'ಯಶಸ್ವಿಯಾದವರು ಮಾತ್ರ…': ಟೆಸ್ಟ್ ಕ್ರಿಕೆಟ್ ಗೆ Virat Kohli ನಿವೃತ್ತಿ ಕುರಿತು Anushka Sharma ಕ್ರಿಪ್ಟಿಕ್ ಪೋಸ್ಟ್!

ಇದೇ ಮೇ 12ರಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದರು.
Virat Kohli - Anushka Sharma
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
Updated on

ನವದೆಹಲಿ: ಟೆಸ್ಟ್ ಕ್ರಿಕೆಟ್ ಗೆ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಿಸಿರುವ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಕ್ರಿಪ್ಟಿಕ್ ಪೋಸ್ಟ್ ಮೂಲಕ ಪತಿಯ ನಿವೃತ್ತಿ ಕುರಿತು ಭಾವುಕರಾಗಿದ್ದಾರೆ.

ಹೌದು.. ಇದೇ ಮೇ 12ರಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದರು.

ಕೊಹ್ಲಿ ಇಷ್ಟು ಬೇಗ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸ್ವತಃ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು.

ಬಳಿಕ ವಿರಾಟ್ ಕೊಹ್ಲಿ ನಿವೃತ್ತಿ ವಿಚಾರವಾಗಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಅನುಷ್ಕಾ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

Virat Kohli - Anushka Sharma
'ಇಂಗ್ಲೆಂಡ್‌ನಲ್ಲಿ ಶತಕ ಗಳಿಸುವುದಾಗಿ ಹೇಳಿದ್ದರು ಆದರೆ...': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಕೋಚ್ ಆಘಾತ

Anushka Sharma ಕ್ರಿಪ್ಚಿಕ್ ಪೋಸ್ಟ್

ಇತ್ತೀಚೆಗೆ ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ವಿರುಷ್ಕಾ ದಂಪತಿ ವೃಂದಾವನಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದಿದ್ದರು. ಬಳಿಕ ಪ್ರೇಮಾನಂದ್ ಜಿ ಮಹಾರಾಜರ ಆಶೀರ್ವಾದ ಪಡೆದು ವಾಪಸ್ ಆಗಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವಿರಾಟ್ ಪತ್ನಿ ಅನುಷ್ಕಾ ಶರ್ಮಾರ ಪೋಸ್ಟ್ ವೊಂದು ವ್ಯಾಪಕ ಕುತೂಹಲ ಕೆರಳಿಸಿದೆ.

'ಯಶಸ್ವಿಯಾದವರು ಮಾತ್ರ…'

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅನುಷ್ಕಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಅನುಷ್ಕಾ ಶರ್ಮಾ ಕಿಂಗ್ ಕೊಹ್ಲಿಯ ಟೆಸ್ಟ್ ವೃತ್ತಿಜೀವನವನ್ನು ಹೊಗಳಿದ್ದಾರೆ.

ಇಷ್ಟಕ್ಕೂ ಅನುಷ್ಕಾ ಶರ್ಮಾ ಪೋಸ್ಟ್ ನಲ್ಲೇನಿದೆ ಎಂಬುದನ್ನು ನೋಡುವುದಾದರೆ, "ಅದಕ್ಕಾಗಿಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕಥೆ ಹೇಳಲು ಇರುವವರು ಮಾತ್ರ ಯಶಸ್ವಿಯಾಗುತ್ತಾರೆ. ಹುಲ್ಲು, ಒಣ, ತವರು ಅಥವಾ ವಿದೇಶದ ಪಿಚ್‌ನ ಪರಿಸ್ಥಿತಿಗಳನ್ನು ಲೆಕ್ಕಿಸದಷ್ಟು ಉದ್ದ ಮತ್ತು ಆಳವಾದ ಕಥೆ' ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಪತಿಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಬೇಗನೇ ಅಂತ್ಯವಾಯಿತೇ ಎಂಬ ದುಃಖ ಅನುಷ್ಕಾರ ಈ ಪೋಸ್ಟ್ ನಲ್ಲಿದೆ ಎಂದು ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.

ಅಂದಹಾಗೆ 2011ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಈ ವರೆಗೂ 123 ಪಂದ್ಯಗಳನ್ನಾಡಿದ್ದು, 210 ಇನ್ನಿಂಗ್ಸ್ ಗಳಲ್ಲಿ 46.9 ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಅಂತೆಯೇ ಅಜೇಯ 254 ರನ್ ಅವರ ವೈಯುಕ್ತಿಕ ಗರಿಷ್ಛ ಸ್ಕೋರ್ ಆಗಿದ್ದು, ಅಂತೆಯೇ 30 ಶತಕ ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com