IPL 2025: Ashish Nehra ವಿರುದ್ಧ BCCI ಕೆಂಡಾಮಂಡಲ; ಇತಿಹಾಸದಲ್ಲೇ ಮೊದಲು.. ಕೋಚ್ ಗೆ ಬಿತ್ತು ಭಾರಿ ದಂಡ!

ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 3 ವಿಕೆಟ್​ಗಳಿಂದ ಗುಜರಾತ್ ಟೈಟನ್ಸ್ (Gujarat Titans) ವಿರುದ್ಧ ಸೋಲು ಕಂಡಿತು.
Ashish Nehra- Hardik Pandya
ಆಶಿಶ್ ನೆಹ್ರಾ ಮತ್ತು ಹಾರ್ದಿಕ್ ಪಾಂಡ್ಯಾ
Updated on

ಮುಂಬೈ: ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಪಂದ್ಯಗಳು ದಿನೇ ದಿನೇ ರೋಚಕವಾಗುತ್ತಿವೆ. ಏತನ್ಮಧ್ಯೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದರ ಪ್ರಧಾನ ಕೋಚ್ ಗೆ ಬಿಸಿಸಿಐ ದಂಡ ಹೇರಿದೆ.

ಹೌದು.. ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 3 ವಿಕೆಟ್​ಗಳಿಂದ ಗುಜರಾತ್ ಟೈಟನ್ಸ್ (Gujarat Titans) ವಿರುದ್ಧ ಸೋಲು ಕಂಡಿತು.

2 ಬಾರಿ ಮಳೆಯಿಂದ ಸ್ಥಗಿತಗೊಂಡಿದ್ದ ಪಂದ್ಯ ಕೊನೆಗೆ 19 ಓವರ್​ಗೆ ಕಡಿತವಾಗಿ ಕೊನೆಯ ಎಸೆತದಲ್ಲಿ ರೋಚಕವಾಗಿ ಅಂತ್ಯಕಂಡಿತು. ಕೊನೆಯ ಓವರ್​​ನಲ್ಲಿ ಗೆಲ್ಲಲು ಅಗತ್ತವಿದ್ದ 15 ರನ್​ಗಳನ್ನ ಗುಜರಾತ್ ಟೈಟನ್ಸ್ ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು.

Ashish Nehra- Hardik Pandya
IPL 2025: ಟ್ರೋಫಿ ರೇಸ್ ನಲ್ಲಿರುವ RCBಗೆ ಆಘಾತ; Devdutt Padikkal ಟೂರ್ನಿಯಿಂದಲೇ ಔಟ್, ಕನ್ನಡಿಗ ಎಂಟ್ರಿ!

ಗೆಲುವಿನ ಸಂತಸದಲ್ಲಿದ್ದ ಜಿಟಿಗೆ ಆಘಾತ

ಗುಜರಾತ್ ಟೈಟನ್ಸ್‌ನ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರಿಗೂ ಐಪಿಎಲ್‌ನ ಶಿಸ್ತು ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಪಂದ್ಯ ಮಳೆಯಿಂದ ಸ್ಥಗಿತಗೊಂಡಿದ್ದ ವೇಳೆ ಮೈದಾನದ ಒಳಗೆ ಪ್ರವೇಶಿಸಿ ಅಂಪೈರ್​ಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.

ಮಳೆ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ಡಿಎಲ್ಎಸ್​ ನಿಯಮದ ಅನ್ವಯ 5 ರನ್​ ಹಿನ್ನಡೆ ಇದ್ದಿದ್ದರಿಂದ ಪಂದ್ಯವನ್ನು ಶುರುಮಾಡುವಂತೆ ಅಂಪೈರ್​ಗಳ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ಇದಕ್ಕಾಗಿ ಅವರಿಗೆ ಪಂದ್ಯದ ಶುಲ್ಕದ 25% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಯಿತು. ಐಪಿಎಲ್‌ನ ಆರ್ಟಿಕಲ್ 2.20 ರ ಅಡಿಯಲ್ಲಿ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ವರ್ತನೆಗಾಗಿ ನೆಹ್ರಾ ತಪ್ಪೊಪ್ಪಿಕೊಂಡು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

Ashish Nehra- Hardik Pandya
IPL 2025: CSK ವಿರುದ್ಧ ಸೋತ KKR ಗೆ ಪ್ಲೇಆಫ್ ಕನಸು ದೂರು!

ಮುಂಬೈ ನಾಯಕನಿಗೂ ದಂಡ

ಇದೇ ವೇಳೆ ಗೆಲ್ಲುವ ಪಂದ್ಯವನ್ನು ಸೋತು ನಿರಾಶೆಯಲ್ಲಿದ್ದ ಮುಂಬೈ ಇಂಡಿಯನ್ಸ್​ಗೆ ಸೋಲಿನ ಜೊತೆಗೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಎರಡನೇ ಬಾರಿಗೆ ನಿಧಾನಗತಿಯ ಓವರ್ ದರದ ಆರೋಪದಡಿ ದಂಡ ವಿಧಿಸಲಾಗಿದೆ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿದ್ದರಿಂದ, ಐಪಿಎಲ್‌ನ ಕನಿಷ್ಠ ಓವರ್ ದರದ ನಿಯಮ ಉಲ್ಲಂಘನೆಗೆ ಪಾಂಡ್ಯ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಯಿತು.

ಇದು ಈ ಋತುವಿನಲ್ಲಿ ತಂಡದ ಎರಡನೇ ಉಲ್ಲಂಘನೆಯಾಗಿದ್ದರಿಂದ, ತಂಡದ ಇತರ ಆಟಗಾರರಾದ ಇಂಪ್ಯಾಕ್ಟ್ ಪ್ಲೇಯರ್ ಮತ್ತು ಕನ್‌ಕಶನ್ ಸಬ್‌ಸ್ಟಿಟ್ಯೂಟ್ ಸೇರಿದಂತೆ ಪ್ರತಿಯೊಬ್ಬರಿಗೆ ಅವರ ಪಂದ್ಯದ ಶುಲ್ಕದ 25% ರಷ್ಟು ದಂಡ ವಿಧಿಸಲಾಯಿತು ಎಂದು ಐಪಿಎಲ್‌ನ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com