RCBians wearing Special Jersey against CSK Fans
ಆರ್ ಸಿಬಿ ಅಭಿಮಾನಿಗಳ ವಿಶೇಷ ಜೆರ್ಸಿ

IPL 2025: CSK ಅಭಿಮಾನಿಗಳ lollipop ಗೆ ತಿರುಗೇಟು; ಚಿನ್ನಸ್ವಾಮಿಯಲ್ಲಿ RCB ಫ್ಯಾನ್ಸ್ ವಿಶೇಷ jersey ವೈರಲ್!

2016 ಮತ್ತು 2017ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು.
Published on

ಬೆಂಗಳೂರು: ಒಂದೂ ಬಾರಿ ಐಪಿಎಲ್ ಕಪ್ ಗೆದ್ದಿಲ್ಲ ಎಂದು RCBಯನ್ನು ಕೆಣಕಿ 'ಈ ಸಲ ಕಪ್ lolipop' ಎಂದು ಕೆಣಕುತ್ತಿದ್ದ CSK ಅಭಿಮಾನಿಗಳಿಗೆ ಭರ್ಜರಿ ತಿರುಗೇಟು ನೀಡಲು ಮುಂದಾಗಿರುವ ಆರ್ ಸಿಬಿ ಅಭಿಮಾನಿಗಳು ಇಂದಿನ ಪಂದ್ಯಕ್ಕೆ ವಿಶೇಷ ಜೆರ್ಸಿಯನ್ನೇ ಸಿದ್ಧ ಮಾಡಿಕೊಂಡು ಬಂದಿದ್ದಾರೆ.

ಹೌದು.. ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಹಣಾಹಣಿ ನಡೆಯುತ್ತಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಧೋನಿ ಪಡೆಗೆ ಇದು ಕೇವಲ ಸಾಮಾನ್ಯ ಪಂದ್ಯವಾಗಿದ್ದು, ಆರ್ ಸಿಬಿ ಪಾಲಿಗೆ ಇಂದಿನ ಪಂದ್ಯ ಮುಖ್ಯವಾಗಿದೆ.

ಏಕೆಂದರೆ ಪ್ಲೇಆಫ್ ಗೇರುವ ನಾಲ್ಕು ತಂಡಗಳ ಪೈಕಿ ಸ್ಥಾನ ಪಡೆಯಲು ಆರ್ ಸಿಬಿಗೆ ಇನ್ನೂ 2 ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಹೀಗಾಗಿ ಇಂದಿನ ಪಂದ್ಯವನ್ನು ಭಾರಿ ಅಂತಕದಲ್ಲಿ ಗೆದ್ದರೆ ಆರ್ ಸಿಬಿ ಗೆ ಬೇಕಾದ ಗೆಲುವಿನೊಂದಿಗೆ ನೆಟ್ ರೇಟ್ ಕೂಡ ಉತ್ತಮವಾಗುತ್ತದೆ. ಪ್ರಸ್ತುತ 10 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

RCBians wearing Special Jersey against CSK Fans
IPL 2025: CSK ವಿರುದ್ಧ RCB ಪಂದ್ಯ; 5 ದಾಖಲೆಗಳ ಹೊಸ್ತಿಲಲ್ಲಿ Virat Kohli

ಲಾಲಿಪಪ್ ಎಂದ ಸಿಎಸ್ ಕೆ ಅಭಿಮಾನಿಗಳಿಗೆ ಆರ್ ಸಿಬಿ ಅಭಿಮಾನಿಗಳ ಜೆರ್ಸಿ ತಿರುಗೇಟು

ಇನ್ನು ಈ ಹಿಂದೆ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಲಾಲಿಪಪ್ ಹಿಡಿದು ಆರ್ ಸಿಬಿ ಅಭಿಮಾನಿಗಳ ಕೆಣಕಿದ್ದ ಸಿಎಸ್ ಕೆ ಅಭಿಮಾನಿಗಳಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರ್ ಸಿಬಿ ಅಭಿಮಾನಿಗಳು ವಿಶೇಷ ಜೆರ್ಸಿಯೊಂದಿಗೆ ಆಗಮಿಸಿದ್ದಾರೆ. ಇದೇ ಜೆರ್ಸಿಗಳೊಂದಿಗೆ ಮೈದಾನ ಪ್ರವೇಶಿಸಿ ಅಲ್ಲಿ ಸಿಎಸ್ ಕೆ ಅಭಿಮಾನಿಗಳಿಗೆ ತಿರುಗೇಟು ನೀಡಲು ಅಭಿಮಾನಿಗಳು ಮುಂದಾಗಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಬ್ಯಾನ್ ಆಗಿದ್ದ ಚೆನ್ನೈ ತಂಡ

2016 ಮತ್ತು 2017ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಇದೀಗ ಇದೇ ಬ್ಯಾನ್ ಜೆರ್ಸಿಯನ್ನು ಆರ್ ಸಿಬಿ ಅಭಿಮಾನಿಗಳು ಧರಿಸುವ ಮೂಲಕ ಮೈದಾನದಲ್ಲಿ ಚೆನ್ನೈ ಅಭಿಮಾನಿಗಳಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2016-2017 ಸಂಖ್ಯೆ ಇರುವ ಕೈದಿಗಳ ಸಮವಸ್ತ್ರದ ರೀತಿಯ ಜೆರ್ಸಿಯನ್ನು ಮಾರಾಟ ಮಾಡಲಾಗುತ್ತಿದ್ದು ಇದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಹಿಂದೆ ಚೆಪಾಕ್ ನಲ್ಲಿ ಲಾಲಿಪಪ್ ಮೂಲಕ ಆರ್ ಸಿಬಿ ಅಭಿಮಾನಿಗಳ ಕೆಣಕಿದ್ದ ಸಿಎಸ್ ಕೆ ಅಭಿಮಾನಿಗಳಿಗೆ ತಿರುಗೇಟು ನೀಡಲೆಂದೇ ಆರ್ ಸಿಬಿ ಅಭಿಮಾನಿಗಳು ಈ ರೀತಿ ವಿಶೇಷ ಜೆರ್ಸಿಯೊಂದಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com