
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದ ಆಪ್ತ ಸ್ನೇಹಿತರು.. ಆದರೆ ಇವರಿಬ್ಬರ ನಡುವೆ ದೀರ್ಘಕಾಲದ ಬಿರುಕು ಉಂಟಾಗಿತ್ತು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಹೌದು.. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಾಗ ಚಿಕ್ಕಮಗುವಿನಂತೆ ಓಡಿದ್ದ ವಿರಾಟ್ ಕೊಹ್ಲಿ, ತನ್ನ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ರನ್ನು ತಬ್ಬಿ ಭಾವುಕರಾಗಿದ್ದರು.
ಈ ಕ್ಷಣವನ್ನು ವಿರಾಟ್ ಅಭಿಮಾನಿಗಳಾಗಲಿ, ಅಥವಾ ಎಬಿಡಿ ಅಭಿಮಾನಿಗಳಾಗಲಿ ಯಾರೂ ಮರೆಯಲು ಸಾಧ್ಯವಿಲ್ಲ.. ಭಾವನಾತ್ಮಕವಾಗಿ ಆ ಮಟ್ಟಿಗೆ ಈ ಇಬ್ಬರೂ ಆಟಗಾರರು ಆಪ್ತತೆ ಬೆಳೆಸಿಕೊಂಡಿದ್ದಾರೆ. ಆದರೆ ಇಂತಹ ಜೋಡಿ ತಿಂಗಳುಗಳ ಕಾಲ ಮಾತು ಬಿಟ್ಟದ್ದರು ಎಂದರೆ ನೀವು ನಂಬಲೇಬೇಕು.
ಈ ಮಾತನ್ನು ಸ್ವತಃ ಎಬಿ ಡಿವಿಲಿಯರ್ಸ್ ಬಹಿರಂಗ ಪಡಿಸಿದ್ದಾರೆ. ಕ್ರಿಕೆಟ್ ಡಾಟ್ ಕಾಮ್ ಜೊತೆ ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿರುವ ಎಬಿಡಿ ತಮ್ಮ ಸ್ನೇಹ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಎಬಿಡಿ ಜೊತೆ ವಿರಾಟ್ ಮಾತು ಬಿಟ್ಟಿದ್ದ ವಿಚಾರವನ್ನು ಎಬಿಡಿ ಬಹಿರಂಗ ಪಡಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಈ ಹಿಂದೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಸರಣಿಗೆ ಗೈರಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಆ ಸರಣಿಯಿಂದ ದೂರ ಉಳಿದು ಮನೆಯಲ್ಲೇ ಇರಲು ನಿರ್ಧರಿಸಿದ್ದರು. ಆದರೆ ಕೊಹ್ಲಿ ಅವರ ಈ ನಿರ್ಧಾರಕ್ಕೆ ಕಾರಣವೇನು ಎಂದು ತಿಳಿದಿರಲಿಲ್ಲ. ಆದರೆ ಇದೇ ಸಂದರ್ಭದಲ್ಲಿ ಲೈವ್ ನಲ್ಲಿ ಮಾತನಾಡಿದ್ದ ಎಬಿಡಿವಿಲಿಯರ್ಸ್ ಮಾತಿನ ಭರದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಬಹಿರಂಗ ಪಡಿಸಿದ್ದರು. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಬಳಿಕ ವಿಷಯದ ಗಂಭೀರತೆಯನ್ನು ಅರಿತ ಎಬಿಡಿ ಈ ಬಗ್ಗೆ ಸ್ಪಷ್ಟನೆ ನೀಡಿ ಅದು ಸತ್ಯವಲ್ಲ.. ನನ್ನಿಂದ ಪ್ರಮಾದ ಆಗಿದೆ.. ನಿಜವಲ್ಲದ ಸುದ್ದಿಯನ್ನು ಹಂಚಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಈ ಘಟನೆ ಬಳಿಕ ವಿರಾಟ್ ಕೊಹ್ಲಿ ಎಬಿಡಿ ಜೊತೆ ಮಾತು ಬಿಟ್ಟಿದ್ದರಂತೆ.
ಆಪ್ತ ಸ್ನೇಹಿತರ ಒಂದು ಮಾಡಿದ ಐಪಿಎಲ್
ಇನ್ನು ಇಂಗ್ಲೆಂಡ್ ಸರಣಿ ವೇಳೆ ಎಬಿಡಿ ಜೊತೆ ಮಾತು ಬಿಟ್ಟಿದ್ದ ಕೊಹ್ಲಿ ತಿಂಗಳುಗಳ ಕಾಲ ಅವರ ಜೊತೆ ಸಂಪರ್ಕ ಹೊಂದಿರಲಿಲ್ಲ. ಬಳಿಕ ಐಪಿಎಲ್ ಟೂರ್ನಿ ವೇಳೆ ಮತ್ತೆ ಈ ಜೋಡಿ ಪರಸ್ಪರ ಮಾತನಾಡಲು ಆರಂಭಿಸಿದರು ಎನ್ನಲಾಗಿದೆ.
ಈ ಬಗ್ಗೆ ಎಬಿಡಿ, 'ಕಳೆದ ಆರು ತಿಂಗಳಿನಿಂದ ಅವರು ನನ್ನೊಂದಿಗೆ ಸಂಪರ್ಕದಲ್ಲಿರಲಿಲ್ಲ. ಕೊಹ್ಲಿ ಕೆಲವು ತಿಂಗಳ ಹಿಂದಷ್ಟೇ ತಮ್ಮ ಜೊತೆ ಮತ್ತೆ ಮಾತನಾಡಲು ಪ್ರಾರಂಭಿಸಿದರು. ಥ್ಯಾಂಕ್ ಗಾಡ್.. ಅವರ 2ನೇ ಮಗುವಿನ ವಿಚಾರವಾಗಿ ನಾನು ಸ್ವಲ್ಪ ಆತುರ ಪಟ್ಟಿದ್ದೆ. ಆದರೆ ಕೊನೆಗೂ ಮತ್ತೆ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ನನಗೆ ತುಂಬಾ ನಿರಾಳವಾಯಿತು ಎಂದು ಹೇಳಿದ್ದಾರೆ.
ಅಂತೆಯೇ "ಕೊಹ್ಲಿ ಸ್ವಲ್ಪ ತೊಂದರೆ ಅನುಭವಿಸಿದ್ದರು ಮತ್ತು ನನ್ನಿಂದ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸಿದ್ದರು ಎಂದು ನಮಗೆಲ್ಲರಿಗೂ ತಿಳಿದಿದೆ. ನನ್ನ ಜೀವನದ ಕೆಲವು ಕ್ಷಣಗಳನ್ನು ನಾನು ಹೇಗೆ ದಾಟಿದೆ. ಆದ್ದರಿಂದ, ಅವರ ವಯಸ್ಸು, ಅವರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ, ಮತ್ತು ಯಾವಾಗಲೂ ತಂಡದಲ್ಲಿರುವುದರ ಚಲನಶೀಲತೆ, ಅದರ ರಾಜಕೀಯವನ್ನು ಪರಿಗಣಿಸಿ, ಅವರು ಯಾವ ರೀತಿಯ ಹಂತವನ್ನು ಎದುರಿಸುತ್ತಿದ್ದಾರೆಂದು ನನಗೆ ತಿಳಿದಿತ್ತು.
ನಿಮ್ಮ ಮೇಲೆ ಬಹಳಷ್ಟು ವಿಷಯಗಳು ಭಾರವಾಗಿರುತ್ತವೆ, ಮತ್ತು ನಾನು ಅವರನ್ನು ಪರದೆಯ ಮೇಲೆ ನೋಡುವಾಗ ನನಗೆ ಏನು ಅನಿಸಿತು ಮತ್ತು ನಾನು ಏನು ಯೋಚಿಸಿದೆ ಎಂಬುದನ್ನು ಅವರೊಂದಿಗೆ ಹೃದಯದಿಂದ ಹಂಚಿಕೊಂಡೆ. ಅವರು ಇನ್ನೂ ಕ್ರಿಕೆಟ್ ಆಡುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಮತ್ತು ಆ ನಿರ್ಧಾರವು ಹೃದಯದಿಂದ ಬರುತ್ತದೆ ಮತ್ತು ನಾನು ಅವರನ್ನು 100 ಪ್ರತಿಶತ ಬೆಂಬಲಿಸುತ್ತೇನೆ" ಎಂದು ಎಬಿಡಿ ಹೇಳಿದ್ದಾರೆ.
Advertisement