ಟೆಸ್ಟ್, ಏಕದಿನ ಸ್ವರೂಪಕ್ಕೆ ಪ್ರತ್ಯೇಕ ಕೋಚ್ ಅಗತ್ಯ: ಯಾವುದೇ ತಪ್ಪಿಲ್ಲ ಎಂದ ಮಾಜಿ ಆಟಗಾರ ಹರ್ಭಜನ್ ಸಿಂಗ್

ಟಿ20 ವಿಶ್ವಕಪ್ ಗೆಲುವಿನ ನಂತರ ರಾಹುಲ್ ದ್ರಾವಿಡ್ ನಿರ್ಗಮನದ ನಂತರ ಬಿಸಿಸಿಐ ಗಂಭೀರ್ ಅವರನ್ನು ಎಲ್ಲ ಸ್ವರೂಪಗಳಿಗೆ ಮುಖ್ಯ ಕೋಚ್ ಆಗಿ ನೇಮಿಸಲು ನಿರ್ಧರಿಸಿತು.
Harbhajan Singh
ಹರ್ಭಜನ್ ಸಿಂಗ್
Updated on

ಭಾರತೀಯ ಕ್ರಿಕೆಟ್ ತಂಡಕ್ಕೆ ವಿಭಿನ್ನ ಸ್ವರೂಪಗಳಿಗೆ (ಟೆಸ್ಟ್, ಏಕದಿನ, ಟಿ20ಐ) ಬೇರೆ ಬೇರೆ ತರಬೇತುದಾರರನ್ನು ನೇಮಿಸುವ ಕುರಿತು ಪರಿಗಣಿಸಬೇಕು, ಇದು ಕೋಚ್ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ. 2024ರಲ್ಲಿ ರಾಹುಲ್ ದ್ರಾವಿಡ್ ಅವರ ಬದಲಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದು, ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮತ್ತೊಂದು ಟೆಸ್ಟ್ ಸೋಲಿನ ಬಳಿಕ ಈ ಸಲಹೆ ನೀಡಲಾಗಿದೆ. ಪ್ರತಿಯೊಂದು ಸ್ವರೂಪಕ್ಕೂ ಪ್ರತ್ಯೇಕ ತರಬೇತುದಾರರನ್ನು ಪರಿಗಣಿಸುವುದು ಕೆಟ್ಟ ಆಯ್ಕೆಯಲ್ಲ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಪ್ರತ್ಯೇಕವಾಗಿ ತರಬೇತಿ ನೀಡುವುದರಿಂದ ತರಬೇತುದಾರರು ಸೇರಿದಂತೆ ಎಲ್ಲರಿಗೂ ಹೊರೆ ಕಡಿಮೆಯಾಗುತ್ತದೆ. ಟಿ20 ವಿಶ್ವಕಪ್ ಗೆಲುವಿನ ನಂತರ ರಾಹುಲ್ ದ್ರಾವಿಡ್ ನಿರ್ಗಮನದ ನಂತರ ಬಿಸಿಸಿಐ ಗಂಭೀರ್ ಅವರನ್ನು ಎಲ್ಲ ಸ್ವರೂಪಗಳಿಗೆ ಮುಖ್ಯ ಕೋಚ್ ಆಗಿ ನೇಮಿಸಲು ನಿರ್ಧರಿಸಿತು. ಗಂಭೀರ್ ನೇತೃತ್ವದಲ್ಲಿ ಭಾರತ ಏಕದಿನ ಮತ್ತು ಟಿ20ಐಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಟೆಸ್ಟ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ.

'ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾದರೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ವಿಭಿನ್ನ ತಂಡಗಳು ಮತ್ತು ಸ್ವರೂಪಗಳಿಗೆ ವಿಭಿನ್ನ ಆಟಗಾರರಿದ್ದಾರೆ. ನಾವು ಎಲ್ಲ ಸ್ವರೂಪಗಳಿಗೆ ಪ್ರತ್ಯೇಕ ತರಬೇತುದಾರರನ್ನು ಹೊಂದಲು ಸಾಧ್ಯವಾದರೆ, ಅದು ಉತ್ತಮ ಆಯ್ಕೆಯಾಗಿದೆ. ಇದು ತರಬೇತುದಾರರು ಸೇರಿದಂತೆ ಎಲ್ಲರಿಗೂ ಕೆಲಸದ ಹೊರೆ ಕಡಿಮೆ ಮಾಡುತ್ತದೆ. ಆದ್ದರಿಂದ ಅದು ಕೆಟ್ಟ ಆಯ್ಕೆಯಲ್ಲ' ಎಂದು ಹರ್ಭಜನ್ ಹೇಳಿದರು.

Harbhajan Singh
'ವಿರಾಟ್ ಅಂಕಲ್, ನೀವು ಯಾಕೆ ನಿವೃತ್ತಿ ಹೊಂದಿದ್ದೀರಿ?'; ಕೊಹ್ಲಿಗೆ ಹರ್ಭಜನ್ ಸಿಂಗ್ ಪುತ್ರಿ ಪತ್ರ!

ಇದಲ್ಲದೆ, ಸರಣಿಗೆ ತಯಾರಾಗಲು ತರಬೇತುದಾರರಿಗೂ ಸಮಯ ಬೇಕಾಗುತ್ತದೆ. ರೆಡ್ ಅಥವಾ ವೈಟ್-ಬಾಲ್ ಸ್ವರೂಪವನ್ನು ಲೆಕ್ಕಿಸದೆ, ಯಾವುದೇ ಸರಣಿಯನ್ನು ಯೋಜಿಸಲು ಮತ್ತು ತಯಾರಿ ಮಾಡಿಕೊಳ್ಳಲು ಕೋಚ್‌ಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದಲ್ಲದೆ, ಕುಟುಂಬದಂತಹ ಇತರ ಜವಾಬ್ದಾರಿಗಳನ್ನು ಹೊಂದಿರುವುದರಿಂದ ಕೋಚ್ ಮೇಲೆ ಹೆಚ್ಚು ಹೊರೆ ಹೊರಿಸಲು ಸಾಧ್ಯವಿಲ್ಲ ಎಂದು ಗಮನಸೆಳೆದರು.

'ನೀವು ವರ್ಷಪೂರ್ತಿ ಒಬ್ಬ ತರಬೇತುದಾರನ ಮೇಲೆ ಅವಲಂಭಿಸಿ, ಅವರಿಗೆ ಹೆಚ್ಚು ಕೆಲಸ ನೀಡಿದರೆ, ಅವರಿಗೂ ಕುಟುಂಬ ಮತ್ತು ಜವಾಬ್ದಾರಿಗಳಿವೆ. ಕುಟುಂಬದೊಂದಿಗೆ ನಿರಂತರವಾಗಿ ಪ್ರಯಾಣಿಸುವುದು ಸುಲಭವಲ್ಲ. ಹೌದು, ನೀವು ನನ್ನನ್ನು ಕೇಳಿದರೆ, ರೆಡ್ ಬಾಲ್ ಮತ್ತು ವೈಟ್ ಬಾಲ್ ಕೋಚ್ ಅನ್ನು ವಿಭಜಿಸುವುದು ಒಳ್ಳೆಯ ಕ್ರಮವಾಗಿದೆ' ಎಂದು ಹರ್ಭಜನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com