ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ದಾಖಲೆ ಮುರಿಯುವುದರಲ್ಲಿ ಕೊಹ್ಲಿ ವಿಫಲ! ಅಭಿಮಾನಿಗಳ ಕನಸು ಭಗ್ನ

ಇದರಲ್ಲಿ 30 ಶತಕ ಮತ್ತು 31 ಅರ್ಧಶತಕ ಹೊಡೆದಿದ್ದಾರೆ. ಅಂದರೆ ಸಚಿನ್ ಟೆಸ್ಟ್ ದಾಖಲೆಯನ್ನು ಮುರಿಯುವುದಕ್ಕೆ ಕೊಹ್ಲಿಗೆ ಇನ್ನೂ 6,691 ರನ್ ಮತ್ತು 22 ಶತಕಗಳ ಅಗತ್ಯವಿತ್ತು.
Virat Kohli
ವಿರಾಟ್ ಕೊಹ್ಲಿ
Updated on

ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸದೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದ ಅಭಿಮಾನಿಗಳ ಕನಸು ಭಗ್ನವಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು 200 ಪಂದ್ಯಗಳಿಂದ 15, 921 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 51 ಶತಕಗಳು ಮತ್ತು 68 ಅರ್ಧಶತಕಗಳಿವೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರು 123 ಪಂದ್ಯಗಳಿಂದ 9,230 ರನ್ ಗಳಿಸಿದ್ದಾರೆ.

ಇದರಲ್ಲಿ 30 ಶತಕ ಮತ್ತು 31 ಅರ್ಧಶತಕ ಹೊಡೆದಿದ್ದಾರೆ. ಅಂದರೆ ಸಚಿನ್ ಟೆಸ್ಟ್ ದಾಖಲೆಯನ್ನು ಮುರಿಯುವುದಕ್ಕೆ ಕೊಹ್ಲಿಗೆ ಇನ್ನೂ 6,691 ರನ್ ಮತ್ತು 22 ಶತಕಗಳ ಅಗತ್ಯವಿತ್ತು.

Virat Kohli
ಟೆಸ್ಟ್ ಕ್ರಿಕೆಟಿಗೆ ಕೊಹ್ಲಿ ನಿವೃತ್ತಿ: ಸಚಿನ್, ಸೆಹ್ವಾಗ್, ABD, ನೊವಾಕ್ ಜೊಕೊವಿಕ್, ರಿಷಿ ಸುನಾಕ್ ಮತ್ತಿತರ ಖ್ಯಾತನಾಮರ ಪ್ರತಿಕ್ರಿಯೆ ಹೀಗಿದೆ...?

ಕೊಹ್ಲಿ ಅವರು 10 ಸಾವಿರ ರನ್ ಪೂರೈಸಿದ ಬಳಿಕ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ನಿರೀಕ್ಷೆಯಿತ್ತು, ಆದರೆ ಅದು ಕೂಡಾ ವಿಫಲವಾಗಿದೆ. ಕಳೆದೆರಡು ವರ್ಷಗಳಲ್ಲಿ ಅವರ ಟೆಸ್ಟ್ ಅಂಕಿಅಂಶಗಳು ಸಾಧಾರಣವಾಗಿತ್ತು. ವಿರಾಟ್ ಕೊಹ್ಲಿ ಅವರ ಕೊನೆಯ ಟೆಸ್ಟ್ ಆಸ್ಟ್ರೇಲಿಯಾದ ಪ್ರವಾಸವಾಗಿತ್ತು.ಅದರಲ್ಲಿ ಅವರು ಕೇವಲ ಒಂದು ಶತಕ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com