KL Rahul, ಅಥಿಯಾ ಶೆಟ್ಟಿ ಜೋಡಿಗೆ ಹೆಣ್ಣು ಮಗು ಜನನ, ಶುಭ ಕೋರಿದ ಗಣ್ಯರು!
ಮುಂಬೈ: ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸ್ಟಾರ್ ದಂಪತಿಗಳಿಗೆ ಗಣ್ಯರು ಶುಭ ಕೋರಿದ್ದಾರೆ.
ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಸಿಹಿ ಸುದ್ದಿಯನ್ನು ಸೆಲೆಬ್ರಿಟಿ ದಂಪತಿ ಸೋಮವಾರ, ಮಾರ್ಚ್ 24 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ.
"ಹೆಣ್ಣು ಮಗು ಜನಿಸಿದೆ" ಎಂದು ದಂಪತಿಗಳು ಎರಡು ಹಂಸಗಳ ವರ್ಣಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಈ ತಾರಾ ಜೋಡಿಗೆ ಇದು ಮೊದಲ ಮಗುವಾಗಿದೆ.
ಗಣ್ಯರಿಂದ ಶುಭಾಶಯ
ಇನ್ನು ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜೋಡಿಗೆ ಬಾಲಿವುಡ್ ಸ್ಟಾರ್ ನಟರು ಶುಭ ಕೋರಿದ್ದು, ನಟಿಯರಾದ ಕಿಯಾರ ಅಡ್ವಾಣಿ, ಶನಯಾ ಕಪೂರ್, ನಟ ಅರ್ಜುನ್ ಕಪೂರ್, ಟೈಗರ್ ಶ್ರಾಫ್ ಶುಭ ಕೋರಿದ್ದಾರೆ.
2023ರ ಜನವರಿಯಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಮದುವೆಯಾಗಿದ್ದರು. ಬಳಿಕ ನವೆಂಬರ್ 2024 ರಲ್ಲಿ, ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮೊದಲ ಮಗುವಿನ ಘೋಷಣೆ ಮಾಡಿದ್ದರು.