
ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕುಟುಂಬದೊಂದಿಗೆ ಸಮಯ ಕಳೆಯತ್ತಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಲಂಡನ್‌ನಲ್ಲಿ ವಿರಾಟ್ ಕೊಹ್ಲಿ ಅವರ ವಿಳಾಸ ಯಾವುದು ಎಂಬುದರ ಸುಳಿವನ್ನು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಸದ್ಯ ಲಂಡನ್‌ನ ಸೇಂಟ್ ಜಾನ್ಸ್ ವುಡ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ.
ಕಳೆದ ತಿಂಗಳು ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಗರದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ವರದಿಗಳು ಅವರು ಎಲ್ಲಿ ವಾಸಿಸುತ್ತಿರಬಹುದು ಎಂಬ ಬಗ್ಗೆ ಊಹಿಸಿದ್ದರೂ, ಅವರ ಅಧಿಕೃತ ವಿಳಾಸ ಖಚಿತವಾಗಿರಲಿಲ್ಲ. ದಿ ಟೆಲಿಗ್ರಾಫ್‌ನಲ್ಲಿನ ವರದಿಯೊಂದು ಕೊಹ್ಲಿ ನಾಟಿಂಗ್ ಹಿಲ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಿತ್ತು. ಆದಾಗ್ಯೂ, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಮಯದಲ್ಲಿ ಟ್ರಾಟ್, ವಿರಾಟ್ ಸದ್ಯ ಸೇಂಟ್ ಜಾನ್ಸ್ ವುಡ್ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ. ವಾಯುವ್ಯ ಲಂಡನ್‌ನಲ್ಲಿರುವ ಈ ಪ್ರದೇಶವು ಸುಂದರವಾದ ಮನೆಗಳಿಗೆ ಹೆಸರುವಾಸಿಯಾಗಿದೆ.
'ಅವರು ಲಂಡನ್‌ನ ಪ್ರಸಿದ್ಧ ಸೇಂಟ್ ಜಾನ್ಸ್ ವುಡ್‌ನಲ್ಲಿ ಅಥವಾ ಹತ್ತಿರದಲ್ಲಿ ಯಾರಾದರೂ ವಾಸಿಸುತ್ತಿದ್ದಾರೆಯೇ? ಅವರನ್ನು ಹಿಂತಿರುಗಿ ಬರಲು ಮನವೊಲಿಸಲು ಸಾಧ್ಯವಿಲ್ಲವೇ?' ಎಂದು ಅವರು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ನಾಲ್ಕನೇ ಇನಿಂಗ್ಸ್‌ನಲ್ಲಿ 500 ರನ್‌ಗಳ ಮೊತ್ತವನ್ನು ದಾಟುವ ಮೂಲಕ ನಾಯಕ ಶುಭಮನ್ ಗಿಲ್ ಸತತ ಎರಡನೇ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಮೂರನೇ ಶತಕವನ್ನು ಗಳಿಸಿದರು.
25 ವರ್ಷದ ನಾಯಕ ಎರಡನೇ ಇನಿಂಗ್ಸ್‌ನಲ್ಲಿ 162 ಎಸೆತಗಳಲ್ಲಿ 13 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳೊಂದಿಗೆ 161 ರನ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 269 ರನ್ ಗಳಿಸಿದ ನಂತರ ದಂತಕಥೆ ಸುನೀಲ್ ಗವಾಸ್ಕರ್ ನಂತರ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್ ಅವರನ್ನು ಶ್ಲಾಘಿಸಿದ್ದಾರೆ.
'ಚೆನ್ನಾಗಿ ಆಡಿದೆ ಸ್ಟಾರ್ ಬಾಯ್. ಅಪರೂಪದ ದಾಖಲೆ ಬರೆಯುತ್ತಿರುವಿರಿ. ಇಲ್ಲಿಂದ ಮುಂದೆ ಇನ್ನೂ ಹೆಚ್ಚಿನ ಎತ್ತರ ತಲುಪಿ. ನೀವು ಇದಕ್ಕೆಲ್ಲ ಅರ್ಹರು' ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
Advertisement