BGT 2025, 5th test: ಸ್ಫೋಟಕ ಬ್ಯಾಟಿಂಗ್, Rishabh Pant ವಿಶ್ವ ದಾಖಲೆ; 130 ವರ್ಷಗಳ Record ಪತನ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ 2ನೇ ದಿನ ಬೌಲರ್ ಗಳ ಆರ್ಭಟದ ನಡುವೆಯೂ ಆಸಿಸ್ ಬೌಲರ್ ಗಳ ಬೆವರಿಳಿಸಿದ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡದ ಪರ ದಾಖಲೆ ನಿರ್ಮಿಸಿದ್ದಾರೆ.
Rishabh Pant
ರಿಷಬ್ ಪಂತ್ ಬ್ಯಾಟಿಂಗ್
Updated on

ಸಿಡ್ನಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಭಾರತದ ರಿಷಬ್ ಪಂತ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ 2ನೇ ದಿನ ಬೌಲರ್ ಗಳ ಆರ್ಭಟದ ನಡುವೆಯೂ ಆಸಿಸ್ ಬೌಲರ್ ಗಳ ಬೆವರಿಳಿಸಿದ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡದ ಪರ ದಾಖಲೆ ನಿರ್ಮಿಸಿದ್ದಾರೆ. ಭಾರತದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಭಾರತ ತಂಡದ ಪೆವಿಲಿಯನ್ ಪರೇಡ್ ಹೊರತಾಗಿಯೂ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಕೇವಲ 33 ಎಸೆತಗಳನ್ನು ಎದುರಿಸಿದ ಪಂತ್ 4 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 61ರನ್ ಗಳನ್ನು ಗಳಿಸಿ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಔಟಾದರು. ಇದಕ್ಕೂ ಮೊದಲು ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ 2ನೇ ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಂತೆಯೇ ಆಸಿಸ್ ನೆಲದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ವಿದೇಶಿ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.

Rishabh Pant
BGT 2025, 5th test: 2ನೇ ದಿನದಾಟ ಅಂತ್ಯ, ಭಾರತ 2ನೇ ಇನ್ನಿಂಗ್ಸ್ 141/6, ಆಸ್ಟ್ರೇಲಿಯಾ ಮೇಲುಗೈ!

ಮೊದಲ ಇನ್ನಿಂಗ್ಸ್ ನಲ್ಲಿ 98 ಎಸೆತಗಳಲ್ಲಿ 40.82 ಸ್ಟ್ರೈಕ್ ರೇಟ್ ನಲ್ಲಿ 40 ರನ್ ಗಳಿಸಿದ್ದ ಪಂತ್, 2ನೇ ಇನ್ನಿಂಗ್ಸ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 33 ಎಸೆತಗಳಲ್ಲಿ ಬರೊಬ್ಬರಿ 184.85 ಸ್ಟ್ರೈಕ್ ರೇಟ್ ನಲ್ಲಿ 61 ರನ್ ಗಳಿಸಿದರು.

Rishabh Pant this Test

  • 1st inngs: 40 off 98 (SR 40.82)

  • 2nd inngs: 61 off 33 (SR 184.85)

ಇನ್ನು ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಇದೇ ರಿಷಬ್ ಪಂತ್ ಇದ್ದು, 2022ರ ಶ್ರೀಲಂಕಾ ವಿರುದ್ಧದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದು ಭಾರತದ ಪರ ದಾಖಲಾದ ವೇಗದ ಅರ್ಧಶತಕವಾಗಿದೆ. 2ನೇ ಸ್ಥಾನದಲ್ಲಿ ಇಂದಿನ ಪಂದ್ಯದ ಅರ್ಧಶತಕವಿದ್ದು, ಇಂದು ಪಂತ್ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದು ಇದೀಗ ವೇಗದ ಅರ್ಧಶತಕಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

Fastest 50s for India in Tests (by balls faced)

  • 28 Rishabh Pant vs SL Bengaluru 2022

  • 29 Rishabh Pant vs Aus Sydney 2025 *

  • 30 Kapil Dev vs Pak Karachi 1982

  • 31 Shardul Thakur vs Eng The Oval 2021

  • 31 Yashasvi Jaiswal vs Ban Kanpur 2024

130 ವರ್ಷಗಳ ದಾಖಲೆ ಪತನ

ಅಂತೆಯೇ ಪಂತ್ ರ ಈ ಸ್ಫೋಟಕ ಬ್ಯಾಟಿಂಗ್ ಆಸಿಸ್ ನೆಲದಲ್ಲಿ 130 ವರ್ಷಗಳ ದಾಖಲೆಯನ್ನು ಪತನ ಮಾಡಿದೆ. ಆಸಿಸ್ ನೆಲದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ವಿದೇಶಿ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.ಇದಕ್ಕೂ ಮೊದಲು 1895ರಲ್ಲಿ ಮೆಲ್ಬೋರ್ನ್ ನಲ್ಲಿ ಇಂಗ್ಲೆಂಡ್ ನ ಜಾನ್ ಬ್ರೌನ್ ಮತ್ತು 1975ರಲ್ಲಿ ಪರ್ತ್ ನಲ್ಲಿ ವೆಸ್ಟ್ ಇಂಡೀಸ್ ನ ರಾಯ್ ಫ್ರೆಡ್ರಿಕ್ಸ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈ ದಾಖಲೆಯನ್ನೂ ಕೂಡ ಪಂತ್ ಮುರಿದ್ದಾರೆ.

This is also the fastest by a visiting batter on Australian soil bettering the 33-ball efforts by England's John Brown (Melbourne 1895) and West Indies' Roy Fredericks (Perth 1975)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com