌ಸಿಎ ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಈ ವಾರದ ಆರಂಭದಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಮಾತುಕತೆ ನಡೆಸಿದರು.
ವಿರಾಟ್ ಮತ್ತು ಪಂತ್ ಅವರ ತಾರಾ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕೆಎಸ್‌ಸಿಎ ಸಾರ್ವಜನಿಕರಿಗೆ ಕೆಲವು ಸ್ಟ್ಯಾಂಡ್‌ಗಳನ್ನು ತೆರೆಯಲು ಮತ್ತು 2,000-3,000 ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲು ಯೋಜಿಸುತ್ತಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
ಮುಂದಿನ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಲ್ಲಿ ತನ್ನ ಪಾಲನ್ನು ಕಳೆದುಕೊಳ್ಳಬಾರದು ಎಂದು ರಾಜ್ಯ ಕ್ರಿಕೆಟ್ ಆಡಳಿತ ಮಂಡಳಿ ಬಯಸುವುದರಿಂದ, ವಿಎಚ್‌ಟಿ ಪಂದ್ಯಗಳು ಇದೀಗ ಕೆಎಸ್‌ಸಿಎಗೆ ಕೇವಲ ಆರಂಭಿಕ ಹಂತವಾಗಿದೆ.
Advertisement