IPL 2025 Final: ಮಗುವಿಗೆ ಜನ್ಮ ನೀಡಿದ ಮಡದಿ, 6817 KM ಪಯಣ, ಪತ್ನಿ-ಮಗು ನೋಡಿ ಮಧ್ಯರಾತ್ರಿ ತಂಡ ಸೇರಿದ RCB ಸ್ಟಾರ್ Phil Salt!
ಅಹ್ಮದಾಬಾದ್: 9 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL 2025) ಫೈನಲ್ ಪಂದ್ಯವನ್ನಾಡುತ್ತಿದ್ದು, ತಂಡದ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ತಂಡಕ್ಕೆ ಮತ್ತೆ ತಮ್ಮ ನಿಯತ್ತು ತೋರಿಸಿದ್ದಾರೆ.
ಹೌದು.. ಐಪಿಎಲ್ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿರುವ ಆರ್ ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಲಭ್ಯತೆ ಕುರಿತು ಆತಂಕ ಇತ್ತು.
ಲಂಡನ್ ನಲ್ಲಿ ಫಿಲ್ ಸಾಲ್ಟ್ ಪತ್ನಿ ಮಗುವಿಗೆ ಜನ್ಮ ನೀಡಿದ್ದು ಹೀಗಾಗಿ ಪತ್ನಿ ಮತ್ತು ಮಗು ನೋಡಲು ಫಿಲ್ ಸಾಲ್ಟ್ ಲಂಡನ್ ಗೆ ತೆರಳಿಸಿದ್ದರು. ಇದೀಗ ಬರೊಬ್ಬರಿ 6817 KM ಪಯಣ ಮಾಡಿ ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಆರ್ ಸಿಬಿ ತಂಡ ಸೇರಿಕೊಂಡಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನವೇ ಸಂತಸದ ಸುದ್ದಿ
ಪಂಜಾಬ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನವೇ ಆರ್ ಸಿಬಿ ಸ್ಟಾರ್ ಬ್ಯಾಟರ್ ಸಂತಸದ ಸುದ್ದಿ ನೀಡಿದ್ದರು. ಅವರ ಮಡದಿ ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ಪತ್ನಿಯ ಕಾಣಲು ಫಿಲ್ ಸಾಲ್ಟ್ ತಮ್ಮ ದೇಶಕ್ಕೆ ಹೋಗಿದ್ದರು. ಹೀಗಾಗಿ ಅವರು ಆರ್‌ಸಿಬಿ ಪಾಳಯದಿಂದ ಕಾಣಿಸಿಕೊಂಡಿರಲಿಲ್ಲ.
ಆದರೆ ಇಂದು ಬೆಳಿಗ್ಗೆ ಸಾಲ್ಟ್ ಅಹಮದಾಬಾದ್‌ಗೆ ಬಂದಿಳಿದಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಮೇ 29 ರಂದು ನಡೆದಿದ್ದ ಕ್ವಾಲಿಫೈಯರ್ -1 ರಲ್ಲಿ ತಂಡದ ಪರ ಆಡಿದ್ದ ಸಾಲ್ಟ್, ಪಂದ್ಯ ಮುಗಿದ ನಂತರ ತಮ್ಮ ದೇಶಕ್ಕೆ ಮರಳಿದ್ದರು. ಹೀಗಾಗಿ ಆರ್‌ಸಿಬಿಯ ತರಬೇತಿ ಸೆಷನ್ನಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳಲ್ಲಿ ಕಳವಳವನ್ನು ಉಂಟುಮಾಡಿತ್ತು.
ಮಧ್ಯರಾತ್ರಿಯೇ ಬಂದು ಅಭಿಮಾನಿಗಳ ಆತಂಕ ದೂರ ಮಾಡಿದ ಸಾಲ್ಟ್
ಫಿಲ್ ಸಾಲ್ಟ್ ತಮ್ಮ ಪತ್ನಿ ಮಗುವನ್ನು ನೋಡಿ ಬರೊಬ್ಬರಿ 6817 KM ಪ್ರಯಾಣ ಮಾಡಿ ಅಹ್ಮದಾಬಾದ್ ಗೆ ಬಂದಿಳಿದಿದ್ದಾರೆ. ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ಸಾಲ್ಟ್ ತಂಡ ಸೇರಿಕೊಂಡಿದ್ದಾರೆ. ಆ ಮೂಲಕ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಈ ಬದ್ಧತೆ ಮತ್ತು ಕ್ರೀಡಾ ಸ್ಫೂರ್ತಿ ಎಲ್ಲರ ಹೃದಯ ಗೆದ್ದಿದೆ.