ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಯುವ ಪಡೆ ಅಭ್ಯಾಸ ಆರಂಭ!
ಲಂಡನ್: ಜೂನ್ 20 ರಂದು ಲೀಡ್ಸ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಮುಂಚಿತವಾಗಿ, ಲಾರ್ಡ್ಸ್‌ನಲ್ಲಿ ಭಾರತವು ಕಠಿಣ ಅಭ್ಯಾಸವನ್ನು ಆರಂಭಿಸಿದೆ.
ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅರ್ಶದೀಪ್ ಸಿಂಗ್ ಅವರನ್ನೊಳಗೊಂಡ ವೇಗಿಗಳು, ಹೊಸ ನಾಯಕ ಶುಭಮನ್ ಗಿಲ್, ರಿಷಭ್ ಪಂತ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು.
ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಶುಭಮನ್ ಗಿಲ್ ಅವರನ್ನು ಭಾರತದ 37ನೇ ಟೆಸ್ಟ್ ನಾಯಕನನ್ನಾಗಿ ನೇಮಿಸಲಾಯಿತು.
ಹೆಚ್ಚಾಗಿ ಯುವ ಮತ್ತು ಅನನುಭವಿ ಕ್ರಿಕೆಟ್ ತಂಡದ ನೇತೃತ್ವವನ್ನು ಗಿಲ್ ವಹಿಸಿದ್ದು, 2007ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.
ಸರಣಿಯು ಹೆಡಿಂಗ್ಲಿಯಲ್ಲಿ ಆರಂಭವಾಗಲಿದ್ದು, ನಂತರ ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ದಿ ಓವಲ್‌ನಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತವೆ.
ಮುಖ್ಯ ತಂಡದ ಕೆಲವರು ಸೇರಿದಂತೆ ಭಾರತ ಎ ಆಟಗಾರರು ಈಗಾಗಲೇ ಇಂಗ್ಲಿಷ್ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಸದ್ಯ, ನಾರ್ಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ