
ಅಹ್ಮದಾಬಾದ್: ಬಹು ನಿರೀಕ್ಷಿತ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ನಡುವೆ ಐಪಿಎಲ್ ಇತಿಹಾಸಗಳು ಮಾತ್ರ ಆರ್ ಸಿಬಿ ಪರ ನಿಂತಿವೆ.
ಹೌದು... ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದಾರೆ.
ಆರ್ ಸಿಬಿ ಪರ ಅಂಕಿಅಂಶ
ಇನ್ನು ಇಂದಿನ ಹೈವೋಲ್ಟೇದ್ ಪಂದ್ಯಕ್ಕೆ ಇಡೀ ಭಾರತ ಕುತೂಹಲದಿಂದ ಕಾಯುತ್ತಿದ್ದು, ಐಪಿಎಲ್ ಟೂರ್ನಿಯ ಇತಿಹಾಸ ಮತ್ತು ಅಂಕಿಅಂಶಗಳು ಮಾತ್ರ ಇದೀಗ ಆರ್ ಸಿಬಿ ಪರವಾಗಿದೆ.
ಚೇಸಿಂಗ್ ವೇಳೆ ಆರ್ ಸಿಬಿ ಗೆದ್ದೇ ಇಲ್ಲ
ಇನ್ನು ಕಳೆದ 18 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಪಂದ್ಯ ಸೇರಿದಂತೆ ಒಟ್ಟು 4 ಬಾರಿ ಫೈನಲ್ ಗೇರಿದ್ದು 2009, 2011, 2016 ರಲ್ಲಿ ಸೋಲು ಕಂಡಿತ್ತು. ಈ ಪೈಕಿ ನಾಲ್ಕೂ ಬಾರಿಯೂ ಚೇಸಿಂಗ್ ಮಾಡಿತ್ತು. ಆದರೆ ನಾಲ್ಕೂ ಬಾರಿಯೂ ಸೋತಿತ್ತು. ಆದರೆ ಈ ಬಾರಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಪಂಜಾಬ್ ತಂಡ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ.
RCB in IPL Finals
2009 IPL - Lost While Chasing
2011 IPL - Lost While Chasing
2016 IPL - Lost While Chasing
2025 IPL - Batting 1st Today*
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ದಾಖಲೆ
ಇನ್ನು ಐಪಿಎಲ್ ಇತಿಹಾಸದಲ್ಲೇ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ತಂಡ ಸೋಲು-ಗೆಲುವು ಸರಿಸಮನಾದ ದಾಖಲೆ ಹೊಂದಿದ್ದು, ಈ ಕ್ರೀಡಾಂಗಣದಲ್ಲಿ ಪಂಜಾಬ್ ಒಟ್ಟು 7 ಪಂದ್ಯಗಳನ್ನಾಡಿದ್ದು ಈ ಪೈಕಿ 4ರಲ್ಲಿ ಗೆಲುವು ಮತ್ತು 3ರಲ್ಲಿ ಸೋಲು ಕೊಂಡಿದೆ. ಈ ಮೈದಾನದಲ್ಲಿ ಪಂಜಾಬ್ ನ ಅತ್ಯಂತ ಕಡಿಮೆ ಮೊತ್ತ ಎಂದರೆ ಅದು 123 ರನ್ ಗಳಾಗಿದ್ದು, ಅಂತೆಯೇ ಗರಿಷ್ಠ ಸ್ಕೋರ್ ಎಂದರೆ ಅದು 243 ರನ್ ಗಳಾಗಿವೆ.
ಅಂತೆಯೇ ಹಾಲಿ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಈ ಕ್ರೀಡಾಂಗಣದಲ್ಲಿ 2 ಬಾರಿ ಪಂದ್ಯಗಳನ್ನಾಡಿದ್ದು ಎರಡೂ ಪಂದ್ಯಗಳಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮಿದೆ.
PBKS' record at Narendra Modi Stadium:
Matches: 7
Won: 4
Lost: 3
Lowest score: 123
Highest score: 243
- PBKS have stepped onto this venue twice this season and emerged victorious on both occasions.
Advertisement