

ಭಾನುವಾರ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 12 ರನ್‌ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ತಮ್ಮ ಕಳಫೆ ಫಾರ್ಮ್ ಅನ್ನು ಮುಂದುವರಿಸಿದರು. ಭಾರತವು ಪಂದ್ಯವನ್ನು 7 ವಿಕೆಟ್ ಅಂತರದಿಂದ ಗೆದ್ದರೂ, ಸೂರ್ಯಕುಮಾರ್ ಅವರ ಕಳಪೆ ಫಾರ್ಮ್ ಅಭಿಮಾನಿಗಳು ಮತ್ತು ತಜ್ಞರಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಯಿತು. ಅವರ ನೆಚ್ಚಿನ ಪಿಕ್-ಅಪ್ ಶಾಟ್ ಆಡಲು ಹೋಗಿ ಸೂರ್ಯಕುಮಾರ್ ಔಟ್ ಆದರು. ಫೈನ್ ಲೆಗ್ ಮೇಲೆ ಚೆಂಡನ್ನು ಹೊಡೆಯಲು ಪ್ರಯತ್ನಿಸಿದಾಗ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಓಟ್ನೀಲ್ ಬಾರ್ಟ್‌ಮನ್‌ಗೆ ಕ್ಯಾಚ್ ನೀಡಿದರು. ಸುನೀಲ್ ಗವಾಸ್ಕರ್ ಈ ಬಗ್ಗೆ ಟೀಕಿಸಿದ್ದು, ಪಿಕಪ್ ಶಾಟ್ ಅನ್ನು ಅವರು 'ಕೋಲ್ಡ್ ಸ್ಟೋರೇಜ್'ನಲ್ಲಿ ಇಡಬೇಕು ಮತ್ತು ಸರಿಯಾದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎಂದಿದ್ದಾರೆ.
'ಇದು ಅವರಿಗೆ ತುಂಬಾ ಉತ್ಪಾದಕವಾದ ಶಾಟ್ ಆಗಿದೆ. ಈಗ, ನೀವು ಫಾರ್ಮ್‌ನಲ್ಲಿಲ್ಲದಿದ್ದಾಗ, ಅದು ದೂರ ಹೋಗುವ ಬದಲು ಗಾಳಿಯಲ್ಲಿ ಮೇಲಕ್ಕೆ ಹೋಗುತ್ತದೆ ಮತ್ತು ಬೌಂಡರಿಯೊಳಗೆ ಇರುತ್ತದೆ. ಆದ್ದರಿಂದ ಬಹುಶಃ, ಅವರು ಫಾರ್ಮ್‌ಗೆ ಮರಳುವವರೆಗೆ, ಆ ಶಾಟ್ ಅನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲು ನೋಡಬೇಕು' ಎಂದು ಸೂರ್ಯಕುಮಾರ್ ಯಾದವ್ ಅವರಿಗೆ ಗವಾಸ್ಕರ್ ಸಲಹೆ ನೀಡಿದರು.
'ಏಕೆಂದರೆ ಆ ಶಾಟ್ ಅವರನ್ನು ಔಟ್ ಮಾಡುತ್ತಿದೆ ಮತ್ತು ಭಾರತಕ್ಕೆ ಸೂರ್ಯಕುಮಾರ್ ಯಾದವ್ ಕೇವಲ 12 ರನ್ ಗಳಿಸುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.
ಈಮಧ್ಯೆ, ಭಾರತದ T20I ನಾಯಕ ಸೂರ್ಯಕುಮಾರ್ ಯಾದವ್ ಭಾನುವಾರ ತಮ್ಮಿಂದ ರನ್‌ಗಳ ಕೊರತೆಯನ್ನು ಒಪ್ಪಿಕೊಂಡರು ಆದರೆ, ಅದನ್ನು ಫಾರ್ಮ್ ಕೊರತೆ ಎಂದು ಪರಿಗಣಿಸಲಿಲ್ಲ. ರನ್‌ಗಳು ಬೇಗ ಬರುತ್ತವೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಜಯ ಸಾಧಿಸಿದ ಪಂದ್ಯದಲ್ಲಿ ಸೂರ್ಯಕುಮಾರ್ 11 ಎಸೆತಗಳಲ್ಲಿ 12 ರನ್ ಗಳಿಸಿ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಔಟಾದರು.
ಅಕ್ಟೋಬರ್ 24 ರಂದು ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 75 ರನ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 47 ರನ್‌ಗಳನ್ನು ಹೊರತುಪಡಿಸಿ, ಅವರು 21 ಇನಿಂಗ್ಸ್‌ಗಳಲ್ಲಿ ಕಡಿಮೆ ರನ್ ಗಳಿಸಿದ್ದಾರೆ.
'ನಾನು ನೆಟ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್‌ಗಳು ಬರಬೇಕಾದಾಗ ಅವು ಬರುತ್ತವೆ. ಇದರರ್ಥ ನಾನು ಫಾರ್ಮ್‌ನಲ್ಲಿಲ್ಲ ಎಂದಲ್ಲ, ಖಂಡಿತವಾಗಿಯೂ ಈಗ ರನ್‌ಗಳು ಬರುತ್ತಿಲ್ಲ' ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಸೂರ್ಯಕುಮಾರ್ ಹೇಳಿದರು.
Advertisement