ವಿರಾಟ್ ಕೊಹ್ಲಿ ಫಾರ್ಮ್‌ ಬಗ್ಗೆ ಮಾಜಿ RCB ಆಟಗಾರ ಕ್ರಿಸ್ ಗೇಲ್ ಹೇಳಿದ್ದೇನು?

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ರನ್‌ಗಾಗಿ ತಡಕಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಅವರು ODIಗಳಲ್ಲಿ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಕ್ರಿಸ್ ಗೇಲ್ - ವಿರಾಟ್ ಕೊಹ್ಲಿ
ಕ್ರಿಸ್ ಗೇಲ್ - ವಿರಾಟ್ ಕೊಹ್ಲಿ
Updated on

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ, ಕೊಹ್ಲಿ ಫಾರ್ಮ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಭಾನುವಾರ ಕಟಕ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಕೇವಲ ಐದು ರನ್‌ಗಳಿಗೆ ಔಟಾಗುವ ಮೂಲಕ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

'ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್‌ನಲ್ಲಿರಬಹುದು ಆದರೆ, ಅವರು ಇಂದಿಗೂ 'ವಿಶ್ವದ ಅತ್ಯುತ್ತಮ ಆಟಗಾರ' ಎಂದು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಜೊತೆಯಲ್ಲಿ ಆಡಿದ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

'ಫಾರ್ಮ್ ಅನ್ನು ಲೆಕ್ಕಿಸದೆ ವಿರಾಟ್ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ. ಯಾವ ಮಾದರಿಯಲ್ಲಿ ಎಷ್ಟು ಶತಕಗಳನ್ನು ಸಿಡಿಸಿದ್ದಾರೆ ಎನ್ನುವ ಅಂಕಿಅಂಶಗಳು ಅವರು ಇನ್ನೂ ವಿಶ್ವದ ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸುತ್ತವೆ' ಎಂದು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೇಲ್ ಹೇಳಿದರು.

'ಇದು ಆಟಗಾರರಿಗೆ ಸಾಮಾನ್ಯ ಅನುಭವವಾಗಿದೆ. ಆದರೆ, ಇದು ಅವರ ವೃತ್ತಿಜೀವನದ ಅಂತಿಮ ಘಟ್ಟದಲ್ಲಿ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ಆದರೆ, ಕಳಪೆ ಫಾರ್ಮ್ ಅಥವಾ ಹಿನ್ನಡೆಗಳಂತಹ ಸಂಗತಿಗಳು ಆಟದ ಒಂದು ಭಾಗವಾಗಿದೆ. ಹೀಗಾಗಿ, ವಿರಾಟ್ ಕೊಹ್ಲಿ ಉತ್ಸಾಹ ಕಳೆದುಕೊಳ್ಳಬಾರದು ಮತ್ತು ಮತ್ತೆ ಉತ್ತಮವಾಗಿ ಹಿಂತಿರುಗಬೇಕು' ಎಂದಿದ್ದಾರೆ.

ಕ್ರಿಸ್ ಗೇಲ್ - ವಿರಾಟ್ ಕೊಹ್ಲಿ
2nd ODI: ರೋಹಿತ್ ಶರ್ಮಾ World Record; ಸಚಿನ್, ಜಯಸೂರ್ಯ, ದಿಲ್ಶಾನ್ ವಿಶ್ವ ದಾಖಲೆಗಳೂ ಪತನ; ಮೊದಲ ಆಟಗಾರ!

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ರನ್‌ಗಾಗಿ ತಡಕಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಅವರು ODIಗಳಲ್ಲಿ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮೊಣಕಾಲಿನ ನೋವಿನಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಿಂದ ಹೊರಗುಳಿದಿದ್ದ ಅವರು ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ, ಮತ್ತೊಮ್ಮೆ ವೈಫಲ್ಯ ಕಂಡರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗೇಲ್ ಅವರ ದಾಖಲೆಯನ್ನು ಕೊಹ್ಲಿ ಮುರಿಯಬಹುದೇ ಎಂಬ ಪ್ರಶ್ನೆಗೆ, 'ಈ ದಾಖಲೆಯನ್ನು ಮುರಿಯಲು ಬೇಕಾದ 200 ರನ್‌ಗಳನ್ನು ಗಳಿಸುವುದು ಕೊಹ್ಲಿಗೆ ಸುಲಭವಾಗಿದೆ. ಆದರೆ, ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಕೊಹ್ಲಿ 200 ರನ್ ಗಳಿಸಬಹುದು ಮತ್ತು ಈ ದಾಖಲೆಯನ್ನು ಮುರಿಯುವ ಮೊದಲು ಅವರು ಶತಕ ಸಿಡಿಸುತ್ತಾರೆ ಎಂದು ನನಗೆ ಖಾತರಿಯಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರಿಸ್ ಗೇಲ್ - ವಿರಾಟ್ ಕೊಹ್ಲಿ
Ind vs Eng, 1st ODI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರೆ ಎಂದ ಮಾಜಿ ಕ್ರಿಕೆಟಿಗ!

ODI ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸುವ ಮೂಲಕ ತಮ್ಮ ದಾಖಲೆಯನ್ನು ಮುರಿದಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು 'new king in town' ಎಂದು ಗೇಲ್ ಕರೆದರು.

'ರೋಹಿತ್‌ಗೆ ಅಭಿನಂದನೆಗಳು, ಕ್ರೀಡೆಗೆ ಯಾವಾಗಲೂ ಹೊಸ ಮನರಂಜನೆಯ ಅಗತ್ಯವಿದೆ ಮತ್ತು ರೋಹಿತ್ ಇಷ್ಟು ವರ್ಷಗಳ ಕಾಲ ಮನರಂಜನೆ ನೀಡುತ್ತಿದ್ದಾರೆ. ನಾನು ಅವರೊಂದಿಗೆ ಅದನ್ನೇ ಮಾಡಿದ್ದೇನೆ. ಹಾಗಾಗಿ ಅವರು ಈಗ ಪಟ್ಟಣದಲ್ಲಿ ಹೊಸ ರಾಜರಾಗಿದ್ದಾರೆ. ಆದ್ದರಿಂದ ಅವರಿಗೆ ಅಭಿನಂದನೆಗಳು ಮತ್ತು ಅವರು ಇನ್ನಷ್ಟು ಸಿಕ್ಸರ್‌ಗಳನ್ನು ಬಾರಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ಅನುಪಸ್ಥಿತಿಯ ಬಗ್ಗೆ ಗೇಲ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com