
ಮುಂಬೈ: ಭಾರತದ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡ ಇಂಗ್ಲೆಂಡ್ ತಂಡ ಬೇಡದ ಹೀನಾಯ ದಾಖಲೆಗೆ ಪಾತ್ರವಾಗಿದೆ.
ಹೌದು.. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 5ನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಬರೊಬ್ಬರಿ 150ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆ ಮೂಲಕ ಅತೀ ಹೆಚ್ಚು ರನ್ ಅಂತರದಲ್ಲಿ ಸೋಲು ಕಂಡ ಜಗತ್ತಿನ 2ನೇ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಈ ಹಿಂದೆ 2023ರಲ್ಲಿ ಅಹ್ಮದಾಬಾದ್ ನಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 168ರನ್ ಗಳ ಅಂತರದಲ್ಲಿ ಭಾರಿ ಸೋಲು ಕಂಡಿತ್ತು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಂಡವೊಂದು ಕಂಡ ಅತೀ ದೊಡ್ಡ ರನ್ ಅಂತರದ ಸೋಲಾಗಿದೆ.
ನಂತರದ ಸ್ಥಾನದಲ್ಲಿ ಇದೀಗ 150ರನ್ ಅಂತರದ ಸೋಲಿನೊಂದಿಗೆ ಇಂಗ್ಲೆಂಡ್ ಸೇರ್ಪಡೆಯಾಗಿದೆ. 2018ರಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 143ರನ್ ಅಂತರದ ಸೋಲು ಕಂಡಿತ್ತು. ಇದು ಮೂರನೇ ಸ್ಥಾನದಲ್ಲಿದೆ.
Biggest defeat by runs for a Full Member side in T20Is
168 Ind vs NZ Ahmedabad 2023
150 Ind vs Eng Wankhede 2025 *
143 Pak vs WI Karachi 2018
143 Ind vs Ire Dublin 2018
137 Eng vs WI Basseterre 2019
135 Ind vs SA Joburg 2024
14 ಸಿಕ್ಸರ್ ಚಚ್ಚಿಸಿಕೊಂಡ ಜೋಫ್ರಾ ಆರ್ಚರ್ ಹೀನಾಯ ದಾಖಲೆ
ಇನ್ನು ಇದೇ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಹೀನಾಯ ದಾಖಲೆಗೆ ಪಾತ್ರರಾಗಿದ್ದು, ವೇಗಿ ಜೋಫ್ರಾ ಆರ್ಚರ್ 4 ಓವರ್ ಗೆ 55ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಅಂತೆಯೇ ಇದೇ ಸರಣಿಯಲ್ಲಿ ಜೋಫ್ರಾ ಆರ್ಚರ್ 14 ಸಿಕ್ಸರ್ ನೀಡಿದ್ದು, ಆ ಮೂಲಕ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಸಿಕ್ಸರ್ ನೀಡಿದ 2ನೇ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ 2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 16 ಸಿಕ್ಸರ್ ನೀಡಿದ್ದರು. ಆ ಮೂಲಕ ಅತೀ ಹೆಚ್ಚು ಸಿಕ್ಸರ್ ನೀಡಿದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Advertisement