PBKS Won the Toss, Elected To Bowl First against RCB
ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ

IPL 2025 Final: RCB ವಿರುದ್ಧ ಟಾಸ್ ಗೆದ್ದ PBKS ಫೀಲ್ಡಿಂಗ್ ಆಯ್ಕೆ; ಫೈನಲ್ ರೀತಿ ಆಡುತ್ತೇವೆ ಎಂದ Shreyas Iyer

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
Published on

ಅಹ್ಮದಾಬಾದ್: ಬಹು ನಿರೀಕ್ಷಿತ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಹೇಳಿದ್ದೇನು?

ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ನನ್ನ ಮನಸ್ಸು ಮತ್ತು ದೇಹಕ್ಕೆ ಸಕಾರಾತ್ಮಕ ಸೂಚನೆಗಳನ್ನು ನೀಡಲು ಮಾತ್ರ ಬಯಸುತ್ತೇನೆ. ಇದು ಅದ್ಭುತ ದಿನ. ಜನಸಂದಣಿ ಉತ್ಸಾಹಭರಿತವಾಗಿದೆ. ನಾವು ಮಾಡಬೇಕಾಗಿರುವುದು ಇಲ್ಲಿಗೆ ಬಂದು ಪ್ರೀತಿಸುವುದು. ಹುಡುಗರು ಅದ್ಭುತ ಮನಸ್ಥಿತಿಯಲ್ಲಿದ್ದಾರೆ. ತಂಡದ ಸಭೆಯಲ್ಲಿ ನಾವು ಮಾತನಾಡಿದ್ದು ನೀವು ಹೆಚ್ಚು ಶಾಂತವಾಗಿದ್ದರೆ ಉತ್ತಮ. ಇದು ಕೇವಲ ಮತ್ತೊಂದು ಆಟದಂತೆ ಎಂದು ನಾನು ಹೇಳುವುದಿಲ್ಲ. ಇದು ಫೈನಲ್ ಮತ್ತು ನಾವು ಫೈನಲ್‌ನಂತೆ ಆಡಲಿದ್ದೇವೆ ಎಂದರು.

ಆರ್ ಸಿಬಿ ನಾಯಕನ ಮಾತು

ನಾವು ಕೂಡ ಬೌಲಿಂಗ್ ಮಾಡಬೇಕು ಅಂದುಕೊಂಡಿದ್ದೆವು. ಆದರೆ ಈಗ ಬ್ಯಾಟಿಂಗ್ ಮಾಡಬೇಕಿದೆ. ಪಿಚ್ ಕಠಿಣವಾಗಿ ಕಾಣುತ್ತದೆ, ಉತ್ತಮ ಸ್ಕೋರ್ ಗಳಿಸಲು ಮತ್ತು ಅವರನ್ನು ಒತ್ತಡಕ್ಕೆ ಒಳಪಡಿಸಲು ಪ್ರಯತ್ನಿಸುತ್ತೇವೆ. ಇಲ್ಲಿಯವರೆಗೆ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಇದು ನಮಗೆ ಮತ್ತೊಂದು ಪಂದ್ಯ. ಇದು ಒಂದು ದೊಡ್ಡ ಹಂತ. ಆದರೆ ನಾನು ಹೇಳಿದಂತೆ ಇದು ನಮಗೆ ಮತ್ತೊಂದು ಅವೇ ಪಂದ್ಯ. ಈ ಹಿಂದೆ ಆಡಿದ ಅದೇ ತಂಡವನ್ನೇ ಮತ್ತೆ ಕಣಕ್ಕಿಳಿಸುತ್ತಿದ್ದೇವೆ. ಪಿಚ್ ಚೆನ್ನಾಗಿ ಕಾಣುತ್ತಿದೆ. ಇದು ಸಮತಟ್ಟಾದ ಟ್ರ್ಯಾಕ್ ಎಂದು ನಾನು ಭಾವಿಸುತ್ತೇನೆ, ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣವಾಗಿದೆ ಎಂದು ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಹೇಳಿದರು.

PBKS Won the Toss, Elected To Bowl First against RCB
IPL 2025 Final: 'ಮುಖ ತೋರಿಸ್ಬೇಡ ನೀನು..'; Shashank Singh ವಿರುದ್ಧ Shreyas Iyer ಆಕ್ರೋಶ, ಆಗಿದ್ದೇನು?

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com