
ಚೆನ್ನೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಪಂದ್ಯಾವಳಿಗೆ ಟಿಕೆಟ್ ಮಾರಾಟವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ ಕೂಡ ಪ್ರಮುಖ ಟಿಕೆಟ್ ಮರುಮಾರಾಟ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಕಾಣಿಸಿಕೊಳ್ಳುತ್ತಿದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express Newspaper) ನಿನ್ನೆ ರಾತ್ರಿ ಮುದ್ರಣಕ್ಕೆ ಹೋಗುವ ಹೊತ್ತಿಗೆ ವಿಯಾಗೋಗೊ ವೆಬ್ ಸೈಟ್ ನೋಡಿದಾಗ, ಮಾರ್ಚ್ 23 ರಂದು ಚೆಪಾಕ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಂಡದ ಆರಂಭಿಕ ಪಂದ್ಯಕ್ಕೆ ಕೆಎಂಕೆ ಲೋವರ್ ಟಿಕೆಟ್‌ನ ಪ್ರಸ್ತುತ ಬೆಲೆ 1,23,593 ರೂಪಾಯಿ ಆಗಿದೆ.
ಟಿಕೆಟ್‌ಗಳನ್ನು 12 ಪ್ರೈಸ್ ಬ್ಯಾಂಡ್‌ಗಳಲ್ಲಿ ಪಟ್ಟಿ ಮಾಡಲಾಗಿದ್ದು, ಅತ್ಯಂತ ಅಗ್ಗದ ಬೆಲೆ 17,804 ರೂಪಾಯಿ ಆಗಿದೆ. ವಿಯಾಗೊಗೊ ವೆಬ್‌ಸೈಟ್ ಪ್ರಕಾರ, ಎರಡು ದಿನಗಳ ಹಿಂದೆ ಕೆಎಂಕೆ ಲೋವರ್ ಟಿಕೆಟ್ ನ್ನು 123,593 ರೂಪಾಯಿಗೆ ಪಡೆಯಲಾಯಿತು. ಇದೀಗ, ಮುಂಬೈ ವಿರುದ್ಧದ ಮಾರ್ಕ್ಯೂ ಪಂದ್ಯಕ್ಕೆ 84 ಟಿಕೆಟ್‌ಗಳು ಲಭ್ಯವಿದೆ.
ಸ್ಟ್ಯಾಂಡ್ ಟಿಕೆಟ್‌ಗಳು ಸಹ ಅದರ ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಉದಾಹರಣೆಗೆ, ಕಳೆದ ಸೀಸನ್ ನಲ್ಲಿ ಡಿ ಕಡಿಮೆ ಬೆಲೆ 1700 ರೂಪಾಯಿಗಳಾಗಿದ್ದರೆ, ಅದೇ ಮುಂಬೈ ಪಂದ್ಯಕ್ಕೆ 20,600 ರೂಪಾಯಿಗೆ ತಲುಪಿದೆ.
ಪ್ರಸ್ತುತ, ಏಳು ತವರು ಪಂದ್ಯಗಳಲ್ಲಿ ಆರು ಪಂದ್ಯಗಳಿಗೆ ಟಿಕೆಟ್‌ಗಳು ವಿಯಾಗೋಗೋದಲ್ಲಿ ಲಭ್ಯವಿದೆ.
ಮುಂಬೈ,ದೆಹಲಿ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಟಿಕೆಟ್‌ಗಳು ಲಭ್ಯವಿದೆ. ಮಾರ್ಚ್ 22 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ನಡುವಿನ ಸೀಸನ್ ಉದ್ಘಾಟನಾ ಪಂದ್ಯಕ್ಕೆ ಯಾವುದೇ ಟಿಕೆಟ್‌ಗಳು ಲಭ್ಯವಿಲ್ಲ. ಒಟ್ಟಾರೆಯಾಗಿ, 50 ಕ್ಕೂ ಹೆಚ್ಚು ಪಂದ್ಯಗಳಿಗೆ ಟಿಕೆಟ್‌ಗಳು ಲಭ್ಯವಿದೆ.
ಮರುಮಾರಾಟ ಮಾಡುವ ವೆಬ್‌ಸೈಟ್‌ಗಳಿಂದ ಖರೀದಿಸಿದ ಟಿಕೆಟ್‌ಗಳ ಬಗ್ಗೆ ಖರೀದಿದಾರರು ಅಪಾಯಗಳ ಬಗ್ಗೆ ತಿಳಿದಿರಬೇಕು. ಅಧಿಕೃತ ಟಿಕೆಟ್ ಏಜೆನ್ಸಿಗಳಿಂದ ಖರೀದಿಸಿದ ಟಿಕೆಟ್‌ಗಳ ಹಿಂಭಾಗದಲ್ಲಿ ಸಾಮಾನ್ಯವಾಗಿ ಎಚ್ಚರಿಕೆಗಳನ್ನು ಜನರಿಗೆ ನೀಡಲಾಗುತ್ತದೆ.
Advertisement