Ranji Trophy: 6 ರನ್‌ ಗಳಿಸಿ ವಿರಾಟ್ ಕೊಹ್ಲಿ ಔಟ್; ಕ್ಷಣದಲ್ಲೇ ಕ್ರೀಡಾಂಗಣದಿಂದ ಹೊರನಡೆದ ಫ್ಯಾನ್ಸ್!

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ಲೀಗ್ ಹಂತದ ಪಂದ್ಯದ ಎರಡನೇ ದಿನದಂದು ವಿರಾಟ್ ಕೊಹ್ಲಿ ಕೇವಲ ಆರು ರನ್‌ಗಳಿಗೆ ಔಟ್ ಆಗಿದ್ದು, ಇದರಿಂದ ಬೇಸರಗೊಂಡ ಫ್ಯಾನ್ಸ್ ಕ್ರೀಡಾಂಗಣದಿಂದ ಹೊರನಡೆದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ನವದೆಹಲಿ: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದು, ಕೊಹ್ಲಿ ಬ್ಯಾಟಿಂಗ್ ನೋಡಲು ಜಮಾಯಿಸಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ.

ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ಲೀಗ್ ಹಂತದ ಪಂದ್ಯದ ಎರಡನೇ ದಿನದಂದು ವಿರಾಟ್ ಕೊಹ್ಲಿ ಕೇವಲ ಆರು ರನ್‌ಗಳಿಗೆ ಔಟ್ ಆಗಿದ್ದು, ಇದರಿಂದ ಬೇಸರಗೊಂಡ ಫ್ಯಾನ್ಸ್ ಕ್ರೀಡಾಂಗಣದಿಂದ ಹೊರನಡೆದಿದ್ದಾರೆ.

ಕೊಹ್ಲಿ ದೆಹಲಿ ತಂಡವನ್ನು ಪ್ರತನಿಧಿಸುತ್ತಿದ್ದು, 15 ಎಸೆತಗಳಲ್ಲಿ ಆರು ರನ್ ಗಳಿಸಿ ಔಟ್ ಆಗಿದ್ದಾರೆ. ಬಲಗೈ ವೇಗಿ ಹಿಮಾಂಶು ಸಾಂಗ್ವಾನ್ ಅವರ ಎಸೆತದಲ್ಲಿ ಬೋಲ್ಡ್ ಆಗಿದ್ದಾರೆ. ಹಿಂದಿನ ಎಸೆತದಲ್ಲಿ ಕೊಹ್ಲಿ ಬೌಂಡರಿ ಬಾರಿಸಿದ್ದರು. ಅದೇ ರೀತಿಯ ಶಾಟ್ ಅನ್ನು ಪ್ರಯತ್ನಿಸಲು ಕೊಹ್ಲಿ ಮುಂದಾದಾಗ ಚೆಂಡು ಅವರತ್ತ ಹೆಚ್ಚು ಸ್ವಿಂಗ್ ಆಗಿದ್ದರಿಂದ ಕೊಹ್ಲಿ ವಿಕೆಟ್ ಕಳೆದುಕೊಳ್ಳಬೇಕಾಯಿತು.

36 ವರ್ಷದ ಬ್ಯಾಟರ್ ಸುಮಾರು 12 ವರ್ಷಗಳ ನಂತರ ರಣಜಿ ಟ್ರೋಫಿಯಲ್ಲಿ ಮೈದಾನಕ್ಕಿಳಿದಿದ್ದಾರೆ. 2012ರ ನವೆಂಬರ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಗಾಜಿಯಾಬಾದ್‌ನಲ್ಲಿ ನಡೆದ ಪಂದ್ಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ವಿರಾಟ್ ಕೊಹ್ಲಿ
Ranji Trophy: 12 ವರ್ಷಗಳ ಬಳಿಕ ರಣಜಿಯಲ್ಲಿ ವಿರಾಟ್ ಕೊಹ್ಲಿ; ನೂಕುನುಗ್ಗಲು; ಮೈದಾನಕ್ಕೆ ನುಗ್ಗಿ ಕಾಲಿಗೆ ಬಿದ್ದ ಅಭಿಮಾನಿ!

ಟಾಸ್ ಗೆದ್ದ ದೆಹಲಿ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ರೈಲ್ವೇಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತ್ತು. ತನ್ನ ಇನಿಂಗ್ಸ್ ಆರಂಭಿಸಿರುವ ದೆಹಲಿ ಸದ್ಯ 41 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. 30 ಓವರ್‌ಗಳ ಅಂತ್ಯಕ್ಕೆ ದೆಹಲಿ 4 ವಿಕೆಟ್‌ ನಷ್ಟಕ್ಕೆ 103 ರನ್ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com