'ಆಕ್ರಮಣಶೀಲತೆ ಕಡಿಮೆಯಾಗಿದೆ ಎಂದರೆ ಸ್ಪರ್ಧಾತ್ಮಕತೆ ಕಡಿಮೆಯಾಗಿದೆ ಅಂತಲ್ಲ..': ಟೀಕಾಕಾರರಿಗೆ Virat Kohli ಛಡಿ ಏಟು!

ಜನರು ಸಂತೋಷವಾಗಿಲ್ಲ ಎಂದು ತಿಳಿಯುತ್ತಿದೆ. ನಿಜ ಹೇಳಬೇಕೆಂದರೆ, ಏನು ಮಾಡಬೇಕೆಂದು ನನಗೂ ತಿಳಿದಿಲ್ಲ. ಮೊದಲು, ನನ್ನ ಆಕ್ರಮಣಶೀಲತೆ ಒಂದು ಸಮಸ್ಯೆಯಾಗಿತ್ತು, ಈಗ...
Team India Run Machine Virat Kohli
ವಿರಾಟ್ ಕೊಹ್ಲಿ
Updated on

ನವದೆಹಲಿ: ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೆ ತಮ್ಮ ಟೀಕಾಕಾರರಿಗೆ ಛಡಿ ಏಟು ಬೀಸಿದ್ದು, 'ನನ್ನ ಶಾಂತ ಸ್ವಭಾವ ಕೆಲವರ ಅಹಾರವಾಗುತ್ತಿದೆ' ಎಂದು ಖಾರವಾಗಿ ಹೇಳಿದ್ದಾರೆ.

2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ವಿರಾಟ್ ಕೊಹ್ಲಿ (Virat Kohli), 'ನನ್ನ ಅಗ್ರೆಷನ್ ಸ್ವಾಭಾವಿಕವಾಗಿ ಮತ್ತೆ ಕಡಿಮೆಯಾಗುತ್ತಿದೆ..

ಇದರಿಂದ ಜನರು ಸಂತೋಷವಾಗಿಲ್ಲ ಎಂದು ತಿಳಿಯುತ್ತಿದೆ. ನಿಜ ಹೇಳಬೇಕೆಂದರೆ, ಏನು ಮಾಡಬೇಕೆಂದು ನನಗೂ ತಿಳಿದಿಲ್ಲ. ಮೊದಲು, ನನ್ನ ಆಕ್ರಮಣಶೀಲತೆ ಒಂದು ಸಮಸ್ಯೆಯಾಗಿತ್ತು, ಈಗ ನನ್ನ ಶಾಂತತೆಯು ಒಂದು ಸಮಸ್ಯೆಯಾಗಿದೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ , ಅದಕ್ಕಾಗಿಯೇ ನಾನು ಅದರ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಎಂದು ಹೇಳಿದ್ದಾರೆ.

"ನಾನು ಯಾವ ರೀತಿಯ ವ್ಯಕ್ತಿ, ನನ್ನ ವ್ಯಕ್ತಿತ್ವ ಎಂತಹುದು..!, ಹೌದು, ನಾನು ಅದನ್ನು ಅತಿರೇಕಕ್ಕೆ ತಳ್ಳುವ ಪ್ರವೃತ್ತಿಯನ್ನು ಹೊಂದಿದ್ದೇನೆ. ನಾನು ಅದರಿಂದ ಎಂದಿಗೂ ದೂರ ಸರಿದಿಲ್ಲ. ಆದರೆ ಆರಂಭಿಕ ಹಂತಗಳಲ್ಲಿ ಅದು ಸರಿ, ಕೆಲವೊಮ್ಮೆ ಅದು ಸರಿಯಾದ ಉದ್ದೇಶದಿಂದ ಹೊರಬಂದಿಲ್ಲದಿರಬಹುದು, ಆದರೆ ಹೆಚ್ಚಾಗಿ, ಆರಂಭಿಕ ಹಂತವು ಕಾಳಜಿಯಿಂದ ಕೂಡಿರುತ್ತದೆ.

Team India Run Machine Virat Kohli
IPL 2025: RCB ಕಾರ್ಯಕ್ರಮದ ವೇಳೆ ವಿರಾಟ್ ಕೊಹ್ಲಿ ಸಿಟ್ಟು!

ಇದೆಲ್ಲವೂ ನನ್ನ ತಂಡವನ್ನು ಗೆಲ್ಲಲು ಸಹಾಯ ಮಾಡುವ ಘಟನೆಯಾಗಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿಕೆಟ್ ಪಡೆದಾಗ ನಾನು ಮಾಡುವ ಆಚರಣೆಯನ್ನು ನೀವು ನೋಡುತ್ತೀರಿ. ಇದು ನಿಖರವಾಗಿ ಆಗಬೇಕಾದದ್ದು ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಅದನ್ನು ಹಾಗೆಯೇ ಪ್ರತಿನಿಧಿಸುತ್ತೇನೆ ಎಂದು ಕೊಹ್ಲಿ ಹೇಳಿದರು.

ಆಕ್ರಮಣಶೀಲತೆ ಕಡಿಮೆಯಾಗಿದೆ ಎಂದರೆ ಸ್ಪರ್ಧಾತ್ಮಕತೆ ಕಡಿಮೆಯಾಗಿದೆ ಅಂತಲ್ಲ..

ಇದೇ ವೇಳೆ ತಮ್ಮ ವಿರುದ್ಧ ಟೀಕಾಕಾರರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿರುವ ಕೊಹ್ಲಿ, ಆಕ್ರಮಣಶೀಲತೆ ಕಡಿಮೆಯಾಗಿದೆ ಎಂದರೆ ಸ್ಪರ್ಧಾತ್ಮಕತೆ ಕಡಿಮೆಯಾಗಿದೆ ಅಂತ ಕೆಲವರು ಭಾವಿಸಿದಂತಿದೆ. ಮೈದಾನದಲ್ಲಿರುವ ವ್ಯಕ್ತಿತ್ವ ಯಾವಾಗಲೂ ಸರಿಯಾದ ಸ್ಥಳದಿಂದ ಬರುತ್ತದೆ ಮತ್ತು ನಾನು ಪ್ರಸ್ತುತ ಸ್ವಾಭಾವಿಕವಾಗಿ ಕುಗ್ಗುತ್ತಿದ್ದೇನೆ ಎಂದು ಕೆಲವರು ಭಾವಿಸಿದಂತಿದೆ. ನನ್ನ ಸ್ಪರ್ಧಾತ್ಮಕತೆ ಕಡಿಮೆಯಾಗಿಲ್ಲ.

Team India Run Machine Virat Kohli
Champions Trophy 2025: ಒಂದೇ ಒಂದು ಫೋಟೋದಿಂದ Virat Kohli ದಾಖಲೆಯನ್ನೇ ಪುಡಿಗಟ್ಟಿದ Hardik Pandya!

ಮೊದಲೆಲ್ಲಾ ನನ್ನ ಆಕ್ರಮಣಶೀಲತೆ ಹೆಚ್ಚು ಸಮಸ್ಯೆಯಾಗುತ್ತಿತ್ತು. ಈಗ ನನ್ನ ಶಾಂತ ಸ್ವಭಾವ ಕೆಲವರ ಆಹಾರವಾಗುತ್ತಿದೆ. ನಿಮ್ಮ ಮನಸ್ಸಿನಲ್ಲಿ ಆಕ್ರಮಣಕಾರಿಯಾಗಿ ವರ್ತಿಸಬಹುದು, ಆದರೆ ನೀವು ಅದನ್ನು ಆಗಾಗ ಹತಾಶೆಯಿಂದ ವ್ಯಕ್ತಪಡಿಸುವ ಅಗತ್ಯವಿಲ್ಲ, ಅದು ನನ್ನಲ್ಲಿದೆ - ನನ್ನ ಪ್ರಕಾರ, ಇತ್ತೀಚಿನ ದಿನಗಳಲ್ಲಿಯೂ ಸಹ, ಅದು ದೊಡ್ಡ ವಿಷಯವಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ವಿಷಯಗಳ ಬಗ್ಗೆ ನನಗೆ ಒಳ್ಳೆಯ ಭಾವನೆ ಕೂಡ ಇಲ್ಲ, ಎಂದು ಕೊಹ್ಲಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com